ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ: ಜಿಲ್ಲಾಧಿಕಾರಿ ಶ್ರೀಧರ್‌

| Published : Oct 03 2025, 01:07 AM IST

ಗಾಂಧೀಜಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ: ಜಿಲ್ಲಾಧಿಕಾರಿ ಶ್ರೀಧರ್‌
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 121ನೇ ಜಯಂತಿ ಕಾರ್ಯಕ್ರಮ ನಡೆಯಿತು.

ಗದಗ: ಮಹಾತ್ಮ ಗಾಂಧೀಜಿಯವರು ಅಹಿಂಸೆ ಮತ್ತು ಸತ್ಯಾಗ್ರಹದ ಅಸ್ತ್ರದಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮರು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ತಿಳಿಸಿದರು.ಗುರುವಾರ ಜಿಲ್ಲಾಡಳಿತ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಮಹಾತ್ಮ ಗಾಂಧೀಜಿಯವರ 156ನೇ ಜಯಂತಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ 121ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಎಸ್ಪಿ ರೋಹನ್ ಜಗದೀಶ್, ಎಡಿಸಿ ಡಾ. ದುರಗೇಶ ಕೆ.ಆರ್., ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಸವರಾಜ ಕಡೇಮನಿ, ಅಶೋಕ ಮಂದಾಲಿ, ಡಿಡಿಪಿಐ ಆರ್.ಎಸ್. ಬುರುಡಿ, ಸರ್ಕಾರಿ ನೌಕರರ ಜಿಲ್ಲಾಧ್ಯಕ್ಷ ಡಾ. ಬಸವರಾಜ ಬಳ್ಳಾರಿ, ಚಂದ್ರಪ್ಪ ಬಾರಂಗಿ, ವಸಂತ ಮಡ್ಲೂರ, ಬಸನಗೌಡ ಕೋಟೂರ ಇದ್ದರು. ಡಾ. ವೆಂಕಟೇಶ ಅಲ್ಕೋಡ ಭಜನೆ ಗೀತೆಗಳನ್ನು ಪ್ರಸ್ತುತಪಡಿಸಿದರು. ಬಾಹುಬಲಿ ಜೈನರ್ ನಿರೂಪಿಸಿದರು.

ವಿಜೇತರಿಗೆ ಸನ್ಮಾನ: ಗಾಂಧೀಜಿಯವರ 156ನೇ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಸನ್ಮಾನಿಸಲಾಯಿತು. ಪ್ರೌಢಶಾಲಾ ವಿಭಾಗದಲ್ಲಿ ಸೌಮ್ಯ ದೇವೇಂದ್ರಪ್ಪ ಮೆಣಸಿನಕಾಯಿ ಪ್ರಥಮ, ಸಮೀಕ್ಷಾ ಮೇಗಳಮನಿ ದ್ವಿತೀಯ, ಸೌಮ್ಯ ಜಗ್ಗಲ ತೃತೀಯ. ಪಪೂ ವಿಭಾಗದಲ್ಲಿ ಐಶ್ವರ್ಯ ತಮ್ಮಣ್ಣವರ ಪ್ರಥಮ, ಸಾಹಿಲ್ ದ್ವಿತೀಯ, ಅಕ್ಷತಾ ಹೂಗಾರ ತೃತೀಯ. ಪದವಿ/ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಸಹನಾ ಹೆಬಸೂರ ಪ್ರಥಮ, ಕೃಷ್ಣಾ ದೂರಪ್ಪನವರ ದ್ವಿತೀಯ, ಕೀರ್ತಿ ಮಾನ್ವಿ ತೃತೀಯ, ಸುಮಿತ್ರಾ ಗವಾರಿ ಚತುರ್ಥ ಸ್ಥಾನ ಪಡೆದಿದ್ದು, ಇವರನ್ನು ಸನ್ಮಾನಿಸಲಾಯಿತು.

ಸಮೀಕ್ಷಾದಾರರಿಗೆ ಸನ್ಮಾನ: ರಾಜ್ಯದಲ್ಲಿ ಜರುಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸಿದ ತಾಲೂಕಿನ ಮಲ್ಲಮ್ಮ ಹೂಗಾರ, ಕಾಶಿಬಾಯಿ ಮದಿ, ಎಚ್.ಡಿ. ಕುರಿ, ಪ್ರದೀಪ ಚಿತ್ತರಗಿ, ಜಯಕುಮಾರ್, ಶ್ರೀಮತಿ ರಂಗಪ್ಪನವರ, ಹುಸೇನಬಾದಶಾಹ ಮಂಗಳೂರ ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.