ವಿದ್ಯೆ ಚಿನ್ನದ ಗಟ್ಟಿ ಇದ್ದಂತೆ ಸಹಪಠ್ಯ ಚಿನ್ನದ ಆಭರಣವಿದ್ದಂತೆ

| Published : Aug 06 2024, 12:41 AM IST

ಸಾರಾಂಶ

ಸ್ಪರ್ಧೆಯಲ್ಲಿ ಗೆಲ್ಲೋದು ಸೋಲೋದು ಮುಖ್ಯ ಅಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದೇ ಚಾಂಪಿಯನ್ ಆದಂತೆ

ಕನ್ನಡಪ್ರಭ ವಾರ್ತೆ ಮೈಸೂರು

ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ಇಂಟ್ರ್ಯಾಕ್ಟ್ ಕ್ಲಬ್ ವತಿಯಿಂದ ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಕ್ಕಳಲ್ಲಿರುವ ವಿವಿಧ ಪ್ರತಿಭೆ ಹೊರತರುವ ಉದ್ದೇಶದಿಂದ ಸ್ಪರ್ಧಾ- 2024ಅನ್ನು ಉದ್ಘಾಟಿಸಲಾಯಿತು.

ಸ್ಪರ್ಧಾ - 2024 ರ ಪರ್ಯಾಯ ಪಾರಿತೋಷಕ ಪಡೆದ ಶಾರದಾ ಪಬ್ಲಿಕ್ ಸ್ಕೂಲ್, ರನ್ನರ್ಅಪ್ ಅನ್ನು ಸದ್ವಿದ್ಯಾ ಪ್ರೌಢಶಾಲೆ ಪಡೆಯಿತು.

ಮಾನಸ ಕುಟೀರ ವಿಶೇಷ ಶಾಲೆ ಅಧ್ಯಕ್ಷ ಎಸ್. ರಾಘವೇಂದ್ರ ಮಾತನಾಡಿ, ಸ್ಪರ್ಧೆಯಲ್ಲಿ ಗೆಲ್ಲೋದು ಸೋಲೋದು ಮುಖ್ಯ ಅಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವುದೇ ಚಾಂಪಿಯನ್ ಆದಂತೆ ಎಂದು ಶ್ಲಾಘಿಸಿದರು.

ವಿದ್ಯೆ ಚಿನ್ನದ ಗಟ್ಟಿ ಇದ್ದಂತೆ ಸಹಪಠ್ಯ ಚಟುವಟಿಕೆಗಳುಚಿನ್ನದ ಆಭರಣ ವಿದ್ದಂತೆ. ವಿದ್ಯೆಯ ಜೊತೆ ಸಹಪಠ್ಯ ಚಟುವಟಿಕೆಗಳು ಸೇರಿದಾಗ ಮಾತ್ರ ಜೀವನದಲ್ಲಿ ಪ್ರಗತಿ ಸಾಧಿಸಲು ಸಾಧ್ಯ ಎಂದು ತಿಳಿಸಿದರು.

ವಿಜಯ ವಿಠ್ಠಲ ವಿದ್ಯಾಶಾಲೆಯ ಟ್ರಸ್ಟಿ ಸಿ.ಎ. ವಿಶ್ವನಾಥ್ ಅಧ್ಯಕ್ಷತೆವಹಿಸಿ ಮಾತನಾಡಿ,ಚರ್ಚಾ ಸ್ಪರ್ಧೆಗಳು ಮುಂದಿನ ಜೀವನದಲ್ಲಿ ಬಹಳ ಮುಖ್ಯವಾದದ್ದು. ನುಡಿದರೆ ತಮ್ಮ ವಾದವನ್ನು ಮಂಡಿಸುವಂತಿರಬೇಕು, ನುಡಿದರೆ ವಿರೋಧಿಗಳ ವಾದವನ್ನು ಖಂಡಿಸುವಂತಿರಬೇಕು, ನುಡಿದರೆ ತೀರ್ಪುಗಾರರು ಮೆಚ್ಚಿ ಹೌದೌದು ಎನ್ನುವಂತಿರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಜಯ ವಿಠಲ ವಿದ್ಯಾ ಸಂಸ್ಥೆ ಗೌರವ ಕಾರ್ಯದರ್ಶಿ ವಾಸುದೇವ್ ಭಟ್ ಮಾತನಾಡಿ, ಶಿಕ್ಷಣದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕೊನೆಯವರೆಗೂ ಇದ್ದು ತಮ್ಮ ದೋಷಗಳನ್ನು ಇನ್ನೊಬ್ಬರನ್ನು ನೋಡಿ ತಿದ್ದಿಕೊಂಡಾಗ ಜ್ಞಾನ ವೃದ್ಧಿಯಾಗುತ್ತದೆ ಎಂದರು.

ರೋಟರಿ ಅಧ್ಯಕ್ಷ ಎನ್. ಪ್ರವೀಣ್, ಕಾರ್ಯದರ್ಶಿ ಕೆ.ಎನ್. ಸುಹಾಸ್, ವಿಜಯ ವಿಠಲ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲಎಚ್. ಸತ್ಯಪ್ರಸಾದ್,

ವಿಜಯ ವಿಠಲ ವಿದ್ಯಾಶಾಲೆಯ ಪ್ರಾಂಶುಪಾಲೆ ಎಸ್.ಎ. ವೀಣಾ, ವಿವಿಧ ವಿಭಾಗದ ಮುಖ್ಯಸ್ಥರು, ತೀರ್ಪುಗಾರರು, ಪೋಷಕರು, ಮಕ್ಕಳು, ಶಿಕ್ಷಕರು ಇದ್ದರು.