ಮಧುಗಿರಿ ತಾಲೂಕಿನ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಸಚಿವ ಕೆ.ಎನ್‌.ರಾಜಣ್ಣ

| Published : Sep 12 2024, 01:54 AM IST

ಮಧುಗಿರಿ ತಾಲೂಕಿನ ಕೆರೆಗಳಿಗೆ ಎತ್ತಿನಹೊಳೆ ನೀರು ಹರಿಸಲು ಕ್ರಮ: ಸಚಿವ ಕೆ.ಎನ್‌.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮಧುಗಿರಿ ತಾಲೂಕಿನ ಎಲ್ಲ ಕೆರೆಗಳಿಗೆ ಮುಂದಿನ ಮಳೆಗಾಲದ ವೇಳೆಗೆ ಎತ್ತಿನಹೊಳೆ ಯೋಜನೆ ನೀರು ತುಂಬಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಭರವಸೆ ನೀಡಿದರು. ಮಧುಗಿರಿಯಲ್ಲಿ ಗ್ರಾಪಂ ಮಟ್ಟದ ಜನಸ್ಪಂದನ ಮತ್ತು ಖಾತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಪಂ ಮಟ್ಟದ ಜನಸ್ಪಂದನ ಮತ್ತು ಖಾತಾ ಆಂದೋಲನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನ ಎಲ್ಲ ಕೆರೆಗಳಿಗೆ ಮುಂದಿನ ಮಳೆಗಾಲದ ವೇಳೆಗೆ ಎತ್ತಿನಹೊಳೆ ಯೋಜನೆ ನೀರು ತುಂಬಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಭರವಸೆ ನೀಡಿದರು.

ತಾಲೂಕಿನ ಐ.ಡಿ.ಹಳ್ಳಿ ಹೋಬಳಿ ಬ್ರಹ್ಮಸಮುದ್ರದಲ್ಲಿ ಜಿಲ್ಲಾಡಳಿತ, ಜಿಪಂಯಿಂದ ಆಯೋಜಿಸಿದ್ದ ಗ್ರಾಪಂ ಮಟ್ಟದ ಜನಸ್ಪಂದನ ಮತ್ತು ಖಾತಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಕಲೇಶಪುರದ ಬಳಿ ಅತ್ಯಾಧುನಿಕ ತಂತ್ರಜ್ಞಾನದಿಂದ ಎತ್ತಿನಹೊಳೆ ನೀರನ್ನು ಪ್ರಥಮ ಹಂತದಲ್ಲಿ ಇಂಜಿನಿಯರ್‌ಗಳು ಸಹಕಾರದಿಂದ ಎಲ್ಲ ಹಂತದ ಕಾಮಗಾರಿಗಳು ಅನುಷ್ಠಾನಗೊಂಡಿದೆ. ಹಿಂದೆ ಪರಮಶಿವಯ್ಯ ಅವರ ವರದಿ ಆಧಾರದ ಮೇಲೆ ಎತ್ತಿನಹೊಳೆ ನೀರು ಬರಪೀಡಿತ ಪ್ರದೇಶಗಳಿಗೆ ಇಂದು ಅನುಕೂಲವಾಗಲಿದೆ. ಅವರ ಪ್ರಯತ್ನ ಸ್ಮರಿಸಬೇಕು ಅವರ ಪ್ರಯತ್ನ ಶಾಶ್ವತವಾಗಿದೆ ಎಂದರು.6 ಸಾವಿರ ಕೋಟಿ ರು. ಅವಶ್ಯವಿದ್ದು ಅಧಿಕಾರಿಗಳ ಮತ್ತು ಸಂಬಂಧಪಟ್ಟ ಸಚಿವರ ಜತೆ ಚರ್ಚಿಸಿ ಹೆಚ್ಚು ಹಣ ಬಿಡುಗಡೆಗೊಳಿಸಿ, ಬಹುತೇಕ ಮುಂದಿನ ಮಳೆಗಾಲದ ವೇಳೆಗೆ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ಹರಿಸಲಾಗುವುದು. ವಾಣಿ ವಿಲಾಸ ಸಾಗರಕ್ಕೆ ಸುಮಾರು 500 ಕ್ಯೂಸೆಕ್ಸ್‌ ನೀರು ಹರಿಯುತ್ತಿದೆ. ಅಲ್ಲಿನ ಎಲ್ಲ ಮೋಟಾರಗಳನ್ನು ಸ್ಟಾರ್ಟ್‌ ಮಾಡಿದರೆ 3 ಸಾವಿರ ಕ್ಯೂಸೆಕ್ಸ್‌ ನೀರು ಹರಿಯಲಿದೆ ಎಂದರು.

