ಜಿಲ್ಲೆಯ ಜನರ ಜೀವನಾಡಿಯಾಗಿ ಬ್ಯಾಂಕಿಂಗ್ ವಲಯದಲ್ಲಿ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾದ ಹುಕ್ಕೇರಿ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಕಳೆದ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪ್ರಗತಿ ಪಥದತ್ತ ಸಾಗಿದ್ದು, ₹4.01 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಜಿಲ್ಲೆಯ ಜನರ ಜೀವನಾಡಿಯಾಗಿ ಬ್ಯಾಂಕಿಂಗ್ ವಲಯದಲ್ಲಿ ಜನಸ್ನೇಹಿ ಆಡಳಿತಕ್ಕೆ ಹೆಸರುವಾಸಿಯಾದ ಹುಕ್ಕೇರಿ ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಕಳೆದ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಪ್ರಗತಿ ಪಥದತ್ತ ಸಾಗಿದ್ದು, ₹4.01 ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮಹಾವೀರ ನಿಲಜಗಿ ಹೇಳಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರಿ ತತ್ವದ ಮೂಲಕ ಬ್ಯಾಂಕ್‌ನ ಸೇವೆಯನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲು ಆದ್ಯತೆ ನೀಡಲಾಗಿದೆ. ಬ್ಯಾಂಕ್‌ನ ಮುಂದಿನ ಕಾರ್ಯ ಯೋಜನೆಗಳೆಲ್ಲವೂ ಕ್ರಿಯಾತ್ಮಕ ಹಾಗೂ ಜನೋಪಕಾರಿಯಾಗಿವೆ. ಗ್ರಾಹಕ-ಸದಸ್ಯರ ಏಳಿಗೆಯಲ್ಲಿ ಬ್ಯಾಂಕಿನ ಏಳಿಗೆ ಇದೆಂಬ ಭಾವನೆ ಮತ್ತು ಧ್ಯೇಯದೊಂದಿಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ ಎಂದರು.ಒಟ್ಟು 3042 ಸದಸ್ಯರಿದ್ದು, ಪ್ರಧಾನ ಕಚೇರಿ ಸೇರಿ ಸಹಕಾರಿಯು ಒಟ್ಟು 17 ಶಾಖೆಗಳನ್ನು ಹೊಂದಿದೆ. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಹಕಾರಿ ಒಟ್ಟು ವಾರ್ಷಿಕ ₹1333 ಕೋಟಿ ₹96 ಲಕ್ಷ ₹73 ಸಾವಿರ ವಹಿವಾಟು ನಡೆಸಿದೆ. ₹43.28 ಲಕ್ಷ ಶೇರು ಬಂಡವಾಳವಿದೆ. ₹11.66 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು, ₹351.76 ಕೋಟಿ ದುಡಿಯುವ ಬಂಡವಾಳವಿದೆ. ₹275 ಕೋಟಿ, ₹25 ಲಕ್ಷ ಸಾಲ ವಿತರಿಸಲಾಗಿದ್ದು, ₹312 ಕೋಟಿ ಠೇವುಗಳಿವೆ. ₹48.85 ಕೋಟಿ ಹೂಡಿಕೆಗಳಿದ್ದು, ₹4.01 ಕೋಟಿ ಲಾಭ ಗಳಿಸಿದ್ದು. ಶೇ.25 ರಷ್ಟು ಲಾಭಾಂಶ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.ಉಪಾಧ್ಯಕ್ಷ ರೋಹಿತ ಚೌಗಲಾ, ನಿರ್ದೇಶಕರಾದ ಸುಕುಮಾರ ಖತಗಲ್ಲಿ, ಬಾಹುಬಲಿ ಸೊಲ್ಲಾಪುರೆ, ಭರಮಪ್ಪ ಲಠ್ಠೆ, ಸುಕುಮಾರ ಪಾಟೀಲ, ಸಂಜಯ ನಿಲಜಗಿ, ಕಿರಣ ಸೊಲ್ಲಾಪುರೆ, ಅಕ್ಕಪ್ಪ ಖತಗಲ್ಲಿ, ಅಶೋಕ ಪಾಟೀಲ, ಪ್ರಜ್ವಲ ನಿಲಜಗಿ, ಪಾರೇಶ ಗದ್ದಿ, ಅನುಪಮಾ ಕಬಾಡಗೆ, ಅಶ್ವಿನಿ ಪಾಟೀಲ, ಸಿದ್ದಪ್ಪ ಕಂಠಿಕಾರ, ಅಶೋಕ ನಾಯಿಕ, ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಪಾಟೀಲ, ಶಾಖಾ ಕಾರ್ಯದರ್ಶಿ ಸಂತೋಷ ರಜಪೂತ, ಪ್ರವೀಣ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.ಮುಂಬರುವ ದಿನಗಳಲ್ಲಿ ಬ್ಯಾಂಕ್‌ನ ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ಚಿಂತನೆಯಿದ್ದು, ಎಟಿಎಂ, ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಸಂಪೂರ್ಣ ಡಿಜಿಟಲೀಕರಣ ವ್ಯವಸ್ಥೆ ಒದಗಿಸಲಾಗುವುದು. ಸಾಲಗಾರರಿಗೆ ಆರ್ಥಿಕ ಹೊರೆಯಾಗದಂತೆ ಹಾಗೂ ಠೇವುದಾರರ ವಿಶ್ವಾಸ ಉಳಿಸಿಕೊಂಡು ಬ್ಯಾಂಕ್ ಗಟ್ಟಿಯಾಗಿ ನಿಂತಿದೆ. ಸಾಲಗಾರರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿರುವುದು ಶ್ಲಾಘನೀಯ.
-ಮಹಾವೀರ ನಿಲಜಗಿ, ಅಧ್ಯಕ್ಷರು, ಮಹಾವೀರ ಮಲ್ಟಿಪರಪಜ್ ಸೌಹಾರ್ದ ಸಹಕಾರಿ ಸಂಘ ಹುಕ್ಕೇರಿ.ಹುಕ್ಕೇರಿ ಮಹಾವೀರ ಮಲ್ಟಿಪರಪಜ ಸೌಹಾರ್ದ ಸಹಕಾರಿಯ 2025-26ನೇ ಸಾಲಿನ 26ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಬರುವ ತಿಂಗಳು ಆ.7 ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಮಹಾವೀರ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ನಡೆಯಲಿದೆ.-ರಾಜೇಂದ್ರ ಪಾಟೀಲ,
ಮುಖ್ಯ ಕಾರ್ಯನಿರ್ವಾಹಕರು.