ಬ್ಯಾಡಗಿ ತಾಲೂಕಿನ ತಡಸ ಗ್ರಾಮದಲ್ಲಿ ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

| Published : Aug 05 2025, 01:30 AM IST

ಬ್ಯಾಡಗಿ ತಾಲೂಕಿನ ತಡಸ ಗ್ರಾಮದಲ್ಲಿ ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಇಬ್ಬರ ನಡುವೆ ವಾಗ್ವಾದವಾಗಿ ಜಗಳ ವಿಕೋಪಕ್ಕೆ ಹೋಗಿದೆ. ಬೆಳಗ್ಗೆ 4.30ರ ವರೆಗೆ ಇಬ್ಬರು ಜಗಳವಾಡಿದ್ದು, ಮನೆಯಲ್ಲಿದ್ದ ಚಾಕುವಿನಿಂದ ಹೆಂಡತಿಗೆ ಹಲವು ಬಾರಿ ಇರಿದಿದ್ದಾನೆ. ಇದರಿಂದ ಪವಿತ್ರಾ ನರಳಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.

ಬ್ಯಾಡಗಿ: ಪತ್ನಿಯ ಅನೈತಿಕ ಸಂಬಂಧದಿಂದ ಬೇಸತ್ತ ಪತಿಯೋರ್ವ ಪತ್ನಿಯನ್ನೇ ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ತಡಸ ಗ್ರಾಮದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಮೃತ ದಂಪತಿಗಳನ್ನು ತಡಸ ಗ್ರಾಮದ ನಿವಾಸಿಗಳಾದ ಪವಿತ್ರಾ ಹಡಗಲಿ(30) ರವಿ ಹಡಗಲಿ(34) ಎಂದು ಗುರುತಿಸಲಾಗಿದೆ ಘಟನೆ ಹಿನ್ನೆಲೆ: ಬ್ಯಾಡಗಿ ಪಟ್ಟಣದ ಯುವತಿ ಪವಿತ್ರಾ ಹಡಗಲಿಯನ್ನು ಕಳೆದೊಂದು ದಶಕದ ಹಿಂದೆ ತಡಸ ಗ್ರಾಮದ ರವಿ ಹಡಗಲಿ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಇವರಿಗೆ ಇಬ್ಬರು ಪುತ್ರರು ಇದ್ದರು. ಪವಿತ್ರಾ ಅವರ(ಅನೈತಿಕ ಸಂಬಂಧದ) ಬಗ್ಗೆ ರವಿಗೆ ಗೊತ್ತಾಗುತ್ತ ಹೋಗಿದ್ದು, ಹಲವು ಬಾರಿ ರವಿ ಇದನ್ನೆಲ್ಲ ಬಿಟ್ಟುಬಿಡು ಎಂದು ಹೇಳಿದ್ದ. ದಂಪತಿ ಮಧ್ಯೆ ಮನಸ್ತಾಪ ಹೆಚ್ಚಾಗಿ ಸಣ್ಣಪುಟ್ಟ ಜಗಳ ನಡೆದಿದ್ದಲ್ಲದೇ ವಿಚ್ಚೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಲ್ಲದೇ ಬಳಿಕ ಮತ್ತೆ ಒಂದಾಗಿ ಜೀವನ ಸಾಗಿಸುತ್ತಿದ್ದರು.ಈ ವಿಷಯ ಗ್ರಾಮದಲ್ಲಿ ಗುಟ್ಟಾಗಿ ಉಳಿದಿರಲಿಲ್ಲ. ಇದರಿಂದ ರವಿ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ವೃತ್ತಿಯಲ್ಲಿ ಪ್ಲಂಬಿಂಗ್ ಕೆಲಸ ಮಾಡುತ್ತಿದ್ದ ಆತ ಹೆಂಡತಿ ವರ್ತನೆಯಿಂದ ಮನನೊಂದು ಮದ್ಯ ವ್ಯಸನಿಯಾಗಿದ್ದ.ಜಗಳ ಕೊನೆಗೆ ಕೊಲೆಯಲ್ಲಿ ಅಂತ್ಯ: ಸೋಮವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ಇಬ್ಬರ ನಡುವೆ ವಾಗ್ವಾದವಾಗಿ ಜಗಳ ವಿಕೋಪಕ್ಕೆ ಹೋಗಿದೆ. ಬೆಳಗ್ಗೆ 4.30ರ ವರೆಗೆ ಇಬ್ಬರು ಜಗಳವಾಡಿದ್ದು, ಮನೆಯಲ್ಲಿದ್ದ ಚಾಕುವಿನಿಂದ ಹೆಂಡತಿಗೆ ಹಲವು ಬಾರಿ ಇರಿದಿದ್ದಾನೆ. ಇದರಿಂದ ಪವಿತ್ರಾ ನರಳಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾಳೆ.ಮಕ್ಕಳಿಗೆ ತಿಂಡಿ ಕೊಡಿಸಿದ್ದ: ಕೊಲೆ ಮಾಡಿದ ನಂತರ ಮನೆಯಲ್ಲಿ ಮಲಗಿದ್ದ ಮಕ್ಕಳನ್ನು ಬೆಳಗ್ಗೆ ಬ್ಯಾಡಗಿ ಪಟ್ಟಣಕ್ಕೆ ಕರೆದುಕೊಂಡು ಬಂದು ತಿಂಡಿ ಕೊಡಿಸಿದ್ದ ರವಿ ನಂತರ ವಾಪಸ್ ತಡಸ ಗ್ರಾಮಕ್ಕೆ ತೆರಳಿದ್ದಾನೆ. ಹೆಂಡತಿಯ ಶವ ನೋಡಿ ಪಾಪಪ್ರಜ್ಞೆಯಿಂದ ಬಳಲಿದ್ದ ರವಿ ಸೋಮವಾರ ಮಧ್ಯಾಹ್ನ 12.30 ಗಂಟೆಯ ವೇಳೆಗೆ ಮನೆಯಲ್ಲಿ ನೇಣು ಬಿಗಿದು ಅದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಘಟನೆ ಕುರಿತಂತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.