ಏಷ್ಯನ್ ಫೆಡರೇಷನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಮಂಡ್ಯ ಹುಡುಗರು

| Published : Jan 24 2025, 12:48 AM IST

ಏಷ್ಯನ್ ಫೆಡರೇಷನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಪಡೆದ ಮಂಡ್ಯ ಹುಡುಗರು
Share this Article
  • FB
  • TW
  • Linkdin
  • Email

ಸಾರಾಂಶ

ನೇಪಾಳದ ಕಠ್ಮಂಡುವಿನಲ್ಲಿ 2025ರ ಜ.9ರಿಂದ 11ರವರೆಗೆ ನಡೆದ 55 ಕೆ.ಜಿ.ವಿಭಾಗದ ಕಬಡ್ಡಿ ಚಾಂಪಿಯನ್ ಶಿಪ್‌ನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಸ್.ವಿ.ದಿನೇಶ್, ಆಶೀರ್ವಾದ್ ಶಾಲೆ ಆರ್.ರಾಕೇಶ್ ಹಾಗೂ ಬೂಕನಕೆರೆ ಶಾಲೆ ಡಿ.ಆರ್.ವರ್ಷ ಇವರು ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕಗಳಿಸಿರುವುದು ಸಂತಸ ತಂದಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

2024-25ನೇಸಾಲಿನಲ್ಲಿ ಏಷ್ಯನ್ ಫೆಡರೇಷನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಪಡೆದ ತಾಲೂಕಿನ ಮೂವರು ವಿದ್ಯಾರ್ಥಿಗಳನ್ನು ಶಾಸಕ ಎಚ್.ಟಿ.ಮಂಜು ಅಭಿನಂದಿಸಿದರು.

ಪಟ್ಟಣದ ಬಸವೇಶ್ವರ ನಗರ ಬಡಾವಣೆಯ ತಮ್ಮ ಗೃಹ ಕಚೇರಿಯಲ್ಲಿ ಸಾಧಕ ಕ್ರೀಡಾಪಟುಗಳನ್ನು ಅಭಿನಂಧಿಸಿದ ಅವರು, ಕಿರಿಯ ವಯಸ್ಸಿನಲ್ಲಿಯೇ ಕ್ರೀಡೆಯಲ್ಲಿ ಸಾಧನೆ ಮಾಡಿ ತಾಲೂಕಿನ ಕೀರ್ತಿಯನ್ನು ಬಹು ಎತ್ತರಕ್ಕೆ ಹಾರಿಸಿದ ವಿದ್ಯಾರ್ಥಿಗಳನ್ನು ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ನೇಪಾಳದ ಕಠ್ಮಂಡುವಿನಲ್ಲಿ 2025ರ ಜ.9ರಿಂದ 11ರವರೆಗೆ ನಡೆದ 55 ಕೆ.ಜಿ.ವಿಭಾಗದ ಕಬಡ್ಡಿ ಚಾಂಪಿಯನ್ ಶಿಪ್‌ನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಎಸ್.ವಿ.ದಿನೇಶ್, ಆಶೀರ್ವಾದ್ ಶಾಲೆ ಆರ್.ರಾಕೇಶ್ ಹಾಗೂ ಬೂಕನಕೆರೆ ಶಾಲೆ ಡಿ.ಆರ್.ವರ್ಷ ಇವರು ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕಗಳಿಸಿರುವುದು ಸಂತಸ ತಂದಿದೆ ಎಂದರು.

ಸತತ ಪರಿಶ್ರಮ ಮತ್ತು ನಿರಂತರ ಅಭ್ಯಾಸದಿಂದ ಈ ಸಾಧನೆ ಮಾಡಿದ್ದು ಇವರಿಗೆ ಉತ್ತಮ ತರಬೇತಿ ನೀಡಿದ ರವಿಕಿರಣ್ ಪ್ರತಿಭೆಗಳು ಅನಾವರಣಗೊಳ್ಳಲು ಸಹಕಾರ ನೀಡಿದ್ದಾರೆ. ಕ್ರೀಡೆ ಮಾನವನಿಗೆ ದೈಹಿಕ ಬೆಳವಣಿಗೆ ಜೊತೆಗೆ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದರು.

ಮುಂದಿನ ವಿದ್ಯಾಭ್ಯಾಸಕ್ಕೂ ಕ್ರೀಡಾ ಕೋಟಾದ ಅಡಿಯಲ್ಲಿ ಉನ್ನತ ವ್ಯಾಸಂಗಕ್ಕೆ ಅವಕಾಶ ನೀಡಲಾಗಿದೆ. ಮಕ್ಕಳು ಇದನ್ನು ಉಪಯೋಗಿಸಿಕೊಂಡು ಉತ್ತಮ ಸಾಧನೆ ಮಾಡುವ ಮೂಲಕ ತಾಲೂಕು, ಜಿಲ್ಲೆಗೆ ಕೀರ್ತಿ ತರಬೇಕು ಎಂದು ಎಚ್.ಟಿ.ಮಂಜು ಮನವಿ ಮಾಡಿದರು.