ಬ್ಯಾಂಕ್‌ಗಳಲ್ಲಿ ಕಡ್ಡಾಯ ಸಿಸಿ ಕ್ಯಾಮೆರ ಅಳವಡಿಸಿ: ಪಿಐ ಕುಮಾರ್

| Published : Feb 29 2024, 02:01 AM IST

ಬ್ಯಾಂಕ್‌ಗಳಲ್ಲಿ ಕಡ್ಡಾಯ ಸಿಸಿ ಕ್ಯಾಮೆರ ಅಳವಡಿಸಿ: ಪಿಐ ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಎಟಿಎಂ ಕೌಂಟರ್ ಮೂಲಕ ಗ್ರಾಹಕರನ್ನುವಂಚಿಸಿ ಹಣ ಪಡೆಯುವುದಲ್ಲದೆ, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಅನುಮಾನಬಾರಂತೆ ದೋಚುವ ಪ್ರಕರಣಗಳು ಹೆಚ್ಚುತ್ತಿವೆ, ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಜಾಗ್ರತೆ ವಹಿಸುವಂತೆ ಠಾಣಾ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ. ಕುಮಾರ್ ತಿಳಿಸಿದರು.

ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ನಗರ ವ್ಯಾಪ್ತಿ ಬ್ಯಾಂಕ್ ಅಧಿಕಾರಿಗಳ ಜಾಗೃತಿ ಸಭೆ

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಇತ್ತೀಚಿನ ದಿನಗಳಲ್ಲಿ ಬ್ಯಾಂಕ್‌ಗಳಲ್ಲಿ ಎಟಿಎಂ ಕೌಂಟರ್ ಮೂಲಕ ಗ್ರಾಹಕರನ್ನುವಂಚಿಸಿ ಹಣ ಪಡೆಯುವುದಲ್ಲದೆ, ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಅನುಮಾನಬಾರಂತೆ ದೋಚುವ ಪ್ರಕರಣಗಳು ಹೆಚ್ಚುತ್ತಿವೆ, ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಜಾಗ್ರತೆ ವಹಿಸುವಂತೆ ಠಾಣಾ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೆ. ಕುಮಾರ್ ತಿಳಿಸಿದರು.

ಬುಧವಾರ ಪೊಲೀಸ್ ಠಾಣೆ ಕಚೇರಿಯಲ್ಲಿ ನಗರ ವ್ಯಾಪ್ತಿ ಬ್ಯಾಂಕ್ ಅಧಿಕಾರಿಗಳ ಜಾಗೃತಿ ಸಭೆಯಲ್ಲಿ ಮಾತನಾಡಿ, ಪ್ರತಿ ಬ್ಯಾಂಕ್ ಸಿಸಿ ಕ್ಯಾಮೆರ ಕಡ್ಡಾಯವಾಗಿ ಹೊಂದಿರಬೇಕು. ಗ್ರಾಹಕರ ಚಲನವಲನ ವೀಕ್ಷಿಸಲು ಸಿಸಿ ಕ್ಯಾಮೆರ ಅವಶ್ಯ. ಅವುಗಳ ಕಾರ್ಯನಿರ್ವಹಣೆ ಅಧಿಕಾರಿಗಳು ಪ್ರತಿನಿತ್ಯ ಪರಿಶೀಲಿಸಬೇಕು. ಮುಗ್ದ ಜನರನ್ನು ವಂಚಿಸುವವರ ಬಗ್ಗೆ ಗ್ರಾಹಕರಿಗೂ ತಿಳಿವಳಿಕೆ ನೀಡಬೇಕು. ಬ್ಯಾಂಕ್‌ನಿಂದ ಹೆಚ್ಚು ಹಣ ಪಡೆಯುವವರಿಗೆ ಸುರಕ್ಷತೆ ಬಗ್ಗೆ ಮಾಹಿತಿ ನೀಡಬೇಕು. ಅಪರಿಚಿತ ವ್ಯಕ್ತಿಗಳ ಚಲನವಲನ ಬಗ್ಗೆ ಗಮಹರಿಸಬೇಕು. ಬ್ಯಾಂಕ್ ಖಾತೆ ಹೊಂದಿದ ವ್ಯಕ್ತಿಯೇ ಬ್ಯಾಂಕ್‌ಗೆ ಆಗಮಿಸಿದರೂ ಸೂಕ್ತ ದಾಖಲಾತಿ ಪರಿಶೀಲಿಸಿ ನಂತರ ಹಣ ಪಡೆಯಲು ಅವಕಾಶ ಮಾಡಬೇಕು. ಎಟಿಎಂ ಕೌಂಟರ್ ಬಳಿ ಸಿಸಿ ಕ್ಯಾಮೆರದೊಂದಿಗೆ ಸೈರನ್ ಅಳವಡಿಸಬೇಕು, ಅಪರಿಚಿತ ವ್ಯಕ್ತಿಗಳು ಬ್ಯಾಂಕ್‌ಗೆ ಆಗಮಿಸಿ ಗ್ರಾಹಕರಿಗೆ ಮೋಸ ಮಾಡಲು ಯತ್ನಿಸಿದರೆ ಪೊಲೀಸರನ್ನು ಸಂಪರ್ಕಿಸಬೇಕೆಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ವೀರೇಶ್, ವಾಸವಿ ಬ್ಯಾಂಕ್‌ನ ಸುಧಾಕರ್, ಕೆನರಾ ಬ್ಯಾಂಕ್‌ನ ಕಸ್ತೂರಿ, ಆಕ್ಸಿಸ್ ಬ್ಯಾಂಕ್‌ನ ಸಾಗರ್ ಸುಕೋ ಬ್ಯಾಂಕ್‌ನ ಶಿವಾನಂದ, ಪಿಎಸ್‌ಐಗಳಾದ ಕೆ. ಸತೀಶ್‌ನಾಯ್ಕ, ಜೆ. ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು. ----------OOOO---------

೨೮ಸಿಎಲ್‌ಕೆ೧ ಚಳ್ಳಕೆರೆ ನಗರದ ಪೊಲೀಸ್ ಠಾಣೆಯಲ್ಲಿ ನಗರದ ವಿವಿಧ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಲಾಯಿತು.