ಸಾರಾಂಶ
ಶೃಂಗೇರಿ: 12 ನೇ ಶತಮಾನದಲ್ಲಿ ಶಿವಶರಣರು, ವಚನಕಾರರು ವಚನ, ಸಾಹಿತ್ಯ,ವಿಚಾರಧಾರೆಗಳ ಮೂಲಕ ಸಮಾಜದ ಅಂಕಡೊಂಕುಗಳನ್ನು ತಿದ್ದಿ ಸಾಮಾಜಿಕ ಪರಿವರ್ತನೆಯ ಕೆಲಸ ಮಾಡಿದರು ಎಂದು ನಿವೃತ್ತ ಶಿಕ್ಷಕ ಜನಾರ್ದನ ಮಂಡಗಾರು ಹೇಳಿದರು.ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಮಡಿವಾಳ ಮಾಚಿದೇವ, ಸಂತ ಸೇವಾಲಾಲ್, ಛತ್ರಪತಿ ಶಿವಾಜಿ, ಸರ್ವಜ್ಞ ಜಯಂತಿಯಲ್ಲಿ ಮಾತನಾಡಿದರು. ಹಿಂದುಳಿದ, ಶ್ರಮಿಕರ ಸಾಮಾಜಿಕ ಸಮಾನತೆಗಾಗಿ ಹೋರಾಡಿದರು. ಸಮಾಜದಲ್ಲಿನ ಮೇಲು ಕೀಳು, ಬಡವ ಬಲ್ಲಿದ, ಭಾವನೆಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಜಾತಿ ಪದ್ಧತಿ, ಮೂಡನಂಬಿಕೆಗಳನ್ನು ವಿರೋಧಿಸಿದರು. ಜನರಲ್ಲಿ ಆದ್ಯಾತ್ಮಿಕತೆ, ಭಕ್ತಿ ಮೂಲಕ ಜಾಗೃತಿ ಮೂಡಿಸಿದರು. ಮಡಿವಾಳ ಮಾಚಿದೇವರು ಸಾಮಾಜಿಕ ಕ್ರಾಂತಿ ಉಂಟುಮಾಡಿದರು. ಸುಮಾರು 3 ಲಕ್ಷಕ್ಕೂ ಹೆಚ್ಚು ವಚನಗಳನ್ನು ರಚಿಸಿದರು. ಜೆಸಿ ತರಬೇತುದಾರ ಎನ್.ಕೆ.ವಿಜಯ್ ಕುಮಾರ್ ಉಪನ್ಯಾಸ ನೀಡಿ, ಮಹಾತ್ಮರ ಜಯಂತಿ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಇಡೀ ಸಮಾಜಕ್ಕೆ ಅನ್ವಯವಾಗುವಂತಿರಬೇಕು. ಆದ್ಯಾತ್ಮಿಕ ಶ್ರದ್ದೆಯಿಂದ ಮನುಷ್ಯನೊಳಗಿನ ಅಹಂ ಭಾವ ನಾಶವಾಗುತ್ತದೆ. ಮಹಾತ್ಮರ ತತ್ವಾದರ್ಷಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ತಹಸೀಲ್ದಾರ್ ಗೌರಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಮಡಿವಾಳ ಸಂಘದ ಕೃಷ್ಣಪ್ಪವಾಸು, ಸಂದೇಶ್ ಮತ್ತಿತರರು ಇದ್ದರು.21 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಮಡಿವಾಳ ಮಾಚಿದೇವ,ಸಂತಸೇವಾಲಾಲ್,ಛತ್ರಪತಿ ಶಿವಾಜಿ,ಸರ್ವಜ್ಞ ಜಯಂತಿ ಕಾರ್ಯಕ್ರವನ್ನು ತಹಸಿಲ್ದಾರ್ ಗೌರಮ್ಮ ಉದ್ಘಾಟಿಸಿದರು.ವಿಜಯ್್ ಕುಮಾರ್,ಜನಾರ್ದನ್ .ಕೃಷ್ಣಪ್ಪ ಮತ್ತಿತರರು ಇದ್ದರು.