ವಿಕಲಚೇತನರಿಗೆ ಹಕ್ಕುಗಳ ಅರಿವು ಮೂಡಿಸಿ

| Published : Aug 09 2024, 12:34 AM IST

ಸಾರಾಂಶ

ವಿಕಲಚೇತನರ ಸಂರಕ್ಷಣೆಗಾಗಿ ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ, ಜತೆಗೆ ಅವರ ಅಭಿವೃದ್ದಿಗೂ ಹಲವು ಯೋಜನೆಗಳನ್ನು ನೀಡಿದೆ, ಈ ಹಕ್ಕು ಮತ್ತು ಯೋಜನೆಗಳ ಕುರಿತು ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ, ಅವರ ಪೋಷಣೆ ಮಾಡುವವರು ಇದನ್ನು ಕೊಡಿಸುವ ಕೆಲಸದಲ್ಲಿ ನಿರತರಾಗಬೇಕು

ಕನ್ನಡಪ್ರಭ ವಾರ್ತೆ ಕೋಲಾರವಿಕಲಚೇತನ ಮಕ್ಕಳ ಹಕ್ಕುಗಳನ್ನು ರಕ್ಷಿಸಲು ೨೦೧೬ರಲ್ಲಿ ಕಾಯ್ದೆ ಜಾರಿಗೆ ಬಂದಿದ್ದು, ಇತರೆಲ್ಲಾ ವ್ಯಕ್ತಿಗಳಂತೆ ಅವರೂ ಹಕ್ಕುಗಳನ್ನು ಹೊಂದಿದ್ದಾರೆ. ಅವರ ಹಕ್ಕುಗಳ ರಕ್ಷಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗಿದ್ದು, ಉಚಿತ ಕಾನೂನು ನೆರವು ನೀಡಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ್‌ ಎಸ್.ಹೊಸಮನಿ ತಿಳಿಸಿದರು.ಬಸವಶ್ರೀ ವಿದ್ಯಾಸಂಸ್ಥೆಯಿಂದ ನಗರದ ಅಂತರಗಂಗೆ ವಿಕಲಚೇತನ ಮಕ್ಕಳ ವಿದ್ಯಾಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.ಮಾರ್ಗದರ್ಶನ ನೀಡಬೇಕು

ವಿಕಲಚೇತನರ ಸಂರಕ್ಷಣೆಗಾಗಿ ಸರ್ಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ, ಜತೆಗೆ ಅವರ ಅಭಿವೃದ್ದಿಗೂ ಹಲವು ಯೋಜನೆಗಳನ್ನು ನೀಡಿದೆ, ಈ ಹಕ್ಕು ಮತ್ತು ಯೋಜನೆಗಳ ಕುರಿತು ಅವರಿಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ, ಅವರ ಪೋಷಣೆ ಮಾಡುವವರು ಇದನ್ನು ಕೊಡಿಸುವ ಕೆಲಸದಲ್ಲಿ ನಿರತರಾಗಬೇಕು ಎಂದರು.ಹಿರಿಯ ನಾಗಕರ ರಕ್ಷಣೆಗೆ ಕಾನೂನು

ಅದೇ ರೀತಿ ಹಿರಿಯ ನಾಗರೀಕರ ರಕ್ಷಣೆಗಾಗಿ ೨೦೦೭ರಲ್ಲಿ ಕಾನೂನು ಜಾರಿಗೆ ಬಂದಿದೆ, ಮಕ್ಕಳಿಂದ, ಕುಟುಂಬದಿಂದ ದೌರ್ಜನ್ಯಕ್ಕೆ ಒಳಗಾಗಿ ಮನೆಯಿಂದ ಹೊರಗೆ ಹಾಕಿಸಿಕೊಂಡು ಜೀವನ ನಡೆಸಲು ಕಷ್ಟಪಡುವ ಹಿರಿಯ ನಾಗರೀಕರು ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ, ಅವರಿಗೆ ಜೀವನಾಂಶ ಪಡೆಯಲು, ವಸತಿ ಸೌಲಭ್ಯ ಪಡೆಯಲು ಸಹಾಯಕ ಉಪವಿಭಾಗಾಧಿಕಾರಿ ಮುಂದೆ ಅರ್ಜಿ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂಬುದರ ಕುರಿತು ಎನ್ನೆಸ್ಸೆಸ್ ವಿದ್ಯಾರ್ಥಿಗಳು ಅರಿವು ಮೂಡಿಸಬೇಕು ಎಂದರು.ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರು, ಮಕ್ಕಳು, ವಿಕಲಚೇತನರಿಗೆ ಉಚಿತ ಕಾನೂನು ನೆರವು ನೀಡುವ ಸೌಲಭ್ಯವಿದ್ದು, ಇದರ ಪ್ರಯೋಜನ ಪಡೆದುಕೊಳ್ಳಲು ಅವರಿಗೆ ವಿದ್ಯಾರ್ಥಿಗಳು ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.ಶಾಲೆಯಲ್ಲಿ ಸ್ವಚ್ಛತಾ ಕಾರ್ಯ

ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಎನ್ನೆಸ್ಸೆಸ್ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಶ್ರಮದಾನ ಮಾಡಬೇಕು, ಗಾಂಧೀಜಿ ಆದರ್ಶದಂತೆ ಈ ಶಾಲೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಈ ಮಕ್ಕಳಿಗೆ ನೆರವು ನೀಡಿ ಎಂದು ಕಿವಿಮಾತು ಹೇಳಿದರು.ಮಾದಕ ವಸ್ತು ಬಳಸಬೇಡಿ

ಕಾನೂನು ಅಧೀನದಲ್ಲಿ ನಾವು ಭ್ರೂಣ ವ್ಯವಸ್ಥೆಯಿಂದ ಸಾಯುವವರೆಗೂ ಇರಬೇಕಾಗುತ್ತದೆ, ದೈನಂದಿನ ಕಾನೂನುಗಳ ಅರಿವು ಪಡೆದುಕೊಂಡರೆ ನಾವು ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ತನ್ನ ಕದಂಬ ಬಾಹುಗಳನ್ನು ಚಾಚಿರುವ ಆತಂಕವಿದ್ದು, ಇದರ ವಿರುದ್ದ ಎಚ್ಚರವಹಿಸಿ, ಯಾವುದೇ ಕಾರಣಕ್ಕೂ ನೀವು ಮಾದಕ ವ್ಯಸನಿಗಳಾಗದಿರಿ ಎಂದು ಸಲಹೆ ನೀಡಿದರು. ಅಂತರಗಂಗೆ ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಕೆ.ಎಸ್.ಶಂಕರ್, ಎನ್ನೆಸ್ಸೆಸ್ ಅಧಿಕಲಾರಿ ಜಿ.ವಿನೋದ್‌ಕುಮಾರ್ ಇದ್ದರು. ಶೀಬಿರದಲ್ಲಿ ೧೨೦ ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಮಕ್ಕಳು ಪಾಲ್ಗೊಂಡಿದ್ದರು.