ಮಾಲೂರಿನ ಹಸಾಂಡಹಳ್ಳಿ, ಸೀತನಾಯಕನಹಳ್ಳಿ ಗಮನ ಸೆಳೆವ ಸಖಿ ಮತಗಟ್ಟೆಗಳು

| Published : Apr 26 2024, 12:46 AM IST

ಮಾಲೂರಿನ ಹಸಾಂಡಹಳ್ಳಿ, ಸೀತನಾಯಕನಹಳ್ಳಿ ಗಮನ ಸೆಳೆವ ಸಖಿ ಮತಗಟ್ಟೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕರು, ಕಾವಲಗಾರ, ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲಿದೆ.

ಕನ್ನಡಪ್ರಭ ವಾರ್ತೆ ಟೇಕಲ್

ಮಾಲೂರು ತಾಲೂಕಿನಲ್ಲಿ ಇಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಲು ಹಾಗೂ ಮತಗಟ್ಟೆ ಆಕರ್ಷಕವಾಗಿ ಇರಲು, ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಟೇಕಲ್‌ನ ಕೆಜಿ ಹಳ್ಳಿ ಮತಗಟ್ಟೆ, ಹಾಸಂಡಹಳ್ಳಿ, ಸೀತ ನಾಯಕನಹಳ್ಳಿಗಳಲ್ಲಿ ಸಖಿ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಸಖಿ ಮತಗಟ್ಟೆಗಳನ್ನು ನಿರ್ಮಿಸಿರುವುದರಿಂದ ಮತ ಹಾಕಲು ಹೆಚ್ಚು ಜನರು ಉತ್ಸಾಹದಿಂದ ಬರುತ್ತಾರೆ ಎಂದು ತಾಪಂ ಇಒ ವೀಣಾ ತಿಳಿಸಿದರು. ಟೇಕಲ್‌ನ ಕೆಜಿ ಹಳ್ಳಿಯ ಸಖಿ ಮತಗಟ್ಟೆ ಸಂಖ್ಯೆ ೧೦೫ನ್ನು ವೀಕ್ಷಿಸಿ ಮಾತನಾಡಿದ ಅವರು, ಬೇರೆ ಮತಗಟ್ಟೆಗಳಿಗಿಂತ ಇದು ಭಿನ್ನವಾಗಿದ್ದು, ಸ್ವಚ್ಛವಾಗಿ ಸಿಂಗರಿಸಲಾಗಿದೆ, ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುವ ಸಲುವಾಗಿ ಮತಗಟ್ಟೆ ಅಧಿಕಾರಿಯಿಂದ ಹಿಡಿದು ಮತಗಟ್ಟೆ ಸಹಾಯಕರು, ಕಾವಲಗಾರ, ಸಿಬ್ಬಂದಿವರೆಗೂ ಸಂಪೂರ್ಣವಾಗಿ ಮಹಿಳೆಯರಿಂದಲೇ ನಿರ್ವಹಿಸಲಿದೆ. ಮಹಿಳೆಯರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲು ಹಾಗೂ ಚುನಾವಣೆ ಮುಖ್ಯ ವಾಹಿನಿಗೆ ಮಹಿಳೆಯರನ್ನು ಸೆಳೆಯುವ ಉದ್ದೇಶದಿಂದ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಈ ಮತಗಟ್ಟೆಯಲ್ಲಿ ಅತಿ ಹೆಚ್ಚು ಮಹಿಳಾ ಮತದಾರರು ಮತ ಚಲಾಯಿಸುತ್ತಾರೆ, ಒಟ್ಟು ಈ ಮತಗಟ್ಟೆಯಲ್ಲಿ ೮೩೦ ಮತದಾರರು ಇದ್ದು, ಮಹಿಳೆಯರು ೪೪೯, ಪುರುಷ ಮತದಾರರು ೩೮೧ ಇದ್ದಾರೆ ಎಂದರು. ತಾಪಂನ ಸುರೇಶ್ ಬಾಬು, ಪಿಡಿಒ ಮಂಜುಳಾ, ಮತಗಟ್ಟೆ ಅಧಿಕಾರಿಗಳಾದ ಶಶಿಧರ್, ಕೆ.ಎನ್.ಮಂಜುನಾಥ, ಗ್ರಂಥಾಲಯ ಮೇಲ್ವಿಚಾರಕಿ ಮುನಿರತ್ನಮ್ಮ, ಸಿಬ್ಬಂದಿ ಭೈರಪ್ಪ, ರಾಮಯ್ಯ ಇದ್ದರು.