ದೇಶಾಭಿವೃದ್ಧಿಗೆ ಅವಕಾಶಗಳ ಸದ್ಬಳಕೆಯಾಗಲಿ

| Published : Mar 02 2024, 01:46 AM IST

ದೇಶಾಭಿವೃದ್ಧಿಗೆ ಅವಕಾಶಗಳ ಸದ್ಬಳಕೆಯಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಅಮೃತ್ ಕಾಲ್ 'ನವ ಭಾರತ'ಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿ 2047 ಆಗಿದೆ. ಇದು ದೇಶಕ್ಕೆ ಹೊಸ ಉದಯವಾಗಿದೆ, ಇದು ರಾಷ್ಟ್ರದ ಆಕಾಂಕ್ಷೆಗಳನ್ನು ಪೂರೈಸುವ ಅವಕಾಶವನ್ನು ತರುತ್ತದೆ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ದೃಷ್ಟಿಯಿಂದ ಅಮೃತ್ ಕಾಲ್ ವಿಮರ್ಶ್- ವಿಕ್ಸಿತ್ ಭಾರತ್- 2047ರ ಅಡಿಯಲ್ಲಿ ಯುವ ಜನತೆಯ ಪಾತ್ರ ಮತ್ತು ಸಲಹೆಗಳು ಬಹು ಮುಖ್ಯ ಎಂದು ಎಸ್ ಜೆಸಿಐಟಿಯ ಪ್ರಾಂಶುಪಾಲ ಡಾ.ಜಿ.ಟಿ.ರಾಜು ಹೇಳಿದರು. ನಗರ ಹೊರವಲಯದ ಎಸ್ ಜೆ ಸಿ ತಾಂತ್ರಿಕ ಮಹಾವಿದ್ಯಾಲಯ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಶಿಕ್ಷಣ ಸಚಿವಾಲಯ ಭಾರತ ಸರ್ಕಾರ ಮತ್ತು ಎ.ಐ.ಸಿ.ಟಿ.ಇ ಮಾರ್ಗಸೂಚಿಗಳ ಪ್ರಕಾರ ಆಯೋಜಿಸಿದ್ದ ಅಮೃತ್ ಕಾಲ್ ವಿಮರ್ಶ್-ವಿಕಸಿತ್ ಭಾರತ್-2047 ರ ಭಾರತದಲ್ಲಿ ಏರೋಸ್ಪೇಸ್ ಕೈಗಾರಿಕೆಗಳ ಪಾತ್ರ ಎಂಬ ವಿಷಯದಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತೀಯರಾದ ನಾವು ವಿಕ್ಸಿತ್ ಭಾರತ್-2047ಗೆ ಪೂರಕವಾಗುವಂತೆ ಅಗಾದವಾದ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ನಮ್ಮ ರಾಷ್ಟ್ರವನ್ನು ಅಭಿವೃದ್ಧಿ ಹೊಂದಿದ ಶ್ರೀಮಂತ ರಾಷ್ಟ್ರವಾಗಿ ಪರಿವರ್ತಿಸುವಲ್ಲಿ ಶ್ರಮವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು. ಬೆಂಗಳೂರಿನ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಎಂ.ಸಿ.ಎಸ್.ಆರ್.ಡಿ.ಸಿಯ ಜನರಲ್ ಮ್ಯಾನೇಜರ್ ಕೆ.ಹೆಚ್.ಗಣಪತಿಕೃಷ್ಣ ಮಾತನಾಡಿ, ಅಮೃತ್ ಕಾಲ್ ''''''''ನವ ಭಾರತ''''''''ಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಷ್ಟಿ 2047 ಆಗಿದೆ. ಇದು ದೇಶಕ್ಕೆ ಹೊಸ ಉದಯವಾಗಿದೆ, ಇದು ರಾಷ್ಟ್ರದ ಆಕಾಂಕ್ಷೆಗಳನ್ನು ಪೂರೈಸುವ ಅವಕಾಶವನ್ನು ತರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಎಸ್ ಜೆಸಿಐಟಿ ಕುಲಸಚಿವ ಜೆ.ಸುರೇಶ್,ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಪ್ರೊ. ಮನೀಷ್, ವೈಮಾನಿಕ ವಿಭಾಗ ಮುಖ್ಯಸ್ಥೆ ಡಾ.ಎಂ.ಎಸ್ ದೀಪ, ಹೆಚ್.ಆರ್ ವಿಭಾಗದ ಪ್ರೋ.ಎನ್.ವಿ.ಶಶಿಕುಮಾರ್, ವಿದ್ಯಾರ್ಥಿಗಳು ಇದ್ದರು.