ಸಾರಾಂಶ
ಕೃಷಿ ಕಾರ್ಮಿಕನೊಬ್ಬ ತನಗೆ ಕಚ್ಚಿದ ಕೊಳಕು ಮಂಡಲ ಹಾವನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ ಘಟನೆ ಗುರುವಾರ ಬೇಲೂರು ಪಟ್ಟಣದಲ್ಲಿ ನಡೆದಿದೆ. ಆಸ್ಪತ್ರೆಗೆ ಹಾವು ಹಿಡಿದುಕೊಂಡು ಬಂದಿದ್ದ ಮುತ್ತುವನ್ನು ನೋಡಿ ಸಿಬ್ಬಂದಿ ಬೆಚ್ಚಿಬಿದ್ದರು. ವೈದ್ಯೆ ಡಾ. ಸುಧಾ ಮುತ್ತುವಿಗೆ ತಕ್ಷಣ ಚಿಕಿತ್ಸೆ ನೀಡಿದರು. ಹಾರೋಹಳ್ಳಿ ಗಡಿ ಬಳಿ ಮೆಕ್ಕೆಜೋಳ ಕಟಾವು ಮಾಡುವಾಗ ಹಾವೇರಿ ಮೂಲದ ಮುತ್ತು (40)ವರ್ಷ ಎಂಬ ರೈತ ಕೊಳಕು ಮಂಡಲ ಹಾವಿನ ಕಡಿತಕ್ಕೆ ಒಳಗಾಗಿದ್ದಾನೆ.
ಬೇಲೂರು: ಕೃಷಿ ಕಾರ್ಮಿಕನೊಬ್ಬ ತನಗೆ ಕಚ್ಚಿದ ಕೊಳಕು ಮಂಡಲ ಹಾವನ್ನು ಪ್ಲಾಸ್ಟಿಕ್ ಕವರಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ ಘಟನೆ ಗುರುವಾರ ಬೇಲೂರು ಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಹಾರೋಹಳ್ಳಿ ಗಡಿ ಬಳಿ ಮೆಕ್ಕೆಜೋಳ ಕಟಾವು ಮಾಡುವಾಗ ಹಾವೇರಿ ಮೂಲದ ಮುತ್ತು (40)ವರ್ಷ ಎಂಬ ರೈತ ಕೊಳಕು ಮಂಡಲ ಹಾವಿನ ಕಡಿತಕ್ಕೆ ಒಳಗಾಗಿದ್ದಾನೆ. ತಕ್ಷಣವೇ ಆತ ಹಾವನ್ನು ಹಿಡಿದು ಪ್ಲಾಸ್ಟಿಕ್ ಕರ್‌ನಲ್ಲಿ ಹಾಕಿಕೊಂಡು ಬೇಲೂರು ತಾಲೂಕು ಆಸ್ಪತ್ರೆಗೆ ಧಾವಿಸಿದ್ದಾನೆ. ಆಸ್ಪತ್ರೆಗೆ ಹಾವು ಹಿಡಿದುಕೊಂಡು ಬಂದಿದ್ದ ಮುತ್ತುವನ್ನು ನೋಡಿ ಸಿಬ್ಬಂದಿ ಬೆಚ್ಚಿಬಿದ್ದರು. ವೈದ್ಯೆ ಡಾ. ಸುಧಾ ಮುತ್ತುವಿಗೆ ತಕ್ಷಣ ಚಿಕಿತ್ಸೆ ನೀಡಿದರು. ಮುತ್ತು ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.