ಸಾರಾಂಶ
ಕನ್ನಡಪ್ರಭ ವಾರ್ತೆ, ಹನೂರು
ಮಹಾಲಿಂಗನ ಕಟ್ಟೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಎಂ .ಆರ್. ಮಂಜುನಾಥ್ ತಿಳಿಸಿದರು.ಮಹಾಲಿಂಗನ ಕಟ್ಟೆಯ ಚಾಮುಲ್ ಒಕ್ಕೂಟದ ವತಿಯಿಂದ ಆಯೋಜಸಲಾಗಿದ್ದ ಶಾಸಕರಿಗೆ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕರಿಗೆ ಮೆರವಣಿಗೆ ಮೂಲಕ ಸ್ವಾಗತ ಮಾಡಲಾಯಿತು, ನಂತರ ಮಹಾಲಿಂಗನ ಕಟ್ಟೆಯ ಗ್ರಾಮ ದೇವತೆ ಮಾರಮ್ಮ ದೇವಸ್ಥಾನಕ್ಕೆ ತೆರಳಿ ಮಾರಮ್ಮನ ದರ್ಶನ ಮಾಡಿ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕರು ಮಹಾಲಿಂಗನ ಕಟ್ಟೆ ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಅದಲ್ಲದೆ ರಸ್ತೆ, ನೀರು, ಸಮುದಾಯ ಭವನ, ಇನ್ನಿತರ ಮೂಲಭೂತ ಸೌಕರ್ಯಗಳನ್ನೂ ಕಲ್ಪಿಸಲು ನಾನು ನನ್ನ ಪ್ರಯತ್ನ ಮೀರಿ ಶ್ರಮಿಸುತ್ತೇನೆ, ಜೊತೆಗೆ ಹಗಳಿರುಲು ನನ್ನ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ ಎಂಬುದನ್ನು ತಿಳಿಸಿದರು.ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರಿಗೆ ಶಾಸಕರಿಂದ ಸನ್ಮಾನಿಸಲಾಯಿತು, ಅಧ್ಯಕ್ಷ ಕುಮಾರ್, ಉಪಾಧ್ಯಕ್ಷರಾದ ರುದ್ರಸ್ವಾಮಿ, ಹಾಗೂ ಸದಸ್ಯರಾದ ರುದ್ರಣ್ಣ, ಶಿವನಪ್ಪ, ಪ್ರಭುಸ್ವಾಮಿ, ಮಹಾದೇವಪ್ರಭು, ದೀಪಕ್, ಶೈಲ, ರಾಜಮ್ಮ ಹಾಗೂ ಗ್ರಾಪಂ ಸದಸ್ಯರು ಜಡೇಸ್ವಾಮಿ, ಮಲ್ಲೇಶ್ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಜಿಪಂ ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಚಾಮುಲ್ ನಿರ್ದೇಶಕರಾದ ಉದ್ದನೂರು ಪ್ರಸಾದ್, ಸದಸ್ಯರಾದ ಮಲ್ಲೇಶ್, ಮುಖಂಡರಾದ ರಾಜುಗೌಡ, ಮಂಜೇಶ್, ಬಸಪ್ಪನದೊಡ್ಡಿ ರಫೀಕ್, ಉದ್ದನೂರು ಗಿರೀಶ್, ಪ್ರಮೋದ್, ಪಾಳ್ಯ ಗೋಪಾಲ್ ನಾಯ್ಕ, ವಿಜಯ್ ಕುಮಾರ್, ಪ್ರಸನ್ನಕುಮಾರ್, ಇನ್ನಿತರ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))