ಕುಶಾಲನಗರ: ಮಹಾತ್ಮಾ ಗಾಂಧಿ ಕಾಲೇಜು ಎನ್ನೆಸ್ಸೆಸ್‌ ಶಿಬಿರ

| Published : Mar 30 2025, 03:04 AM IST

ಸಾರಾಂಶ

ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತಮ್ಮ ಜೀವನದ ಗುರಿ ಸಾಧಿಸುವ ಛಲ ಹೊಂದಬೇಕು ಎಂದು ಬಿ.ಪಿ. ಜೋಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ತಮ್ಮ ಜೀವನದ ಗುರಿ ಸಾಧಿಸುವ ಛಲ ಹೊಂದಬೇಕೆಂದು ಐಗೂರು ಗ್ರಾಮ ಪಂಚಾಯಿತಿ ಸದಸ್ಯ ಬಿ.ಪಿ. ಜೋಯಪ್ಪ ಹೇಳಿದರು.ಕುಶಾಲನಗರ ಸಮೀಪದ ಯಡವನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಕುಶಾಲನಗರ ಮಹಾತ್ಮಾ ಗಾಂಧಿ ಸ್ಮಾರಕ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2024 -25ರ ವಾರ್ಷಿಕ ವಿಶೇಷ ಶಿಬಿರದ ಎನ್‌ಎಸ್‌ಎಸ್‌ ಜ್ಯೋತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಶಿಕ್ಷಣದ ನಂತರ ಯುವ ಜನಾಂಗ ಸರ್ಕಾರಿ ಉದ್ಯೋಗ ಅವಲಂಬಿಸದೆ, ಗ್ರಾಮಾಂತರ ಪ್ರದೇಶಗಳಲ್ಲಿ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅನ್ನದಾತರಾಗಬೇಕೆಂದು ಆಶಯ ವ್ಯಕ್ತಪಡಿಸಿದರು.ಕಾವೇರಿ ಸ್ವಚ್ಛತಾ ಅಭಿಯಾನದ ಸಂಚಾಲಕ ಎಂ.ಎನ್. ಚಂದ್ರಮೋಹನ್, ವಿದ್ಯಾರ್ಥಿಗಳು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ ಎಂದರು. ಶಿಬಿರಕ್ಕೆ ಸಹಾಯ ಹಸ್ತ ನೀಡಿದ ಪ್ರಮುಖರಾದ ಪಿ.ಜಿ. ಜನಾರ್ದನ್, ಕೆ.ಎಂ. ಗಣೇಶ್, ಪಿ.ಜಿ. ಶಶಿಧರ್, ಹಾಲು ಉತ್ಪಾದಕರ ಸಹಕಾರ ಸಂಘ ಅಧ್ಯಕ್ಷೆ ಕಾಂಚನ, ಸಂದೇಶ್, ವರದರಾಜ ಅರಸ್, ಸುನಿಲ್, ಬಿ.ಪಿ. ಜೋಯಪ್ಪ, ಚಂದ್ರಮೋಹನ್ ಅವರನ್ನು ಸನ್ಮಾನಿಸಲಾಯಿತು.ಶಿಬಿರಾರ್ಥಿಗಳು ಮತ್ತು ಅತಿಥಿಗಳು ಸೇರಿ ಎನ್ಎಸ್ಎಸ್ ಜ್ಯೋತಿ ಹಚ್ಚಿದರು.ಮಹಾತ್ಮ ಗಾಂಧಿ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲ ಟಿ.ಎ. ಲಿಖಿತ, ಆಡಳಿತ ಅಧಿಕಾರಿ ಕೆ.ಎನ್. ನಂಜಪ್ಪ, ಕಚೇರಿ ಅಧೀಕ್ಷಕ ಮಹೇಶ್ ಅಮೀನ್, ಯೋಜನೆಯ ಶಿಬಿರ ಅಧಿಕಾರಿಗಳಾದ ಕೆ.ಆರ್. ಮಂಜೇಶ್, ಶರಣ್, ದೇವೇಂದ್ರ, ಉಪನ್ಯಾಸಕರು ಮತ್ತು ಶಿಬಿರಾರ್ಥಿಗಳು ಇದ್ದರು.