ವಿಜಯಪುರ: ನಗರದ ಮುಬಾರಕ್ ಚೌಕ್ ಬಳಿ ಶುಕ್ರವಾರ ಸಂಜೆ ವ್ಯಕ್ತಿಯೋರ್ವನ ಬರ್ಬರ ಹತ್ಯೆ ನಡೆದಿದೆ.
ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಮುಬಾರಕ್ ಚೌಕ್ ಬಳಿ ಶುಕ್ರವಾರ ಸಂಜೆ ವ್ಯಕ್ತಿಯೋರ್ವನ ಬರ್ಬರ ಹತ್ಯೆ ನಡೆದಿದೆ. ಕಾಳಿಕಾ ನಗರದ ನಿವಾಸಿ ಶರಣು ಜೀವರ್ಗಿ (48) ಕೊಲೆಯಾದ ವ್ಯಕ್ತಿ. ಇವರು ಸ್ವಂತ ಫೈನಾನ್ಸ್ ನಡೆಸುತ್ತಿದ್ದು, ಶುಕ್ರವಾರ ಸಂಜೆ ಪಿಗ್ಮಿ ಕಲೆಕ್ಷನ್ ಗೆ ಬಂದಾಗ ಅಪರಿಚಿತ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸ್ಥಳಕ್ಕೆ ಗೋಲಗುಂಬಜ್ ಠಾಣೆ ಪೊಲೀಸರ ಭೇಟಿ ಪರಶೀಲನೆ ನಡೆಸಿದರು. ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.