ಇಲ್ಲಿನ ಮಲ್ಪೆಯ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನವು ಕಡಲಕಿನಾರೆಯ ‘ಆನಂದ ಶರಧಿ’ಯಲ್ಲಿ ಆಯೋಜಿಸಿರುವ 14 ದಿನಗಳ ಭಜನಾ ಸ್ಪರ್ಧೆಯನ್ನು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಸಿ, ಅನುಗ್ರಹ ಸಂದೇಶ ನೀಡಿದರು.

ಉಡುಪಿ: ಇಲ್ಲಿನ ಮಲ್ಪೆಯ ಶ್ರೀಕೃಷ್ಣ ಪರಿಸರ ಪ್ರತಿಷ್ಠಾನವು ಕಡಲಕಿನಾರೆಯ ‘ಆನಂದ ಶರಧಿ’ಯಲ್ಲಿ ಆಯೋಜಿಸಿರುವ 14 ದಿನಗಳ ಭಜನಾ ಸ್ಪರ್ಧೆಯನ್ನು ಸೋದೆ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಮತ್ತು ಅದಮಾರು ಕಿರಿಯ ಮಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಉದ್ಘಾಟಸಿ, ಅನುಗ್ರಹ ಸಂದೇಶ ನೀಡಿದರು.

ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ, ಕಟೀಲು ದೇವಸ್ಥಾನದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಮಾಜಿ ಶಾಸಕ ಕೆ. ರಘುಪತಿ ಭಟ್, ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕರಾದ ಡಾ. ಜಿ.ಎಸ್. ಚಂದ್ರಶೇಖರ್, ಉಜ್ವಲ್ ಡೆವಲಪರ್ಸ್‌ನ ಮಾಲೀಕ ಪುರುಷೋತ್ತಮ ಶೆಟ್ಟಿ, ಉದ್ಯಮಿಗಳಾದ ಸಾಧು ಸಾಲಿಯಾನ್, ಕೊರಗ ಸಮಾಜದ ಅಧ್ಯಕ್ಷ ಗಣೇಶ್ ಬಾರ್ಕೂರು, ಆರ್ ಎಸ್ಎಸ್ ಮಂಗಳೂರು ವಿಭಾಗದ ಕಾರ್ಯವಾಹ ಡಾ. ವಾದಿರಾಜ್, ಶ್ರೀಕೃಷ್ಣ ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ರತ್ನ ಕುಮಾರ್, ಕಲಾಶ್ರೀ ಮಹೋಪಾಧ್ಯಾಯ ಮಧೂರು ಪಿ. ಬಾಲಸುಬ್ರಹ್ಮಣ್ಯ, ಉದ್ಯಮಿಗಳಾದ ದಿನೇಶ್ ಪುತ್ರನ್ ಉಪಸ್ಥಿತರಿದ್ದರು.

ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಿಂದ ಆನಂದ ಶರಧಿ ತನಕ ಉಭಯ ಶ್ರೀಪಾದರ ಉಪಸ್ಥಿತಿಯಲ್ಲಿ ಗಣ್ಯರು, ಸಮಿತಿ ಸಂಚಾಲಕರು, ಸದಸ್ಯರು, ಹಲವಾರು ಭಜನಾ ತಂಡಗಳ ಸದಸ್ಯರು, ಕುಣಿತ ಭಜನೆಯೊಂದಿಗೆ ಶೋಭಾ ಯಾತ್ರೆ ನಡೆಯಿತು.