‘ಮಾಹೆ ಆರೋಗ್ಯ ವಿಜ್ಞಾನ ಸಂಶೋಧನ ದಿನ 2024’ ಸಂಪನ್ನ

| Published : Jun 09 2024, 01:35 AM IST

‘ಮಾಹೆ ಆರೋಗ್ಯ ವಿಜ್ಞಾನ ಸಂಶೋಧನ ದಿನ 2024’ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಈ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಸುಮಾರು 5000 ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ)ನಲ್ಲಿ ‘ಮಾಹೆ ಆರೋಗ್ಯ ವಿಜ್ಞಾನ ಸಂಶೋಧನ ದಿನ 2024’ ಕಾರ್ಯಕ್ರಮವನ್ನು ಶನಿವಾರ ಸಹಕುಲಾಧಿಪತಿ ಡಾ. ಎಚ್‌. ಎಸ್‌. ಬಲ್ಲಾಳ್‌ ಉದ್ಘಾಟಿಸಿದರು.

ಬಳಿಕ ಮಾನತಾಡಿದ ಅವರು, ಯುವ ಮನಸ್ಸುಗಳನ್ನು ಸಂಶೋಧನೆಯತ್ತ ಪ್ರೇರೇಪಿಸುವ ಮತ್ತು ವಿಜ್ಞಾನ ಹಾಗೂ ಸಂಶೋಧನ ಕ್ಷೇತ್ರಗಳಲ್ಲಿ ಅವಕಾಶವನ್ನು ಅರಸುವಂತೆ ಉತ್ತೇಜಿಸುವ ಅಗತ್ಯವಿದೆ. ಇದು ರಾಷ್ಟ್ರದ ಭವಿಷ್ಯಕ್ಕೆ ನೀಡುವ ಕೊಡುಗೆಯೂ ಹೌದು ಎಂದರು.

ಇದೇ ಸಂದರ್ಭದಲ್ಲಿ ಐದು ಪ್ರಮುಖ ಸಂಶೋಧನ ಉತ್ತೇಜಕ ಕಾರ್ಯಕ್ರಮಗಳಾದ ‘ಕಿರಿಯರಿಗೆ ಪ್ರೇರಣೆ (ಇನ್‌ಸ್ಪಾಯರ್ ಜೂನಿಯರ್‌), ಅಧ್ಯಯನಾಕಾಂಕ್ಷಿಗಳಿಗೆ ಸ್ಫೂರ್ತಿ (ಇನ್‌ಸ್ಪಾಯರ್‌ ಲರ್ನರ್‌), ವೃತ್ತಿಪರರಿಗೆ ಉತ್ತೇಜನ (ಇನ್‌ಸ್ಪಾಯರ್‌ ಪ್ರೊಫೆಶನಲ್‌), ಆರೋಗ್ಯವಿಜ್ಞಾನದಲ್ಲಿ ಸಂಶೋಧನ ಸಹಭಾಗಿತ್ವ (ಕೊಲ್ಯಾಬೊರೇಟ್‌ ಹೆಲ್ತ್‌ ರಿಸರ್ಚ್‌ ಎಕ್ಸ್ ಫೊ), ಸಂಶೋಧನ ಸಂಪನ್ಮೂಲಗಳನ್ನು ಲಭ್ಯತೆಯನ್ನು ಹೆಚ್ಚಿಸುವುದು (ಎನ್‌ರಿಚ್‌ ಆಕ್ಸೆಸ್‌ ಟು ರೀಸರ್ಚ್‌ ರಿಸೋರ್ಸಸ್‌)ಗಳನ್ನು ಉದ್ಘಾಟಿಸಲಾಯಿತು.

ಮಾಹೆ ಆರೋಗ್ಯವಿಜ್ಞಾನ ವಿಭಾಗದ ಸಹಕುಲಪತಿಗಳಾದ ಡಾ. ಶರತ್‌ ರಾವ್‌, ಯೋಜನಾವಿಭಾಗದ ನಿರ್ದೇಶಕ ಡಾ. ರವಿರಾಜ್‌ ಎನ್‌.ಎಸ್‌., ಸಂಶೋಧನ ನಿರ್ದೇಶನಾಲಯದ ನಿರ್ದೇಶಕ ಡಾ.ಬಿ.ಎಸ್‌. ಸತೀಶ ರಾವ್, ಸಾಂಸ್ಥಿಕ ಸಂಪರ್ಕ ವಿಭಾಗದ ನಿರ್ದೇಶಕ ಡಾ. ಹರೀಶ್‌ ಕುಮಾರ್‌, ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹಕುಲಪತಿಗಳಾದ ಡಾ. ನಾರಾಯಣ ಸಭಾಹಿತ್‌, ಎಂಐಟಿಯ ನಿರ್ದೇಶಕ ಕ್ಯಾ. ಅನಿಲ್‌ ರಾಣ, ಕಾರ್ಯತಂತ್ರ ಮತ್ತು ಯೋಜನ ವಿಭಾಗದ ಸಹಉಪಕುಲಪತಿಗಳಾದ ಡಾ.ಎನ್‌.ಎನ್‌. ಶರ್ಮ ಮತ್ತು ಕುಲಸಚಿವ ಡಾ.ಪಿ. ಗಿರಿಧರ ಕಿಣಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳ ಸುಮಾರು 5000 ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು.