ಚಳವಳಿ ಮುಖಾಂತರ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿದ ಮಹಾತ್ಮ

| Published : Oct 03 2025, 01:07 AM IST

ಚಳವಳಿ ಮುಖಾಂತರ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿದ ಮಹಾತ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧೀಜಿ ನೀಡಿದ್ದ ಕರೆಯ ಮೇರೆಗೆ ಹಾಗೂ ಅವರಿಂದ ಪ್ರಭಾವಕ್ಕೆ ಒಳಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಸಹ ಅನೇಕ ಕ್ರಾಂತಿಕಾರಕ ಚಳವಳಿಯಲ್ಲಿ ಭಾಗವಹಿಸಿದ್ದರು. ಇಂತಹ ಮಹಾನ್ ನಾಯಕರನ್ನು ಸ್ಮರಿಸಿ ಅವರನ್ನು ಅನುಕರಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ.

ನವಲಗುಂದ:

ಮಹಾತ್ಮಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರು ತಮ್ಮ ಕಾಲಘಟ್ಟದಲ್ಲಿ ಅನೇಕ ಚಳವಳಿ ಮುಖಾಂತರ ದೇಶಕ್ಕೆ ಸ್ವಾತಂತ್ರ್ಯ ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಪ್ರಾಧ್ಯಾಪಕ ಗಂಗಾಧರ ಗೌಡರ ಹೇಳಿದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ ಬಹದ್ದೂರ ಶಾಸ್ತ್ರಿ ಜಯಂತಿಯಲ್ಲಿ ಮಾತನಾಡಿದರು.

ಗಾಂಧೀಜಿ ನೀಡಿದ್ದ ಕರೆಯ ಮೇರೆಗೆ ಹಾಗೂ ಅವರಿಂದ ಪ್ರಭಾವಕ್ಕೆ ಒಳಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಸಹ ಅನೇಕ ಕ್ರಾಂತಿಕಾರಕ ಚಳವಳಿಯಲ್ಲಿ ಭಾಗವಹಿಸಿದ್ದರು. ಇಂತಹ ಮಹಾನ್ ನಾಯಕರನ್ನು ಸ್ಮರಿಸಿ ಅವರನ್ನು ಅನುಕರಿಸುವುದು ಪ್ರತಿಯೊಬ್ಬ ಭಾರತೀಯನ ಜವಾಬ್ದಾರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಎಂ.ಬಿ. ಬಾಗಡಿ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಸರಳತೆ ಮತ್ತು ಹೋರಾಟದ ಪರಿಣಾಮ, ಇಬ್ಬರೂ ನಾಯಕರು ಇತಿಹಾಸ ಪುರುಷರಾಗಿ ನೆನಪಿನಲ್ಲಿ ಉಳಿಯುತ್ತಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು ಹಸಿರು ಕ್ರಾಂತಿಗೆ ಪ್ರೇರಣೆ ನೀಡಿದಷ್ಟೇ ಅಲ್ಲದೆ ರೈತರು ಹಾಗೂ ಸೈನಿಕರು ದೇಶದ ಆಧಾರ ಸ್ತಂಭ ಎಂದು ಹೇಳಿದರು.

ಸಂತೋಷ ಹುಬ್ಬಳ್ಳಿ, ಪ್ರಸನ್ನ ಪಂಢರಿ, ಬಿ.ವಿ. ಏನಗಿ, ನಾಗರತ್ನಾ ಕುರಡೇಕರ, ಸವಿತಾ ಚಿಕ್ಕಣ್ಣವರ, ಶ್ರೀಧರ ಲೋನಕರ್, ಗಣೇಶ ಧೋಂಗಡಿ, ಪ್ರತಿಭಾ ನಿಡುಗುಂದಿ, ನಾಗೇಶ, ಕಾಲವಾಡ, ರಾಮಣ್ಣ ಇದ್ದರು.