ಮಕ್ಕಳಿಗೆ ಸ್ಪರ್ಧೆ ಬಗ್ಗೆ ಆಸಕ್ತಿ ಮೂಡಲಿ

| Published : Aug 31 2024, 01:34 AM IST

ಸಾರಾಂಶ

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿ ಎಂದು ಮುಖ್ಯಶಿಕ್ಷಕ ಚಂದ್ರಶೇಖರ್ ನಾಯಕ್ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗುರುತಿಸಲು ಪ್ರತಿಭಾ ಕಾರಂಜಿ ಸಹಕಾರಿ ಎಂದು ಮುಖ್ಯಶಿಕ್ಷಕ ಚಂದ್ರಶೇಖರ್ ನಾಯಕ್ ಹೇಳಿದರು.

ತಾಲೂಕಿನ ಮೀನಕುಂಟನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಆಟ, ಸ್ಪರ್ಧೆ, ಮನರಂಜನೆಗೆ ಬಗ್ಗೆ ಆಸಕ್ತಿ ಮೂಡಿಸಲಾಗುತ್ತಿದೆ ಎಂದರು.ರಂಗೋಲಿ ಸ್ಪರ್ಧೆ, ನೃತ್ಯ ಪ್ರದರ್ಶನ, ಬೀದಿ ನಾಟಕ, ಗ್ರಾಮದೇವತೆ ವಿವಿಧ ಪ್ರತಿಭೆಗಳ ಅಭಿನಯ ಗಮನ ಸೆಳೆಯಿತು. ಸ್ವರ್ಧೆಯಲ್ಲಿ ಪ್ರತಿಭೆ ಅನಾವರಣಗೊಳಿಸಿದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಆರ್.ಪೆದ್ದರೆಡ್ಡಿ, ಗ್ರಾಪಂ ಅಧ್ಯಕ್ಷೆ ಸರಿತಾ ಬಾಬು, ಉಪಾಧ್ಯಕ್ಷೆ ಮುತ್ಯಾಲಕ್ಕ, ಸದಸ್ಯರಾದ ನಾಗರಾಜು, ಅರುಣಾ ಸುಬ್ಬರೆಡ್ಡಿ, ಶಿಕ್ಷಕರಾದ ಓಂಕಾರಪ್ಪ, ನಾಗೇಂದ್ರ ಇದ್ದರು.