ಆತ್ಮ ಪರಮಾತ್ಮ ಅವಸ್ಥೆ ಗೆ ಏರಲು ಭವ ಭವ ಗಳ ತಪಸ್ಸು ಮುಖ್ಯ . ಸಂಪೂ ರ‍್ಣ ಕರ್ಮ ಕ್ಷಯಿಸಿ ಪುಣ್ಯ ಪಡೆದ ತಪ ನಿರತ ಪುಣ್ಯಾತ್ಮ ಮಾತ್ರ ಪರಮ ಪದವಿ ಪಡೆಯಲು ಸಾಧ್ಯ. ವೀತ ರಾಗ ಸರ್ವಜ್ಞ ಭಗವಂತರ ಉಪದೇಶ ದಿಂದ ಮಾತ್ರ ಲೋಕ ಕಲ್ಯಾಣ ಶಾಂತಿ ಸಾಧ್ಯ. ಎಲ್ಲರಿಗೂ ಅಜ್ಞಾನ ದ ಕತ್ತಲೆ ಸರಿಸಿ ಸುಜ್ಞಾನದ ಬೆಳಕು ನೀಡುವ ದೀಪಾವಳಿ ಶುಭ ತರಲಿ ಎಂದು ಜೈನ ಮಠದ ಭಟ್ಟಾರಕ ಶ್ರೀಗಳವರು ನುಡಿದರು.

ಮೂಡುಬಿದಿರೆ: ಆತ್ಮ ಪರಮಾತ್ಮ ಅವಸ್ಥೆ ಗೆ ಏರಲು ಭವ ಭವ ಗಳ ತಪಸ್ಸು ಮುಖ್ಯ . ಸಂಪೂ ರ‍್ಣ ಕರ್ಮ ಕ್ಷಯಿಸಿ ಪುಣ್ಯ ಪಡೆದ ತಪ ನಿರತ ಪುಣ್ಯಾತ್ಮ ಮಾತ್ರ ಪರಮ ಪದವಿ ಪಡೆಯಲು ಸಾಧ್ಯ. ವೀತ ರಾಗ ಸರ್ವಜ್ಞ ಭಗವಂತರ ಉಪದೇಶ ದಿಂದ ಮಾತ್ರ ಲೋಕ ಕಲ್ಯಾಣ ಶಾಂತಿ ಸಾಧ್ಯ. ಎಲ್ಲರಿಗೂ ಅಜ್ಞಾನ ದ ಕತ್ತಲೆ ಸರಿಸಿ ಸುಜ್ಞಾನದ ಬೆಳಕು ನೀಡುವ ದೀಪಾವಳಿ ಶುಭ ತರಲಿ ಎಂದು ಜೈನ ಮಠದ ಭಟ್ಟಾರಕ ಶ್ರೀಗಳವರು ನುಡಿದರು.

ಅವರು ಭಗವಾನ್ ಮಹಾವೀರ ಸ್ವಾಮಿಯವರ ನಿರ್ವಾಣ ಅರ್ಘ್ಯ ಸಲ್ಲಿಸುವ ಸೋಮವಾರ ಮುಂಜಾವ 4.30ರ ಮುಹೂರ್ತದಲ್ಲಿ 2553 ನೇ ನಿರ್ವಾಣ ಅರ್ಘ್ಯ ಎತ್ತಿ ಚತುರ್ವಿಂಶ ತೀರ್ಥಂಕರರ ಹೆಸರು ಹೇಳಿ ಮಹಾ ಅರ್ಘ್ಯ ದೊಂದಿಗೆ ಪೂಜೆ ಸಲ್ಲಿಸಿ ನಂತರ ಆಶೀರ್ವಚನ ನೀಡಿದರು. ಬೆಟ್ಕೇರಿ ಭಗವಾನ್ ಮಹಾವೀರ ಸ್ವಾಮಿ ಬಸದಿ ಯ ಸಾಮೂಹಿಕ ಅರ್ಘ್ಯಾವಳಿಯಲ್ಲಿ ಯೂ ಶ್ರೀಗಳವರು ಪಾಲ್ಗೊಂಡರು.

ಎಲ್ಲಾ 18 ಬಸದಿ ಗಳಲ್ಲೂ ಶ್ರಾವಕ ಶ್ರಾವಿಕೆ ಯರಿಂದ 7 ಸೂರ್ಯೋದಯಕ್ಕೂ ಮೊದಲೇ ವೀರ ಭಕ್ತಿ, ಅಭಿಷೇಕ ಅಷ್ಟ ವಿಧಾ ರ‍್ಚನೆ ಪೂಜೆ ಸಲ್ಲಿಸಿ ಮಹಾ ಅರ್ಘ್ಯ ಸಮರ್ಪಣೆ ನಡೆಯಿತು. ದೆಹಲಿ, ಉ.ಪ್ರದೇಶ ಮುಂಬೈ, ಮಧ್ಯ ಪ್ರದೇಶ,ಗುಜರಾತ್, ರಾಜಸ್ತಾನ್, ನಾಗ ಲ್ಯಾಂಡ್ ಮೊದಲಾದ ವಿವಿಧ ರಾಜ್ಯಗಳ ಭಕ್ತಾದಿಗಳು ಬಸದಿದರ್ಶನ ಮಾಡಿ ಪೂಜೆ, ಪ್ರವಚನ ಸತ್ಸಂಗ ದಲ್ಲಿ ಪಾಲ್ಗೊಂಡರು.