ಮಾಹೆ ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ರಾಮದಾಸ್ ಆರ್. ಪೈ 90ನೇ ಜನ್ಮದಿನದ ಪ್ರಯುಕ್ತ ಸ್ಮಾರಕ ಅಂಚೆ ಲಕೋಟೆಯನ್ನು ಮಾಹೆಯ 33ನೇ ಘಟಿಕೋತ್ಸವದಲ್ಲಿ ಬಿಡುಗಡೆಗೊಳಿಸಲಾಯಿತು.

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯ ಕುಲಾಧಿಪತಿ ಡಾ. ರಾಮದಾಸ್ ಆರ್. ಪೈ 90ನೇ ಜನ್ಮದಿನದ ಪ್ರಯುಕ್ತ ಸ್ಮಾರಕ ಅಂಚೆ ಲಕೋಟೆಯನ್ನು ಮಾಹೆಯ 33ನೇ ಘಟಿಕೋತ್ಸವದಲ್ಲಿ ಬಿಡುಗಡೆಗೊಳಿಸಲಾಯಿತು. ವಿಶ್ವದ ಉದ್ದಗಲಕ್ಕೂ ಮಾಹೆಯನ್ನು ತನ್ನ ಗುಣಮಟ್ಟದ ಶಿಕ್ಷಣದ ಮೂಲಕ ಪರಿಚಯಿಸಿದ ಡಾ. ಪೈ ಅವರ ಕೊಡುಗೆ ಈ ಮೂಲಕ ಅಂಚೆ ಇಲಾಖೆ ಗೌರವ ಸಲ್ಲಿಸಿತು.

ಈ ಸಂದರ್ಭ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಅವರು, ಮಣಿಪಾಲದ ಮಹಾನ್ ವ್ಯಕ್ತಿತ್ವ ಮತ್ತು ಸುಧಾರಕರ 90ನೇ ಜನ್ಮ ದಿನಾಚರಣೆ ಸ್ಮರಣೆಯನ್ನು ಅಂಚೆ ಲಕೋಟೆ ಬಿಡುಗಡೆ ಮಾಡುವ ಮೂಲಕ ಸಂಭ್ರಮಿಸಿದ್ದು ನಮ್ಮ ಸೌಭಾಗ್ಯ. ಡಾ. ರಾಮದಾಸ್ ಪೈ ಅವರ ಕೊಡುಗೆಗಳಿಂದಾಗಿ ಮಣಿಪಾಲ ಮತ್ತು ಮಾಹೆ ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ಈ ಐತಿಹಾಸಿಕ ಕ್ಷಣದ ಭಾಗವಾಗಿರುವುದು ಹೆಮ್ಮೆ ತಂದಿದೆ ಎಂದು ಅಭಿಪ್ರಾಯಪಟ್ಟರು.

ಮಣಿಪಾಲದ ಕೆ.ಎಂ.ಸಿ. ಗ್ರೀನ್ಸ್‌ನಲ್ಲಿ ನಡೆದ ಈ ಸಮಾರಂಭದಲ್ಲಿ ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ, ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಉಪ ಕುಲಪತಿ ಲೆಜ ಡಾ. ಎಂ.ಡಿ.ವೆಂಕಟೇಶ್, ಸಹಉಪಕುಲಪತಿಗಳಾದ ಡಾ. ನಾರಾಯಮ ಸಭಾಹಿತ್, ಡಾ. ಶರತ್ ಕೆ.ರಾವ್, ಕುಲಸಚಿವ ಡಾ. ಗಿರಿಧರ್ ಕಿಣಿ ಮತ್ತಿರರರು ಇದ್ದರು.