ಮಲ್ಪೆ: ಹುಟ್ಟೂರಿನಲ್ಲಿ ಜಯನ್ನ್‌ ಮಲ್ಪೆಗೆ ಸನ್ಮಾನ

| Published : Oct 03 2025, 01:07 AM IST

ಸಾರಾಂಶ

ಸರ್ಕಾರ ಇತ್ತೀಚೆಗೆ ದಲಿತ ಸಂಘಟಕ ಜಯನ್ ಮಲ್ಪೆ ಅವರಿಗೆ ಡಾ.ಬಾಬು ಜಗಜೀವನ ರಾಂ ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನಲೆಯಲ್ಲಿ ಮಲ್ಪೆಯ ಸರಸ್ವತಿ ಮಹಿಳಾ ಸಾಂಸ್ಕೃತಿಕ ಕಲಾತಂಡ ಹಾಗೂ ಸರಸ್ವತಿ ಜಾನಪದ ಕಲಾತಂಡದವರು ಸನ್ಮಾನಿಸಿದರು.

ಮಲ್ಪೆ: ಕರ್ನಾಟಕ ಸರ್ಕಾರ ಇತ್ತೀಚೆಗೆ ದಲಿತ ಸಂಘಟಕ ಜಯನ್ ಮಲ್ಪೆ ಅವರಿಗೆ ಡಾ.ಬಾಬು ಜಗಜೀವನ ರಾಂ ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನಲೆಯಲ್ಲಿ ಮಲ್ಪೆಯ ಸರಸ್ವತಿ ಮಹಿಳಾ ಸಾಂಸ್ಕೃತಿಕ ಕಲಾತಂಡ ಹಾಗೂ ಸರಸ್ವತಿ ಜಾನಪದ ಕಲಾತಂಡದವರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿವೃತ ಮುಖ್ಯೋಪಾಧ್ಯಾಯ ವಾಸುದೇವ ಮಾಸ್ತರ್ ಮಾತನಾಡಿ, ನಿಸ್ವಾರ್ಥವಾಗಿ ಯಾರು ತಮ್ಮನ್ನು ದಲಿತ ಚಳವಳಿಗೆ ಸಮರ್ಪಿಸಿಕೊಳ್ಳುತ್ತಾರೋ ಅಂತಹವರನ್ನು ಪ್ರಶಸ್ತಿ ಕೀರ್ತಿ ಹುಡುಕಿಕೊಂಡು ಬರುತ್ತದೆ.ಆದರೆ ದಲಿತ ಸಂಘಟನೆಯ ಹೆಸರಿನಲ್ಲಿ ಯಾರು ಸಂಪತ್ತು ಮತ್ತು ಪ್ರಚಾರದ ಬೆನ್ನು ಹತ್ತುತ್ತಾರೋ ಅವರು ದಲಿತ ಸಮಾಜದಲ್ಲಿ ಪತನಗೊಳ್ಳುತ್ತಾರೆ ಎಂದರು.ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ಹಲವು ದಶಕಗಳಿಂದ ಜಯನ್ ಮಲ್ಪೆ ಕಟ್ಟಿದ ದಲಿತ ಚಳುವಳಿ ಕೆಲವರ ಸ್ವಾರ್ಥಕ್ಕಾಗಿ ಬಲಿಯಾದರೂ ಎಂದೂ ಹತಾಶೆಗೊಳ್ಳದೆ ಈ ನೆಲದಲ್ಲಿ ಸಂಘಟನೆಯನ್ನು ಕಟ್ಟಿ ಯುವಜನಾಂಗದಲ್ಲಿ ಸ್ವಾಭಿಮಾನ, ಸ್ವಾವಲಂಬನೆಯನ್ನು ತುಂಬಿಸಿ ಹೋರಾಟದ ಬದುಕು ತಂದಿದ್ದಾರೆ ಎಂದರು.ಗ್ರಂಥಪಾಲಕಿ ಯಶೋದ ರಮೇಶ್ ಪಾಲ್ ಮಾತನಾಡಿ, ಜಯನ್ ಮಲ್ಪೆ ಅವರಿಗೆ ಯಾವುದೇ ಅರ್ಜಿ ನೀಡದೆ ಸರಕಾರವೇ ಗುರುತಿಸಿ ಪ್ರಶಸ್ತಿ ನೀಡಿರುವುದು ಸಂತೋಷದ ವಿಷಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾತಂಡದ ತೇಜಶ್ವಿನಿ ರಾಜೇಶ್‌ ವಹಿಸಿದ್ದರು.

ವೇದಿಕೆಯಲ್ಲಿ ಸರಸ್ವತಿ ಜಾನಪದ ಕಲಾತಂಡದ ಅಧ್ಯಕ್ಷ ಸದಾನಂದ ಬಲರಾಮನಗರ, ಹರೀಶ್ ಸಲ್ಯಾನ್, ರಾಜೇಶ್, ದಯಾಕರ್ ಮಲ್ಪೆ, ಪ್ರಸಾದ್, ಪ್ರಮೀಳ ಎಚ್., ವನಿತಾ, ದೀಪಿಕಾ, ಪೂರ್ಣಿಮ, ಸುಜಾತ, ವಿನೋದ, ಅಶ್ವಿನಿ, ಲೀಲಾವತಿ ಮುಂತಾದವರು ಇದ್ದರು. ಗೀತಾ ಬಲರಾಮನಗರ ಸ್ವಾಗತಿಸಿದರು. ಧರಿತ್ರಿ ವಂದಿಸಿದರು. ದೀಪಿಕ ಮೋಹನ್ ನಿರೂಪಿಸಿದರು.