ಸಾರಾಂಶ
ದಾಬಸ್‍ಪೇಟೆ: ರೈತರು ಜಾನುವಾರು ಕಾಲು ಬಾಯಿ ಜ್ವರದಿಂದ ರೋಗ ಮುಕ್ತ ಮಾಡಲು ಸಹಕರಿಸಬೇಕು ಎಂದು ದಾಬಸ್‍ಪೇಟೆ ಪಶು ಆರೋಗ್ಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ.ಪೃಥ್ವಿರಾಜ್ ತಿಳಿಸಿದರು.
ದಾಬಸ್‍ಪೇಟೆ: ರೈತರು ಜಾನುವಾರು ಕಾಲು ಬಾಯಿ ಜ್ವರದಿಂದ ರೋಗ ಮುಕ್ತ ಮಾಡಲು ಸಹಕರಿಸಬೇಕು ಎಂದು ದಾಬಸ್‍ಪೇಟೆ ಪಶು ಆರೋಗ್ಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ.ಪೃಥ್ವಿರಾಜ್ ತಿಳಿಸಿದರು.
ಹೊನ್ನೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ಕಾಲು ಬಾಯಿ ಜ್ವರ ಹಾಗೂ ಚರ್ಮಗಂಟು ರೋಗ ತಡೆ ಕಾರ್ಯಕ್ರಮದಲ್ಲಿ ಜಾನುವಾರುಗಳಿಗೆ ಲಸಿಕೆ ನೀಡಿ ಮಾತನಾಡಿದ ಅವರು, ಕಾಲುಬಾಯಿ ರೋಗ ವೈರಾಣುವಿನಿಂದ ಬರುವ ಅಂಟು ಜಾಡ್ಯ. ಲಸಿಕೆ ಹಾಕುವುದೊಂದೇ ರೋಗ ನಿಯಂತ್ರಿಸಲು ಏಕೈಕ ಮಾರ್ಗ. ಆದ್ದರಿಂದ ರೈತರು ಹಾಗೂ ಹೈನುಗಾರರು ತಪ್ಪದೆ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ: ಪ್ರತಿ 6 ತಿಂಗಳಿಗೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ರೈತರು ತಪ್ಪದೇ ನಿರ್ದಿಷ್ಟ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದು ಕಾಲು ಬಾಯಿ ರೋಗ ನಿಯಂತ್ರಣ ಹಾಗೂ ರೋಗ ನಿರ್ಮೂಲನೆ ಮುಖ್ಯವಾಗಿದ್ದು, ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದರು.
ತಾಲೂಕಿನಲ್ಲಿ 35500 ಜಾನುವಾರು: ನೆಲಮಂಗಲ ತಾಲೂಕಿನಲ್ಲಿ ಒಟ್ಟು 35500 ಜಾನುವಾರುಗಳಿದ್ದು, ಕಾಲು ಬಾಯಿ ಜ್ವರ ಲಸಿಕೆಯನ್ನು 33718 ಜಾನುವಾರುಗಳಿಗೆ ಹಾಗೂ ಚರ್ಮಗಂಟು ರೋಗದ ಲಸಿಕೆಯನ್ನು 33412 ಜಾನುವಾರುಗಳಿಗೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿನ ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾದಿಯರು ಮತ್ತು ಸಿಬ್ಬಂದಿ ರೈತರಿಗೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.ಪೋಟೋ 4 :ಹೊನ್ನೇನಹಳ್ಳಿ ಗ್ರಾಮದಲ್ಲಿ ಕಾಲು ಬಾಯಿ ಜ್ವರ ಹಾಗೂ ಚರ್ಮಗಂಟು ರೋಗ ತಡೆ ಕಾರ್ಯಕ್ರಮದಲ್ಲಿ ದಾಬಸ್‍ಪೇಟೆ ಪಶು ಆರೋಗ್ಯ ಕೇಂದ್ರದ ಪಶುವೈದ್ಯಾಧಿಕಾರಿ ಡಾ.ಪೃಥ್ವಿರಾಜ್ ಜಾನುವಾರುಗಳಿಗೆ ಲಸಿಕೆ ನೀಡಿದರು.