ಮಕ್ಕಳಿಗೆ ಸಂಸ್ಕೃತಿ ಅರಿವು ಮೂಡಿಸಿ

| Published : Nov 07 2024, 11:53 PM IST

ಸಾರಾಂಶ

ಮಕ್ಕಳ ಮನಸ್ಸು ಸದಾ ಕ್ರಿಯಾಶೀಲವಾಗಿರುತ್ತದೆ ಮತ್ತು ಗ್ರಹಿಕೆಯ ಶಕ್ತಿ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಪರಂಪರೆಯ ಮೌಲ್ಯಯುತ ಅರಿವನ್ನು ನೀಡಿದರೆ ಉತ್ತಮ ಪ್ರಜೆಯಾಗಿ ರೂಪಿಸಬಹುದು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುರೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಸೊರಬ

ಮಕ್ಕಳ ಮನಸ್ಸು ಸದಾ ಕ್ರಿಯಾಶೀಲವಾಗಿರುತ್ತದೆ ಮತ್ತು ಗ್ರಹಿಕೆಯ ಶಕ್ತಿ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ ಪರಂಪರೆಯ ಮೌಲ್ಯಯುತ ಅರಿವನ್ನು ನೀಡಿದರೆ ಉತ್ತಮ ಪ್ರಜೆಯಾಗಿ ರೂಪಿಸಬಹುದು ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಸುರೇಶ್ ಹೇಳಿದರು.ಬುಧವಾರ ತಾಲೂಕಿನ ಎನ್. ಹೊಳೆಕಟ್ಟೆ (ಹೊಸೂರು) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಶಿಗ್ಗಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸಾಂಸ್ಕೃತಿಕ ಚಟುವಟಿಕೆಗಳ ಪ್ರತಿಭಾ ಕಾರಂಜಿ ಮಕ್ಕಳಿಲ್ಲರುವ ನೈಜ ಪ್ರತಿಭೆಯನ್ನು ಹೊರ ತರಲು ಉತ್ತಮ ವೇದಿಕೆಯಾಗಿದ್ದು, ಪೋಷಕರು ಮತ್ತು ಶಿಕ್ಷಕರು ಮಕ್ಕಳ ಪ್ರತಿಭೆಗೆ ಸ್ಪಂದಿಸಬೇಕು ಎಂದರು.ರಾಜ್ಯ ಗ್ರಾಮೀಣ ಶಿಕ್ಷಕರ ಬಳಗದ ಪ್ರಧಾನ ಕಾರ್ಯದರ್ಶಿ ಹಾಲೇಶ್ ನವುಲೆ ಮಾತನಾಡಿ, ಗ್ರಾಮೀಣ ಪರಿಸರದ ಸೊಗಡಿನ ಪ್ರತಿಭೆಗಳು ದೊಡ್ಡಮಟ್ಟದಲ್ಲಿ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಕಾರ್ಯಕ್ರಮಗಳು ಮೆಟ್ಟಿಲಾಗಿ ಕೆಲಸ ಮಾಡುತ್ತವೆ ಎಂದರು.ಶಿಗ್ಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ವಿ. ರವೀಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿಯರಾದ ಕಾಂಚನ ಮತ್ತು ಶೋಭಾ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸಿ.ಆರ್.ಪಿ.ಗಳಾದ ಎ.ಜಿ. ರಾಘವೇಂದ್ರ, ಮತ್ತು ಸುದರ್ಶನ್ ಶಿಕ್ಷಕರಾದ ಭೀಮರಾಜ್, ಶಿಗ್ಗಾ ಗ್ರಾಮ ಪಂಚಾಯತಿ ಸದಸ್ಯ ನಾಗಪ್ಪ, ಕುಂದಗಸವಿ ಸರ್ಕಾರಿ ಕಿ.ಪ್ರಾ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಎಲ್. ನೋಪಿಶಂಕರ, ಜಿ.ಎಚ್. ವೀರೇಶ್, ನಿಂಗಪ್ಪ, ಗೋಪಾಲ್, ಮುಖ್ಯ ಶಿಕ್ಷಕರಾದ ಚಂದ್ರಪ್ಪ, ಅಲ್ಮೇಡ, ಶಕುಂತಲಾ, ಅಶೋಕ್, ಕಾಂಚನ, ಚೈತ್ರ, ಜ್ಯೋತಿ, ಶೃತಿ, ಅಂಜನಪ್ಪ, ಪರಶುರಾಮ, ಗ್ರಾಮಸ್ಥರಾದ ಮಂಜಪ್ಪ, ಚೌಡಪ್ಪ, ಕೃಷ್ಣಮೂರ್ತಿ ಸೇರಿದಂತೆ ಮೊದಲಾದವರಿದ್ದರು.