ಸಾರಾಂಶ
ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ 82ನೇ ಜನ್ಮದಿನ ಪ್ರಯುಕ್ತ ಪ್ರೊ.ಎಚ್.ಟಿ ಪೋತೆ ಅವರು ಬರೆದ ಬಾಬಾಸಾಹೇಬರೆಡೆಗೆ ಖರ್ಗೆ ಜೀವನ ಕಥನ ಎಂಬ ಜೀವನ ಚರಿತ್ರೆ ಪುಸ್ತಕವನ್ನು ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಗೆ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೀದರ್
ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ 82ನೇ ಜನ್ಮದಿನ ಪ್ರಯುಕ್ತ ಪ್ರೊ.ಎಚ್.ಟಿ ಪೋತೆ ಅವರು ಬರೆದ ಬಾಬಾಸಾಹೇಬರೆಡೆಗೆ ಖರ್ಗೆ ಜೀವನ ಕಥನ ಎಂಬ ಅವರ ಜೀವನ ಚರಿತ್ರೆ ಪುಸ್ತಕವನ್ನು ಆಯ್ದ ಹವ್ಯಾಸಿ ಓದುಗರಿಗೆ ಮತ್ತು ಗಣ್ಯ ವ್ಯಕ್ತಿಗಳಿಗೆ ಡಾ.ಮಲ್ಲಿಕಾರ್ಜುನ ಖರ್ಗೆ ಅಭಿಮಾನಿ ಬಳಗ ಹಾಗೂ ನಮ್ಮ ಬೀದರ್ ಯುವ ಚೇತನ ಅಭಿವೃದ್ಧಿ ಸಂಘ ಹಾರೂರಗೇರಿ ವತಿಯಿಂದ 53 ಪುಸ್ತಕ ವಿತರಿಸಲಾಯಿತು.ಕಳೆದ ಏಳು ವರ್ಷದಿಂದ ಖರ್ಗೆ ಅವರ ಜನ್ಮ ದಿನದ ಪ್ರಯುಕ್ತ ಸಂಘವು ಬುದ್ಧಿಮಾಂದ್ಯ, ನಿರಾಶ್ರಿತ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿಯಂತಹ ಕಾರ್ಯಕ್ರಮ ಆಯೋಜಿಸುವುದರ ಮೂಲಕ ವಿಭಿನ್ನವಾಗಿ ಆಚರಿಸಲಾಗಿದೆ.
ಈ ವರ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಚರಿತ್ರೆ ಪುಸ್ತಕ ವಿತರಿಸುವುದರ ಮೂಲಕ ಆಚರಿಸಲಾಯಿತು.ಇತ್ತಿಚೇಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರಿಗೆ ಪುಸ್ತಕ ವಿತರಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಪ್ರದೀಪ್ ಕಾಂಬ್ಳೆ, ಉಪಾಧ್ಯಕ್ಷ ರಜನಿಕಾಂತ್ ತಾರೆ, ಸದಸ್ಯರಾದ ಪ್ರೀತಂ ಸಾದುರೆ, ಪ್ರಶಾಂತ್ ಹೂಗಾರ್, ಅಬ್ರಹಾಂ, ಸೋಮನಾಥ್, ಗಣಪತಿ ಹಾವೇ, ಉಮೇಶ್ ಜೈನೂರ್, ರೋಹನ್ ವಾಘಮಾರೆ, ಸುರೇಶ್ ತಾರೆ, ಚಿನ್ನಾ, ಆಕಾಶ್ ಕಾವೆ, ಸಶಿಕಾಂತ ಮೇತ್ರೆ, ಹಿರಿಯರಾದ ಅರ್ಜುನರಾವ್ ಹಾವೇ, ಸುಭಾಷ್ ಲಾಡೇ, ವಿನೋದ್ ಅಪ್ಪೆ ಹಾಗೂ ಸುಭಾಷ್ ನೆಹರೂ ಉಪಸ್ಥಿತರಿದ್ದರು.