ಸಾರಾಂಶ
ಚಳ್ಳಕೆರೆ: ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಾಮೀಣ ಭಾಗದಲ್ಲಿ ವಸತಿ ಶಾಲೆ ಆರಂಭಿಸುವ ಮೂಲಕ ಕಳೆದ ಹತ್ತಾರು ವರ್ಷಗಳಿಂದ ಸಾವಿರಾರು ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡಿ, ಅವರ ಶೈಕ್ಷಣಿಕ ಪ್ರಗತಿಗೆ ಕಾರಣವಾದ ವೇದಾ ವಿದ್ಯಾಸಂಸ್ಥೆ ತನ್ನ ವೇದೋತ್ಸವ ಕಾರ್ಯಕ್ರಮದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇಯಾದ ವಿಶೇಷ ಸ್ಥಾನ ಪಡೆದಿದೆ ಎಂದು ಶಾಸಕ ಟಿ.ರಘುಮೂರ್ತಿ ಪ್ರಶಂಸೆ ವ್ಯಕ್ತಪಡಿಸಿದರು.
ತಾಲೂಕಿನ ಸಾಣೀಕೆರೆ ಬಳಿ ಇರುವ ವೇದಾ ವಿದ್ಯಾಸಂಸ್ಥೆ ವೇದೋತ್ಸವ ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಾಗುತ್ತಿವೆ ಎಂಬ ಆರೋಪವನ್ನು ದೂರ ಮಾಡುವಂತೆ ವೇದವಿದ್ಯಾಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಶಿಸ್ತು ಮತ್ತು ಶಿಕ್ಷಣ ಎರಡೂ ಈ ವಿದ್ಯಾಸಂಸ್ಥೆಯಲ್ಲಿ ಸಮ್ಮಿಡಿತವಾಗಿವೆ ಎಂದರು.
ಕಾರ್ಯಕ್ರಮದ ಆಕರ್ಷಣೆ ಎಂಬುವಂತೆ ಚಲನಚಿತ್ರನಟ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಪ್ರಣಯ ರಾಜ ಶ್ರೀನಾಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಈ ಹಿಂದೆ ನಾವೆಲ್ಲಾ ವಿದ್ಯಾಬ್ಯಾಸ ಮಾಡುವಾಗ ಯಾವುದೇ ಸೌಲಭ್ಯಗಳು ನಮ್ಮಲ್ಲಿ ಇರಲಿಲ್ಲ. ಬೆಂಗಳೂರಿನಂತಹ ಬೃಹತ್ ನಗರದಲ್ಲೂ ಸಹ ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು. ಆದರೆ, ವೇದಾ ವಿದ್ಯಾ ಸಂಸ್ಥೆ ನಗರ ಪರಿಸರವನ್ನು ಬಿಟ್ಟು ಗ್ರಾಮೀಣ ಪರಿಸರದಲ್ಲೇ ಸ್ಥಾಪನೆಯಾಗಿ ವಸತಿ ಶಾಲೆಯ ಮೂಲಕ ಯಾವ ವಿದ್ಯಾರ್ಥಿಗೂ ಯಾವುದೇ ಕೊರತೆ ಉಂಟಾಗದಂತೆ ಶಿಕ್ಷಣ ನೀಡುತ್ತಿದೆ. ಇಂತಹ ವಿದ್ಯಾಸಂಸ್ಥೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಈ ವಿದ್ಯಾಸಂಸ್ಥೆ ಜಿಲ್ಲಾ, ರಾಜ್ಯ ಮಟ್ಟ ವಿದ್ಯಾಸಂಸ್ಥೆಯಾಗಿ ಹೊರಹೊಮ್ಮಲಿ ಎಂದು ಹಾರೈಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾಸಂಸ್ಥೆ ವತಿಯಿಂದ ಚಿತ್ರನಟ ಶ್ರೀನಾಥರವರಿಗೆ ವೇದಾಕಾಯಕರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಿ.ಟಿ.ರವೀಂದ್ರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹುಟ್ಟಿಬೆಳೆದ ನನಗೆ ಉನ್ನತ್ತ ಶಿಕ್ಷಣ ಕಲಿಯುವ ಹಂಬಲವಿತ್ತು. ಆದರೆ, ಯಾವುದೇ ಸೌಲಭ್ಯವಿರಲಿಲ್ಲ. ಇದು ಕೇವಲ ನಮ್ಮೊಬ್ಬನಿಗೆ ಮಾತ್ರ ಸೀಮಿತವಾಗದೆ ಗ್ರಾಮೀಣ ಭಾಗದ ಸಾವಿರಾರು ಬಡ ಕುಟುಂಬದ ವಿದ್ಯಾರ್ಥಿಗಳು ಉನ್ನತ್ತ ಶಿಕ್ಷಣ ಮರೀಚಿಕೆಯಾಗಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶಿಕ್ಷಣ ಕನಸುನನಸು ಮಾಡುವ ಸಂಕಲ್ಪ ಮಾಡಿ ಎಲ್ಲರ ಸಹಕಾರದಿಂದ ಗ್ರಾಮೀಣ ಭಾಗದಲ್ಲಿಯೇ ನಮ್ಮ ವೇದಾವಿದ್ಯಾಸಂಸ್ಥೆಯನ್ನು ಆರಂಭಿಸಿದ್ದೇವೆ. ಎಲ್ಲರ ಸಹಕಾರದಿಂದ ಈ ವಿದ್ಯಾರ್ಥಿ ಸಂಸ್ಥೆ ಹಂತ, ಹಂತವಾಗಿ ಅಭಿವೃದ್ದಿಪಥದತ್ತ ಸಾಗುತ್ತಿದೆ. ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ಬೋಧಕ, ಬೋಧಕೇತರ ವರ್ಗ, ಪೋಷಕರು ಹಾಗೂ ಸಹಕಾರ ನೀಡಿದ ಎಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಇಲಾಖೆಯ ಪುಟ್ಟಸ್ವಾಮಿ, ಹಿರಿಯ ಸಹಕಾರಿ ದುರೀಣ ಆರ್.ಮಲ್ಲೇಶಪ್ಪ, ಪ್ರಗತಿಪರ ರೈತ ದಿನೇಶ್‌ರೆಡ್ಡಿ, ಆರ್.ಎ.ದಯಾನಂದಮೂರ್ತಿ, ಮಲ್ಲಿಕಾರ್ಜುನಪ್ಪ, ಪ್ರಸನ್ನಕುಮಾರ್, ರವಿನಾಯಕ, ಎಸ್.ಬಿ.ರಾಜು, ಕೃಷ್ಣಾರೆಡ್ಡಿ, ಪ್ರಾಂಶುಪಾ¯ರಾದ ಪುಪ್ಪರಾಣಿ, ಸುಗುಣ, ಕಾರ್ಯದರ್ಶಿಡಿ.ಆರ್.ಕಿರಣ್, ಪ್ರಧಾನ ವ್ಯವಸ್ಥಾಪಕ ಆರ್.ವಿಜಯ್, ದಿವ್ಯ ಆಲೂರು ಮುಂತಾದವರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನೆ ಕಾರ್ಯಕ್ರಮ ನಡೆದವು.