ಎತ್ತಿನಹೋಳೆ ನೀರು ಕುಡಿಯಲು ಬರಲಿದೆ. ಕೊಡಿಗೇನಹಳ್ಳಿ ಹೊಬಳಿ ಇಮ್ಮಡಗೊಂಡನಹಳ್ಳಿ ಬಳಿ ಬ್ರಿಡ್ಜ್‌ ಕಂ ಬ್ಯಾರೇಜ್‌ ಕಟ್ಟಿದ್ದರಿಂದ ಎಲ್ಲ ಬಾವಿ, ಬೋರವೆಲ್ಲಗಳಲ್ಲಿ ಅಂತರ್ಜಲ ವೃದ್ಧಿಸಿ ಪ್ಲೋರೈಡ್‌ ಕಂಟೆಂಟ್‌ ಕಡಿಮೆಯಾಗಿ ಮುಂದಿನ ಪೀಳಿಗೆಗೆ ಗುಣಮಟ್ಟದ ಶುದ್ಧ ನೀರು ದೊರೆಯಲಿದೆ ಎಂದರು.

ತುಮಕೂರು-ರಾಯದುರ್ಗ ರೈಲ್ವೆ ಯೋಜನೆ ಕಾಮಗಾರಿಯನ್ನು ಅತಿ ಶೀಘ್ರದ್ಲಲೇ ಪ್ರಾರಂಭಿಸಿ ಈ ಭಾಗದಲ್ಲಿ ರೈಲು ಸಂಚರಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ರೈಲ್ವೆ ಕಾಮಗಾರಿಗೆ ಭೂಸ್ವಾಧೀನ ಪ್ರಕ್ರಿಯೇ ಮುಗಿದಿದ್ದು ಎಲ್ಲ ಅಗತ್ಯವಾದ ಭೂಮಿ ಸಿದ್ದಪಡಿಸಿದ್ದೇವೆ. ಮಧುಗಿರಿ ಏಕಶಿಲಾ ಬೆಟ್ಟದ ಕೇಬಲ್‌ ಕಾರ್‌ ಯೋಜನೆ ಕುಂಟುತ್ತಾ ಸಾಗಿದ್ದು,ಅದಕ್ಕೆ ವೇಗ ಕೊಡಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ತಾಲೂಕಿನಲ್ಲಿ 2013ರಿಂದ 2018 ರ ಅವಧಿಯಲ್ಲಿ 16,400 ಮನೆಗಳನ್ನು ಕಟ್ಟಿಸಿದ್ದೆ, ಗುಡಿಸಲು ರಹಿತ ಕ್ಷೇತ್ರವನ್ನಾಗಿ ಮಾಡಿದ್ದೇ, ಅದೇ 18 ರಿಂದ 23ರವರೆಗೆ ಒಂದೇ ಒಂದು ಮನೆ ಕಟ್ಟಲಿಲ್ಲ, ಪ್ರಸ್ತುತ ಎಲ್ಲ ಬಡವರಿಗೂ ನಿವೇಶನ ಕೊಡುವ ಜೊತೆಗೆ ಮನೆಗಳನ್ನು ಕಟ್ಟಿಸಿ ಕೊಡುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಶುಭಕಲ್ಯಾಣ್‌, ಜಿಪಂ ಸಿಇಒ ಪ್ರಭು, ಎಸಿ ಗೋಟೂರು ಶಿವಪ್ಪ, ತಹಸೀಲ್ದಾರ್‌ ವಿ.ಮರಿಯಪ್ಪ, ಶೀರನ್‌ ತಾಜ್‌, ಇಒ ಲಕ್ಷಣ್‌, ಮಧುಸೂದನ್‌ ಮುಖಂಡರಾದ ಜಿ.ಜೆ.ರಾಜಣ್ಣ, ಇಂದಿರಾ, ರಾಜು, ಬಾಲಮ್ಮ, ಕೃಷ್ಣಮೂರ್ತಿ ಇದ್ದರು.

ತಾಲೂಕಲ್ಲಿ ಹೊಸ ಕಾನೂನುಪೋಷಕರು ಮಕ್ಕಳನ್ನು ಶಾಲೆಗೆ ಕಳಿಸದೇ ಕೆಲಸಕ್ಕೆ ಹಚ್ಚಿದರೆ ಪೋಷಕರನ್ನೇ ಎರಡು ದಿನ ಪೋಲಿಸ್‌ ಸ್ಟೇಷನ್‌ನಲ್ಲಿ ಮಲಗುವ ಶಿಕ್ಷೆ ವಿಧಿಸಲಾಗುವುದು ಎಂದು ಸಚಿವ ರಾಜಣ್ಣ ಎಚ್ಚರಿಸಿದರು.