ಸಾರಾಂಶ
ಭಾರತೀಯ ಸೈನಿಕರ ಕ್ಷೇಮ ಸುರಕ್ಷತೆ ಹಾಗೂ ವಿಜಯ ಪ್ರಾಪ್ತಿಗಾಗಿ ಮಹಾಸುದರ್ಶನ ಹೋಮ ಹಾಗೂ ಶ್ರೀ ಆಂಜನೇಯಸ್ವಾಮಿಯವರಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು.
ತಿಪಟೂರು : ತಿಪಟೂರು ನಗರದ ಎಂ.ಆರ್ ಲೇಔಟ್‌ನ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಭಾರತೀಯ ಸೈನಿಕರ ಕ್ಷೇಮ ಸುರಕ್ಷತೆ ಹಾಗೂ ವಿಜಯ ಪ್ರಾಪ್ತಿಗಾಗಿ ಮಹಾಸುದರ್ಶನ ಹೋಮ ಹಾಗೂ ಶ್ರೀ ಆಂಜನೇಯಸ್ವಾಮಿಯವರಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು.
ಮಹಾಸುದರ್ಶನ ಹೋಮ ನೆರವೇರಿಸಿದ ವೇದ ಬ್ರಹ್ಮಶ್ರೀ ಕೃಷ್ಣಮೂರ್ತಿ ಮಾತನಾಡಿ, ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯ ನಂತರ ದೇಶದಲ್ಲಿ ಬಿಗುವಿನ ವಾತವಾರಣ ಉಂಟಾಗಿದ್ದು, ನಮ್ಮ ಸೇನೆ ಶತೃಗಳ ಹುಟ್ಟಡಗಿಸಲು ಸಶಕ್ತವಾಗಿದೆ. ನಮ್ಮ ಸೈನಿಕರಿಗೆ ಶತೃ ಸಂಹಾರದ ಧೈರ್ಯ ಪ್ರಾಪ್ತಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿ ಮಹಾಸುದರ್ಶನ ಹೋಮ ನಡೆಸಲಾಗಿದೆ ಎಂದರು. ಮಹಾಸುದರ್ಶನ ಹೋಮದಲ್ಲಿ ನೂರಾರು ಜನ ಭಾಗವಹಿಸಿ ಪೂಜೆಸಲ್ಲಿಸಿದರು.