ಸಾರಾಂಶ
ಚಿತ್ರದುರ್ಗ: ಆರೋಗ್ಯ ಕೆಡಿಸುವ ಜಂಕ್ ಪುಡ್ ಕಡೆಗೆ ಮಕ್ಕಳ ಮನಸ್ಸು ಜಾರದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಮಕ್ಕಳ ಆರೋಗ್ಯದ ಬಗ್ಗೆ ಸದಾ ಗಮನ ಕೊಡಬೇಕು ಎಂದು ಮಕ್ಕಳ ತಜ್ಞರಾದ ಡಾ.ಪೃಥ್ವೀಶ್ ಸಲಹೆ ನೀಡಿದರು. ನಗರದ ಶ್ರೀ ವೆಂಕಟರಮಣ ದೇವಸ್ಥಾನದ ಸಮುದಾಯ ಭವನದಲ್ಲಿ ಬಸವೇಶ್ವರ ನಗರ ಶ್ರೀಸಾಯಿ ಲಿಟ್ಲ್ ಹಾರ್ಟ್ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಮಕ್ಕಳ ಅರೋಗ್ಯ ಸುಧಾರಣೆಗೆ ನ್ಯೂಟ್ರಿಷನ್, ಹಣ್ಣು, ತರಕಾರಿ ಯಥೇಚ್ಛವಾಗಿ ನೀಡಬೇಕೆಂದರು. ಮಗುವಿನ ಬೆಳವಣಿಗೆಯ ಮೊದಲೆರಡು ವರ್ಷಗಳ ಅವಧಿಯಲ್ಲಿ ಮಕ್ಕಳಿಗೆ ಮೊಬೈಲ್ ನೀಡಲೇಬಾರದು. ಮೊಬೈಲ್ ಹಾಗೂ ಟಿವಿ ನೋಡಲು ಹೆಚ್ಚು ಸಮಯ ವ್ಯರ್ಥ ಮಾಡದೆ, ಚಟುವಟಿಕೆ ಆಧಾರಿತ ಕಲಿಕೆಯಲ್ಲಿ ಮಕ್ಕಳು ತೊಡಗಿಕೊಳ್ಳುವಂತೆ ಪೋಷಕರು ಮೇಲ್ವಿಚಾರಣೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು. ಸಂಸ್ಥೆಯ ಮುಖ್ಯಸ್ಥ ನಾಗಭೂಷಣ್, ಪವಿತ್ರ ನಾಗಭೂಷಣ್, ತಾಪಂ ಮಾಜಿ ಸದಸ್ಯರಾದ ಈರಣ್ಣ, ಆರ್ ವಿಜಯಕುಮಾರ್, ಶಾಲೆಯ ಪ್ರಿನ್ಸಿಪಾಲ್ ಜಲಜಾಕ್ಷಿ ಬಿಜೆ, ಶಿಕ್ಷಕಿ ಚೂಡಾಮಣಿ, ಗೀತಾ, ನಾಗವೇಣಿ, ಕವಿತಾ ಇದ್ದರು.
---ಫೋಟೊ: ಚಿತ್ರದುರ್ಗದಲ್ಲಿ ಶ್ರೀಸಾಯಿ ಲಿಟ್ಲ್ ಹಾರ್ಟ್ ಶಾಲೆಯ ವಾರ್ಷಿಕೋತ್ಸವ ನಡೆಯಿತು.
;Resize=(128,128))
;Resize=(128,128))
;Resize=(128,128))
;Resize=(128,128))