ಸಾರಾಂಶ
ಸಾಂಸ್ಕೃತಿಕ ಉತ್ಸವದಂತ ಕಾರ್ಯಕ್ರಮಗಳು ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಇದರಿಂದ ಮಕ್ಕಳಿಗೆ ತಮ್ಮ ಸಾಮರ್ಥ್ಯದ ಅರಿವಾಗಿ ಮುಂದಿನ ದಿನದಲ್ಲಿ ಮತ್ತಷ್ಟು ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ
ಕನ್ನಡಪ್ರಭ ವಾರ್ತೆ ಬನ್ನೂರು
ಪಟ್ಟಣದ ಸಮೀಪದ ಮಲಿಯೂರು ಜಿಪಿಪಿ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸಾಂಸ್ಕೃತಿಕ ಉತ್ಸವದ ಕಾರ್ಯಕ್ರಮ ನೆರವೇರಿತು. ವಿವಿಧ ವೇಷ ಭೂಷಣ ತೊಟ್ಟಂತ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಕರಾಟೆ ಮತ್ತು ಯೋಗದಂತ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯದರ್ಶಿ ಜಿ.ಪಿ. ಪ್ರಸನ್ನ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಶಿಕ್ಷಣ ನೀಡುವುದರಿಂದ ಮುಂದಿನ ದಿನದಲ್ಲಿ ಅವರು ಉತ್ತಮ ಭವಿಷ್ಯವನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲ ಎನ್.ಎಂ. ಮಂಚು ಮಾತನಾಡಿ, ಸಾಂಸ್ಕೃತಿಕ ಉತ್ಸವದಂತ ಕಾರ್ಯಕ್ರಮಗಳು ಮಕ್ಕಳಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಇದರಿಂದ ಮಕ್ಕಳಿಗೆ ತಮ್ಮ ಸಾಮರ್ಥ್ಯದ ಅರಿವಾಗಿ ಮುಂದಿನ ದಿನದಲ್ಲಿ ಮತ್ತಷ್ಟು ಮಾನಸಿಕವಾಗಿ ಸದೃಢರಾಗಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಲ್. ವೆಂಕಟೇಶ್ ಮೂರ್ತಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಎನ್.ಎಂ. ಮಂಚು, ಕಾರ್ಯದರ್ಶಿ ಜಿ.ಪಿ. ಪ್ರಸನ್ನ, ಮಲಿಯೂರು ಗ್ರಾಪಂ ಪಿಡಿಒ ಸಿ. ಪುಟ್ಟಸ್ವಾಮಿ, ನಿವೃತ್ತ ಮುಖ್ಯೋಪಾದ್ಯಾಯ ಬಿ.ಎಲ್. ವೆಂಕಟೇಶ್ ಮೂರ್ತಿ, ನಂಜುಂಡಯ್ಯ, ಕೆಂಪೇಗೌಡ, ಮಂಜುಳಾ ಇದ್ದರು.