ಕುಶಾಲನಗರ ಬಸವೇಶ್ವರ ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ 2025-26 ಸಾಲಿನ ಮಹಾಸಭೆ ಮತ್ತು 17ನೇ ವರ್ಷದ ಮಹಾಶಿವರಾತ್ರಿ ಪೂಜಾ ಕಾರ್‍ಯಕ್ರಮ ನಡೆದವು.
ಕುಶಾಲನಗರ: ಕುಶಾಲನಗರ ಬಸವೇಶ್ವರ ಬಡಾವಣೆಯ ಬಯಲು ಬಸವೇಶ್ವರ ದೇವಸ್ಥಾನ ಸಮಿತಿಯ 2025-26 ಸಾಲಿನ ಮಹಾಸಭೆ ಮತ್ತು 17ನೇ ವರ್ಷದ ಮಹಾಶಿವರಾತ್ರಿ ಪೂಜಾ ಕಾರ್‍ಯಕ್ರಮ ನಡೆದವು.
ದೇವಾಲಯ ಸಮಿತಿ ಅಧ್ಯಕ್ಷ ಸುದೀಪ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ ಮಹಾಸಭೆ, ನಂತರ ಮಹಾಶಿವರಾತ್ರಿ ಪೂಜಾ ಕಾರ್‍ಯಕ್ರಮ ನಡೆದವು.ಬಡಾವಣೆ ವ್ಯಾಪ್ತಿಯ ನಿವಾಸಿಗಳಿಗೆ ಅಂಗನವಾಡಿ ವಿದ್ಯಾರ್ಥಿಗಳಿಂದ ಕಾಲೇಜು ವಿದ್ಯಾರ್ಥಿಗಳವರೆಗೆ ಆಟೋಟ ಸ್ಪರ್ಧೆಗಳು ನಡೆದವು. ಚುಕ್ಕಿ ರಂಗೋಲಿ ಬಣ್ಣ ತುಂಬಿಸುವುದು, ಗಾಯನ ಮತ್ತು ನೃತ್ಯ, ಛದ್ಮ ವೇಷ ಕಾರ್‍ಯಕ್ರಮಗಳು ನಡೆದವು.ಬಹುಮಾನ ವಿತರಣಾ ಕಾರ್‍ಯಕ್ರಮದಲ್ಲಿ ಕುಶಾಲನಗರ ಸಂಚಾರಿ ಠಾಣೆ ಸಬ್ ಇನ್‌ಸ್ಪೆಕ್ಟರ್ ಗಣೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನರು ಮೊಬೈಲ್ ಫೋನ್ ದಾಳಿಗೆ ತುತ್ತಾಗಿ, ತಮ್ಮ ಬುದ್ಧಿಮತ್ತೆಯನ್ನು ಕಳೆದುಕೊಳ್ಳುತ್ತಿದ್ದಾರೆ, ತಮ್ಮಲ್ಲಿರುವ ಉತ್ತಮ ವಿಚಾರಗಳನ್ನು ದೂರವಿಡುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚು ಜವಾಬ್ದಾರಿಯುತವಾಗಿ ಹೊಣೆಗಾರಿಕೆಯಿಂದ ನಡೆದುಕೊಳ್ಳಲು ಮುಂದಾಗಬೇಕು ಎಂದರು.ಇದೇ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ 15 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.