ಮಕ್ಕಳಿಗೆ ಮಣ್ಣಿನ ಆರೋಗ್ಯ, ಫಲವತ್ತತೆ ರಕ್ಷಣೆಯ ಅರಿವು ಮೂಡಿಸಿ

| Published : Sep 24 2024, 01:47 AM IST

ಮಕ್ಕಳಿಗೆ ಮಣ್ಣಿನ ಆರೋಗ್ಯ, ಫಲವತ್ತತೆ ರಕ್ಷಣೆಯ ಅರಿವು ಮೂಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

Make children aware of soil health and fertility protection

-ಮಣ್ಣಿನ ಆರೋಗ್ಯ ಕುರಿತು ಪ್ರಬಂಧ, ಚಿತ್ರಕಲಾ ಸ್ಪರ್ಧೆ ಕಾರ್ಯಕ್ರಮದಲ್ಲಿ ರಾಜಕುಮಾರ್ ಸಲಹೆ

-------

ಕನ್ನಡಪ್ರಭ ವಾರ್ತೆ ವಡಗೇರಾ

ಮಣ್ಣಿನ ಆರೋಗ್ಯ ಮತ್ತು ಮಣ್ಣಿನ ಫಲವತ್ತತೆ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ್ ತಿಳಿಸಿದರು.

ವಡಗೇರಾ ತಾಲೂಕಿನ ಹಾಲಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಮಣ್ಣು ಆರೋಗ್ಯ ಚೀಟಿ ಸಂಪೂರ್ಣತಾ ಅಭಿಯಾನ ಅಂಗವಾಗಿ ಕೃಷಿ ಇಲಾಖೆಯಿಂದ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಮಣ್ಣಿನ ಆರೋಗ್ಯ ಕುರಿತು ಪ್ರಬಂಧ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರು ಜಮೀನಿನಲ್ಲಿ ಪ್ರತಿವರ್ಷ ವಿವಿಧ ಬೆಳೆಗಳನ್ನು ಬೆಳೆಯುವುದರಿಂದ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದೆ. ಆದ್ದರಿಂದ, ರೈತರು ಮಣ್ಣು ಪರೀಕ್ಷೆ ಮಾಡಿಸಿ, ಮಣ್ಣು ಪರೀಕ್ಷೆ ಶಿಫಾರಸ್ಸಿನಂತೆ ರಸಗೊಬ್ಬರಗಳು ಬಳಸಿದ್ದಲ್ಲಿ ಮಣ್ಣಿನ ಫಲವತ್ತತೆ ಕಾಪಾಡುವುದರಲ್ಲಿದೆ ಕಡಿಮೆ ಖರ್ಚಿನಲ್ಲಿ ಲಾಭದಾಯಕ ಕೃಷಿ ಮಾಡಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲೆಯ ಮುಖ್ಯಗುರು ಮಂಜುನಾಥ್ ರಾಠೋಡ್, ಸರ್ಕಾರ ಒಳ್ಳೆಯ ಕಾರ್ಯಕ್ರಮ ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಮಣ್ಣಿನ ಆರೋಗ್ಯದ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳಿಂದ ಅವರ ಪಾಲಕರಿಗೆ ತಿಳಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ‘ನಾವು ಮನುಜರು’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಲಾಯಿತು. ಗಣಪತಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ವಡಗೇರಾ, ಶಾಲೆಯ ಶಿಕ್ಷಕರಾದ ಚಂದ್ರಾಯ ಗೌಡ, ಎಚ್.ಬಿ. ಬಂಡಿ, ಶರಣಪ್ಪ ಸೂಡಿ, ಸುಮಾ, ಪ್ರೇಮಾ, ಜ್ಯೋತಿ, ಲಕ್ಷ್ಮಿ ಇದ್ದರು. ಚಂದ್ರಾಯಗೌಡ ನಿರೂಪಿಸಿದರು. ಪಕ್ಷಿ ವಾಹನ ಸಹಶಿಕ್ಷಕರು ವಂದಿಸಿದರು.

----

.....ಬಾಕ್ಸ್.....

ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ-ಪರಶುರಾಮ್ 10ನೇ ತರಗತಿ, ದ್ವಿತೀಯ-ರಾಧಿಕಾ 9ನೇ ತರಗತಿ ಮತ್ತು ತೃತೀಯ-ಸ್ವಾತಿ 9ನೇ ಸ್ಥಾನ. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ-ತರುಣ್ ಕುಮಾರ್ 9ನೆ ತರಗತಿ, ದ್ವಿತೀಯ-ಸೌಂದರ್ಯ ಶರಣಪ್ಪ, ತೃತೀಯ-ನಿಖಿಲಾ ಹಾಗೂ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಮೋದಿನ್, ದ್ವಿತೀಯ ಪರಶುರಾಮ, ತೃತೀಯ ಚಂದ್ರಶೇಖರ್ 9ನೇ ತರಗತಿ ವಿದ್ಯಾರ್ಥಿಗಳು ಸ್ಥಾನಗಳನ್ನು ಪಡೆದರು.

----

22ವೈಡಿಆರ್7: ವಡಗೇರಾ ತಾಲೂಕಿನ ಹಾಲಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಮಣ್ಣು ಆರೋಗ್ಯ ಚೀಟಿ ಸಂಪೂರ್ಣತಾ ಅಭಿಯಾನ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಮಣ್ಣಿನ ಆರೋಗ್ಯ ಕುರಿತು ಪ್ರಬಂಧ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.