ಸಂವಿಧಾನ ಜಾಥಾ ಕಾರ್ಯಕ್ರಮ ಯಶಸ್ವಿಗೊಳಿಸಿ: ಮೋಹನ ಕೊರಡ್ಡಿ

| Published : Feb 12 2024, 01:35 AM IST

ಸಾರಾಂಶ

ಲೋಕಾಪುರ: ಸಂವಿಧಾನ ದಿನ ನಿಮಿತ್ತ ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ಪಟ್ಟಣದಲ್ಲಿ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣಾಧಿಕಾರಿ ಮೋಹನ ಕೊರಡ್ಡಿ ಹೇಳಿದರು. ಪಟ್ಟಣ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್‌ ಶ್ರೇಷ್ಠ ಸಂವಿಧಾನ ಕೊಟ್ಟಿದ್ದರಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಹೋದರತ್ವದಿಂದ ಎಲ್ಲರೂ ಬಾಳುತ್ತಿದ್ದೇವೆ. ಸದೃಢ ಭಾರತಕ್ಕಾಗಿ ಸಂವಿಧಾನದ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸುವುದೇ ಜಾಥಾ ಉದ್ದೇಶ, ಪಟ್ಟಣದಲ್ಲಿ ಫೆ.೨೨ರಂದು ನಡೆಯಲಿರುವ ಕಾಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಸಂವಿಧಾನ ದಿನ ನಿಮಿತ್ತ ನಡೆಯಲಿರುವ ಸಂವಿಧಾನ ಜಾಗೃತಿ ಜಾಥಾ ಪಟ್ಟಣದಲ್ಲಿ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸಮಾಜ ಕಲ್ಯಾಣಾಧಿಕಾರಿ ಮೋಹನ ಕೊರಡ್ಡಿ ಹೇಳಿದರು.

ಪಟ್ಟಣ ಪಂಚಾಯತಿಯಲ್ಲಿ ಸಂವಿಧಾನ ಜಾಗೃತಿ ಜಾಥಾ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್‌ ಶ್ರೇಷ್ಠ ಸಂವಿಧಾನ ಕೊಟ್ಟಿದ್ದರಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಹೋದರತ್ವದಿಂದ ಎಲ್ಲರೂ ಬಾಳುತ್ತಿದ್ದೇವೆ. ಸದೃಢ ಭಾರತಕ್ಕಾಗಿ ಸಂವಿಧಾನದ ಕುರಿತು ಪ್ರತಿಯೊಬ್ಬರಲ್ಲಿ ಅರಿವು ಮೂಡಿಸುವುದೇ ಜಾಥಾ ಉದ್ದೇಶ, ಪಟ್ಟಣದಲ್ಲಿ ಫೆ.೨೨ರಂದು ನಡೆಯಲಿರುವ ಕಾಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲರೂ ಶ್ರಮಿಸಬೇಕು ಎಂದರು.

ಕಂದಾಯ ನಿರೀಕ್ಷಕ ಸತೀಶ ಬೇವೂರ ಮಾತನಾಡಿ, ಸಂವಿಧಾನದ ಮೌಲ್ಯಗಳನ್ನು ಜೀವಂತವಾಗಿರಸಬೇಕೆಂಬ ಉದ್ದೇಶದಿಂದ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಹೊರಡಿಸಿದೆ. ಸಂವಿಧಾನ ಮಹಿಳೆಯರಿಗೆ ವಾಕ್ ಸ್ವಾತಂತ್ರ್ಯ ನೀಡಿ ಬದುಕು ಕಟ್ಟಿಕೊಳ್ಳುವ ಹಕ್ಕು ನೀಡಿದೆ. ಆದ್ದರಿಂದ ಎಲ್ಲರೂ ಸಂವಿಧಾನ ಹಕ್ಕು ಮರೆಯಬಾರದು ಎಂದರು.

ಕಾರ್ಯಕ್ರಮದ ಯಶಸ್ವಿಗೆ ಪಟ್ಟಣ ಪಂಚಾಯತಿ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಟ್ಟಣದ ಮುಖಂಡರು, ಯುವಕರು, ಸಂವಿಧಾನ ಜಾಗೃತಿ ಜಾಥಾ ಯಶಸ್ವಿಗೊಳಿಸಲು ಮನವಿ ಮಾಡಿದರು.

ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಜ್ಯೋತಿ ಉಪ್ಪಾರ ಮಾತನಾಡಿ, ಪಟ್ಟಣ ಪಂಚಾಯತಿ ವತಿಯಿಂದ ಡಂಗೂರ ಸಾರಲಾಗುವುದು. ಧ್ವನಿವರ್ಧಕ ಅಳವಡಿಸಿ ಜಾಥಾಕ್ಕೆ ಗೌರವಪೂರ್ವಕವಾಗಿ ಸ್ವಾಗತ ಕೋರಲಾಗುವುದು, ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು. ವಿವಿಧ ಬಡಾವಣೆಗಳಲ್ಲಿ ಜಾಗೃತಿ ಜಾಥಾ, ವಿವಿಧ ಕಲಾ ಮೇಳಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಗುವುದು ಎಂದರು.

ಸಭೆಯಲ್ಲಿ ಮುಖಂಡರಾದ ಲೋಕಣ್ಣ ಕತ್ತಿ, ಮಹೇಶ ಹುಗ್ಗಿ, ಮಹೇಶ ಮಳಲಿ, ಗೋವಿಂದ ಕೌಲಗಿ, ವಕೀಲರಾದ ಸಂಗಮೇಶ ಪಲ್ಲೇದ, ಅರುಣ ಮುಧೋಳ, ಮಾರುತಿ ರಂಗಣ್ಣವರ, ವಸಂತಗೌಡ ಪಾಟೀಲ, ಬಿ.ಎಲ್. ಬಬಲಾದಿ, ಪಿಕೆಪಿಎಸ್ ಅಧ್ಯಕ್ಷ ಹೊಳಬಸು ಕಾಜಗಾರ, ದುರ್ಗಪ್ಪ ಮಾದರ, ಮೋಹನ ರೊಡ್ಡಪ್ಪನವರ, ಭೀಮನಗೌಡ ಪಾಟೀಲ, ಸದಾಶಿವ ಹಗ್ಗದ, ವಿನೋದ ಘೋರ್ಪಡೆ, ರಮೇಶ ದೇವರಡ್ಡಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ದಲಿತ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.