ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಿ, ಬಸವರಾಜ ತೆನ್ನೆಳ್ಳಿ

| Published : Feb 14 2024, 02:15 AM IST

ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಿ, ಬಸವರಾಜ ತೆನ್ನೆಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಿದರೆ ಸಾಲದು ಪ್ರತಿಯೊಬ್ಬ ಪಾಲಕರು ಮನೆಯಲ್ಲಿ ಮಕ್ಕಳು ಯಾವ ಹಂತದಲ್ಲಿ ಕಲಿಕೆ ಪಡೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಹೆಚ್ಚು ಗಮನಹರಿಸಿದಾಗ ಹೆತ್ತವರ ಕೀರ್ತಿ ತರುವಂತಹ ಮಕ್ಕಳಾಗುತ್ತಾರೆ

ಯಲಬುರ್ಗಾ: ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡದೆ ಅವರನ್ನು ದೇಶದ ಆಸ್ತಿಯನ್ನಾಗಿ ಮಾಡುವ ಸಂಕಲ್ಪ ಮಾಡಬೇಕು ಎಂದು ತಹಸೀಲ್ದಾರ್‌ ಬಸವರಾಜ ತೆನ್ನೆಳ್ಳಿ ಹೇಳಿದರು.

ಪಟ್ಟಣದ ಅಕ್ಷಯ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಅಕ್ಷಯ ಎಜುಕೇಶನ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ೧೪ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ಮಕ್ಕಳಿಗೂ ಯೋಗ್ಯವಾದ ಭೌತಿಕ ಮಟ್ಟದ ನೈತಿಕ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.

ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಅಮೂಲ್ಯವಾಗಿದೆ, ಶಾಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ನೀಡಿದರೆ ಸಾಲದು ಪ್ರತಿಯೊಬ್ಬ ಪಾಲಕರು ಮನೆಯಲ್ಲಿ ಮಕ್ಕಳು ಯಾವ ಹಂತದಲ್ಲಿ ಕಲಿಕೆ ಪಡೆಯುತ್ತಿದ್ದಾರೆ ಎನ್ನುವುದರ ಬಗ್ಗೆ ಹೆಚ್ಚು ಗಮನಹರಿಸಿದಾಗ ಹೆತ್ತವರ ಕೀರ್ತಿ ತರುವಂತಹ ಮಕ್ಕಳಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರಮಿಸಬೇಕು. ಶಾಲೆಗಳಲ್ಲಿ ಕೇವಲ ಅಂಕ ಗಳಿಕೆ ಮಾತ್ರ ಪರಿಗಣನೆಯಾದರೆ ಸಾಲದು. ನಡೆ, ನುಡಿ, ಮಾನವೀಯ ಮೌಲ್ಯ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಿಪಿಐ ಮೌನೇಶ್ವರ ಮಾಲಿಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಓದಿದಾಗ ಜೀವನದಲ್ಲಿ ಏನಾದರು ಸಾಧಿಸಲು ಸಾಧ್ಯವಿದೆ ಎಂದು ಹೇಳಿದರು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ ಬೇಲೇರಿ, ಉಪಾಧ್ಯಕ್ಷ ಡಾ.ಶಿವನಗೌಡ ದಾನರಡ್ಡಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ನಿರ್ದೇಶಕ ಸುರ್ಧಿರ ಕೊರ್ಲಳ್ಳಿ, ಕಲ್ಲನಗೌಡ ಒಜನಹಳ್ಳಿ, ಪವನಕುಮಾರ ಗುಂಡೂರ, ಮುಖ್ಯಶಿಕ್ಷಕಿ ಸವಿತಾ ಓಜನಹಳ್ಳಿ ಮತ್ತಿತರರು ಇದ್ದರು.