ಸಾರಾಂಶ
ಮೈಲಾರ ಬಸವಲಿಂಗ ಶರಣರು ಶ್ರೇಷ್ಠ ಕಾಯಕ ನಿಷ್ಠೆ, ಭಕ್ತಿ ಪ್ರದಾನ ಸರಳ ಜೀವನ, ಸಾಮಾಜಮುಖಿ ಆದರ್ಶ ವ್ಯಕಿತ್ವ, ಅವರ ಜೀವನ ಚರಿತ್ರೆಯಿಂದ ನಾವು ದೂರವಾಗುತ್ತಿದ್ದೇವೆ.
ಹೂವಿನಹಡಗಲಿ: ತಾಲೂಕಿನ ಮೈಲಾರದ ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ವತಿಯಿಂದ ಉಜ್ಜಯನಿ ಗುರುಪೀಠದ ಶ್ರೀಮದ್ ಉಜ್ಜಯಿನಿ ಜಗದ್ಗುರು ಮಹಾ ಸಿಂಹಾಸನ ಪೀಠದ ಜ.ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದಕರಿಗೆ ರಾಷ್ಟೀಯ ಮಟ್ಟದ ಮೈಲಾರ ಬಸವಲಿಂಗ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಕ್ರಿಯಾ ಸಮಿತಿ ಅಧ್ಯಕ್ಷ ಪುಟ್ಟಪ್ಪ ತಂಬೂರಿ ಹೇಳಿದರು.
ಕೊಟ್ಟೂರು ತಾಲೂಕಿನ ಉಜ್ಜಯನಿ ಗುರುಪೀಠಕ್ಕೆ ತೆರಳಿ ಶ್ರೀಗಳಿಗೆ ಪ್ರಶಸ್ತಿ ಪ್ರದಾನಿಸಿ ಮಾತನಾಡಿದ ಅವರು, ಕರ್ನಾಟಕ ಗ್ರಾಮೀಣ ಕನ್ನಡ ನುಡಿ ಹಬ್ಬ 2024ರ ಅಡಿ ಮೈಲಾರ ಬಸವಲಿಂಗ ಶರಣ ಸ್ಮರಣೋತ್ಸವ ಅಂಗವಾಗಿ ಜಗದ್ಗುರುಗೆ ರಾಷ್ಟ್ರೀಯ ಮಟ್ಟದ 2ನೇ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಮೈಲಾರದ ತ್ರಿಪದಿಗಳ ಹರಿಕಾರರೆಂದೆ ಖ್ಯಾತರಾದ, ಮೈಲಾರ ಬಸವಲಿಂಗ ಶರಣರು ಶ್ರೇಷ್ಠ ಕಾಯಕ ನಿಷ್ಠೆ, ಭಕ್ತಿ ಪ್ರದಾನ ಸರಳ ಜೀವನ, ಸಾಮಾಜಮುಖಿ ಆದರ್ಶ ವ್ಯಕಿತ್ವ, ಅವರ ಜೀವನ ಚರಿತ್ರೆಯಿಂದ ನಾವು ದೂರವಾಗುತ್ತಿದ್ದೇವೆ ಎಂದರು.ಶರಣರ ಹೆಸರನ್ನು ಉಳಿಸುವ ಹಾಗೂ ಅವರ ಸರಳ ಜೀವನ ಆದರ್ಶಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ನಮ್ಮ ಕ್ರಿಯಾ ಸಮಿತಿಯು ರಾಜ್ಯದ ವಿವಿಧ ಕ್ಷೇತ್ರಗಳನ್ನು ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ, ತಾಲೂಕು ಮಟ್ಟ ಸೇರಿದಂತೆ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಚಳ್ಳಕೆರೆಯ ಪ್ರಗತಿಪರ ರೈತ ಡಾ.ಆರ್.ಎ. ದಯಾನಂದಮೂರ್ತಿ, ಚಿತ್ರದುರ್ಗ ಹಾಸ್ಯ ಸಾಹಿತಿ ಪಿ.ಜಗನ್ನಾಥ, ಹಾವೇರಿ ರವಿಕಿರಣ ಸೃಜನಶೀಲ ವಿಕಲಚೇತನರ ಸಂಘದ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯ ಮುಷ್ಟಿಗೇರಿ, ಕೊಟ್ಟೂರಿನ ಷಣ್ಮುಖಪ್ಪ ಅಗಡಿ, ಬಸವರಾಜ ಮುಷ್ಟಿಗೇರಿ, ಪ್ರಭು ಹಾವೇರಿ ಉಪಸ್ಥಿತರಿದ್ದರು.