ಸಾರಾಂಶ
ಅಧ್ಯಕ್ಷತೆ ವಹಿಸಿದ್ದ ಸುರೇಶ ಪವಾರ ಮಾತನಾಡಿ, ವಿಕಲತೆ ಎಂಬುದು ವಿಕಲಚೇತನರಿಗೆ ಶಾಪವಲ್ಲ, ಅದೊಂದು ವರ ಎಂದು ನೀವೆಲ್ಲರೂ ಭಾವಿಸಬೇಕು
ಗದಗ: ವಿಶೇಷಚೇತನರಲ್ಲಿಯೂ ಸಹ ಸಮಾಜ ಕಾರ್ಯ ಮನೋಭಾವನೆ ಇರುತ್ತವೆ, ಅವುಗಳನ್ನು ಗೌರವಿಸಬೇಕಾಗಿರುವುದು ಜನಸಾಮಾನ್ಯರ ಕರ್ತವ್ಯವಾಗಿದೆ, ಅವರ ಹಕ್ಕುಗಳಿಗೆ ನಾವು ಮನ್ನಣೆ ಕೊಡಬೇಕು ಎಂದು ಎಂಆರ್‌ಡಬ್ಲೂ ಖಾಜಾಹುಸೆನ್ ಕಾತರಕಿ ಹೇಳಿದರು.
ಅವರು ತಾಲೂಕಿನ ನಾಗಾವಿ ಗ್ರಾಮದಲ್ಲಿ ನಡೆದ ವಿಶೇಷಚೇತರ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿ, ವಿಕಲಚೇತನರ ಯೋಜನೆಯ ರೂಪರೇಷ, ವಿಕಲಚೇತನರ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ದೊರಕುವ ಸೌಲಭ್ಯಗಳ ಮಾಹಿತಿ ನೀಡುತ್ತ 21 ವಿಕಲತೆಯ ಬಗ್ಗೆ ವಿವರಿಸಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಿರಿಯ ನಾಗರಿಕರಿಗೆ ಬರುವಂತ ಸೌಲಭ್ಯಗಳ ಮಾಹಿತಿ ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಸುರೇಶ ಪವಾರ ಮಾತನಾಡಿ, ವಿಕಲತೆ ಎಂಬುದು ವಿಕಲಚೇತನರಿಗೆ ಶಾಪವಲ್ಲ, ಅದೊಂದು ವರ ಎಂದು ನೀವೆಲ್ಲರೂ ಭಾವಿಸಬೇಕು. ಏಕೆಂದರೆ ಸಾಮಾನ್ಯ ವ್ಯಕ್ತಿಗಳ ಮಾಡದೇ ಇರುವ ಅನೇಕ ಸಾಧನೆಗಳನ್ನು ವಿಕಲಚೇತನರು ಮಾಡಿ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸದಿಂದ ಸಾಕಷ್ಟು ಸಾಧನೆ ಮಾಡಿದ್ದಾರೆ. 2016 ಕಾಯ್ದೆ ನಂತರ ಸಹ ಸಾಮಾನ್ಯರಂತೆ ಜೀವನ ಪ್ರಾರಂಭಿಸಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮವನ್ನು ವಿಆರ್‌ಡಬ್ಲೂ ಶಿವನಗೌಡ ಪಾಟೀಲ ನಿರೂಪಿಸಿದರು. ಈ ಗ್ರಾಮ ಸಭೆಯಲ್ಲಿ ಗ್ರಾಪಂ ಸದ್ಯಸ ಸುಮಾ ತಳವಾರ, ಪಾರವ್ವ ಗೊರವರ, ಸರಸ್ವತಿ ಮರಬರಡ್ಡಿ, ಮೀರಾಬಾಯಿ ಲಮಾಣಿ, ಗೌರಿ ತೋಟದ, ಯಮನಪ್ಪ ಬಾಗಲಕೋಟ, ಪಿಡಿಓ ಬಿ.ಎಚ್. ಬಚ್ಚೇನಹಳ್ಳಿ, ಕಾರ್ಯದರ್ಶಿ ಗಣೇಶ ಪೂಜಾರ ಸೇರಿದಂತೆ ನಾಗಾವಿಯ ಹಿರಿಯ ನಾಗರಿಕರು ಮತ್ತು ವಿಶೇಷಚೇತನರ, ಸಾರ್ವಜನಿಕರು ಭಾಗವಹಿಸಿದ್ದರು.