ಸಾರಾಂಶ
ದೊಡ್ಡಬಳ್ಳಾಪುರ: ಗ್ರಾಮೀಣ ಯುವಕರು ಕೌಶಲ್ಯಾಧಾರಿತ ತರಬೇತಿ ಪಡೆದುಕೊಂಡು ಸ್ವಯಂ ಉದ್ಯೋಗಿಗಳಾಗಬೇಕು ಎಂದು ಎಚ್.ಎ.ನಾಗರಾಜು ಹೇಳಿದರು.
ದೊಡ್ಡಬಳ್ಳಾಪುರ: ಗ್ರಾಮೀಣ ಯುವಕರು ಕೌಶಲ್ಯಾಧಾರಿತ ತರಬೇತಿ ಪಡೆದುಕೊಂಡು ಸ್ವಯಂ ಉದ್ಯೋಗಿಗಳಾಗಬೇಕು ಎಂದು ಎಚ್.ಎ.ನಾಗರಾಜು ಹೇಳಿದರು.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರ, ಹಾಡೋನಹಳ್ಳಿ ಮತ್ತು ಹೈದರಾಬಾದ್‌ನ ಮ್ಯಾನೇಜ್ ಸಂಸ್ಥೆ ಸಹಯೋಗದಲ್ಲಿ ತೋಟಗಾರಿಕಾ ಬೆಳೆಗಳಲ್ಲಿ ಸವರಿಕೆ ಮತ್ತು ಆಕಾರ ನಿರ್ವಹಣೆ ಬಗ್ಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉದ್ಯೋಗಕ್ಕಾಗಿ ನಗರ-ಪಟ್ಟಣಗಳ ಕಡೆಗೆ ವಲಸೆ ಹೋಗುವುದನ್ನು ತಪ್ಪಿಸಿ, ಕೃಷಿಯನ್ನೇ ಲಾಭದಾಯಕವನ್ನಾಗಿಸಿ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಕೇಂದ್ರದ ಮುಖ್ಯಸ್ಥ ಡಾ. ಹನುಮಂತರಾಯ ಮಾತನಾಡಿ, ತೋಟಗಾರಿಕಾ ಬೆಳೆಗಳಲ್ಲಿ ಸವರಿಕೆ ಮತ್ತು ಆಕಾರ ನಿರ್ವಹಣೆಯಿಂದ ಉತ್ತಮ ಗುಣಮಟ್ಟ ಮತ್ತು ಇಳುವರಿ ಪಡೆಯಲು ಸಾಧ್ಯ, ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ಸವರಿಕೆಯ ನಿರ್ವಹಣೆ, ಹಣ್ಣಿನ ಗಿಡಗಳ ಲೇಔಟ್ ಮಾದರಿ, ಹೂವಿನ ಬೆಳೆಗಳಲ್ಲಿ ಕುಡಿ ಚಿವುಟುವಿಕೆ ಮತ್ತು ಸವರಿಕೆಯ ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.ಕೇಂದ್ರದ ವಿಜ್ಞಾನಿ ಡಾ. ಜಿ. ಈಶ್ವರಪ್ಪ, ಡ್ರಾಗನ್ ಹಣ್ಣಿನ ಬೆಳೆಯಲ್ಲಿ ಸವರಿಕೆ, ಆಕಾರ ನಿರ್ವಹಣೆ ಮತ್ತು ಇತರೆ ಬೆಳೆ ನಿರ್ವಹಣಾ ಕ್ರಮಗಳ ಬಗ್ಗೆ, ಬೇಸಾಯ ವಿಜ್ಞಾನಿ ಡಾ.ವೆಂಕಟೇಗೌಡ ತೋಟಗಾರಿಕಾ ಬೆಳೆಗಳಲ್ಲಿ ನೀರಿನ ನಿರ್ವಹಣೆಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ವಿಜ್ಞಾನಿ ಡಾ. ಪಿ.ವೀರನಾಗಪ್ಪ, ಡಾ.ಕೇಶವರೆಡ್ಡಿ, ತೋಟಗಾರಿಕಾ ಅಧಿಕಾರಿ ಬೀರೇಶ್ ವಿವಿಧ ವಿಚಾರಗಳ ಕುರಿತು ವಿಷಯ ಮಂಡನೆ ಮಾಡಿದರು.
ಪ್ರಗತಿ ಪರ ರೈತ ಮನು, ನೇರಳೆ ಮತ್ತು ಹಲಸಿನ ಗಿಡಗಳಲ್ಲಿ ಸವರಿಕೆ ಮತ್ತು ಆಕಾರ ನಿರ್ವಹಣೆಯ ಪ್ರಾತ್ಯಕ್ಷಿಕೆಯನ್ನು ಶಿಬಿರಾರ್ಥಿಗಳಿಗೆ ತೋರಿಸಿಕೊಟ್ಟರು. 6 ದಿನಗಳ ಶಿಬಿರದಲ್ಲಿ ಉತ್ತಮವಾಗಿ ನಿರ್ವಹಣೆ ಮಾಡಿದ್ದ ಸೀಬೆ ಮತ್ತು ದಾಳಿಂಬೆ ಹಾಗೂ ಡ್ರಾಗನ್ ಹಣ್ಣಿನ ತೋಟಗಳಿಗೆ ಕ್ಷೇತ್ರ ಭೇಟಿ ಏರ್ಪಡಿಸಲಾಗಿತ್ತು.15ಕೆಡಿಬಿಪಿ5-
ದೊಡ್ಡಬಳ್ಳಾಪುರ ತಾಲೂಕು ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗ್ರಾಮೀಣ ಯುವಕ ಮತ್ತು ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಆಯೋಜಿಸಲಾಗಿತ್ತು.