ಭಾರತೀಯ ಸಂಗೀತ ಇತಿಹಾಸದಲ್ಲಿ ಸಂಗೀತದ ಧೀಮಂತರಾದ ಪಂಡಿತ್ ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನಸೂರ, ಡಾ. ಗಂಗೂಬಾಯಿ ಹಾನಗಲ್ ಮತ್ತು ಬಸವರಾಜ ರಾಜಗುರು ಸೇರಿದಂತೆ ಅನೇಕರು ಸಂಗೀತದ ಮೂಲಕ ಧಾರವಾಡದ ಹೆಸರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ್ದಾರೆ.

ಧಾರವಾಡ:

ಪ್ರಸಕ್ತ ವರ್ಷದ ಡಾ. ಮಲ್ಲಿಕಾರ್ಜುನ ಮನಸೂರ ಹೆಸರಿನ ರಾಷ್ಟ್ರೀಯ ಪ್ರಶಸ್ತಿಯನ್ನು ಪುಣೆಯ ವಿದುಷಿ ಅಲಕಾ ದೇವ್‌ ಮಾರುಲ್ಕರ್‌ ಅವರಿಗೆ ಇಲ್ಲಿಯ ಆಲೂರು ವೆಂಕಟರಾವ್‌ ಭವನದಲ್ಲಿ ಮನಸೂರ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯು ಸಂಗೀತ ದಿಗ್ಗಜರ ಕರ್ಮಭೂಮಿ. ಸಂಗೀತದಿಂದಲೇ ಜಿಲ್ಲೆಯ ಹೆಸರು ವಿಶ್ವವ್ಯಾಪಿಯಾಗಿ ಪಸರಿಸಿದೆ. ಭಾರತೀಯ ಸಂಗೀತ ಇತಿಹಾಸದಲ್ಲಿ ಸಂಗೀತದ ಧೀಮಂತರಾದ ಪಂಡಿತ್ ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನಸೂರ, ಡಾ. ಗಂಗೂಬಾಯಿ ಹಾನಗಲ್ ಮತ್ತು ಬಸವರಾಜ ರಾಜಗುರು ಸೇರಿದಂತೆ ಅನೇಕರು ಸಂಗೀತದ ಮೂಲಕ ಧಾರವಾಡದ ಹೆಸರನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ್ದಾರೆ ಎಂದರು.

ಕಲಾವಿದೆ ನೀಲಾ ಎಂ. ಕೊಡ್ಲಿ ಮಾತನಾಡಿದರು. ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಗಾಯಕ ಡಾ. ಹರೀಶ ಹೆಗಡೆ ಹಾಗೂ ಗದಗ ಜಿಲ್ಲೆಯ ತಬಲಾ ವಾದಕ ಡಾ. ನಾಗಲಿಂಗ ಮುರಗಿ ಅವರಿಗೆ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಥಣಿಯ ಸಿದ್ಧಲಿಂಗ ಸ್ವಾಮೀಜಿ ಸಾನ್ನಧ್ಯ ವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಎಂ. ವೆಂಕಟೇಶ ಕುಮಾರ, ಸದಸ್ಯರಾದ ಅಕ್ಕಮಹಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ಕುಮಾರ ಬೆಕ್ಕೇರಿ ಪಾಲ್ಗೊಂಡಿದ್ದರು.