ಸಾರಾಂಶ
ದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎಂಆರ್‌ಪಿಎಲ್ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಟಿ. ಅವರು ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಗಾಂಧಿವಾದಿ, ವಕೀಲ ಅಮಿತ್ ಸಚ್ದೇವ ಮತ್ತು ಸಮಾಜಸೇವಕ ರಾಜಶ್ರೀ ಬಿರ್ಲಾ ಸ್ಥಾಪಿಸಿರುವ ಮಹಾತ್ಮ ಪ್ರಶಸ್ತಿಗೆ ಎಂಆರ್‌ಪಿಎಲ್ ಪಾತ್ರವಾಗಿದೆ.ಖಾಸಗಿ, ಸರ್ಕಾರಿ ಮತ್ತು ಅಭಿವೃದ್ಧಿ ಕ್ಷೇತ್ರದ ಕಂಪನಿಗಳು ಸಮಾಜದ ಮೇಲೆ ಬೀರುವ ಪರಿಣಾಮವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ. ಸುಸ್ಥಿರ ಪರಿಸರ ಸಂರಕ್ಷಣೆ ಮತ್ತು ಸಮುದಾಯದ ಹಿತರಕ್ಷಣೆಗೆ ಸಂಬಂಧಿಸಿ ಕಂಪನಿ ಕೈಗೊಂಡ ಕ್ರಮಗಳು ಪ್ರಶಸ್ತಿಗೆ ಆಯ್ಕೆಯಾಗಲು ಕಾರಣವಾಗಿದೆ.
ದೆಹಲಿಯ ಇಂಡಿಯಾ ಇಂಟರ್‌ನ್ಯಾಷನಲ್ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಎಂಆರ್‌ಪಿಎಲ್ ಪ್ರಧಾನ ವ್ಯವಸ್ಥಾಪಕ ಪ್ರಸನ್ನ ಕುಮಾರ್ ಟಿ. ಅವರು ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.ರಾಜ್ಯಸಭಾ ಸದಸ್ಯೆ ಸುಧಾಮೂರ್ತಿ, ಸೋನಲ್ ಮಾನ್‌ಸಿಂಗ್, ಎಂಆರ್‌ಪಿಎಲ್ ಸಹಾಯಕ ವ್ಯವಸ್ಥಾಪಕ ಅರ್ಪಿತ್ ಗೌರ್, ಎಂಜಿನಿಯರ್ ಅಂಜಲಿ ರಾಘವನ್ ಇದ್ದರು.
ಎಂಆರ್‌ಪಿಎಲ್ ಪರಿಸರ ರಕ್ಷಣೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮಾಲಿನ್ಯ ನಿಯಂತ್ರಣ, ಜೀವವೈವಿಧ್ಯ ಪ್ರಕ್ರಿಯೆ ಅಭಿವೃದ್ಧಿ, ಹಸಿರು ವಲಯಗಳ ನಿರ್ಮಾಣ, ಹಸಿರು ಉಳಿಸಲು ಹೂಡಿಕೆ ಇತ್ಯಾದಿ ಕಾರ್ಯಗಳ ಮೂಲಕ ಕಂಪನಿ ಗಮನ ಸೆಳೆದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.