ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಏ.೪ಕ್ಕೆ ಕೊನೆಗೊಂಡಂತೆ ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ೮,೭೬,೧೧೨ ಪುರುಷರು, ೯,೦೨,೯೫೯ ಮಹಿಳೆಯರು ಹಾಗೂ ೧೬೮ ಇತರೆ ಮತದಾರರು ಸೇರಿದಂತೆ ಅಂತಿಮವಾಗಿ ೧೭,೭೯,೨೩೯ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.ಮತದಾನಕ್ಕಾಗಿ ೨೦೭೬ ಮತಗಟ್ಟೆ ತೆರೆಯಲಾಗಿದೆ. ೬೯೩ ನಿರ್ಣಾಯಕ ಹಾಗೂ ೩೩ ದುರ್ಬಲ ಮತಗಟ್ಟೆಗಳೆಂದು ಗುರುತಿಸಲಾಗಿದೆ. ೪೦ ಪಿಂಕ್ ಮತಗಟ್ಟೆಗಳನ್ನು ತೆರೆದಿದ್ದು, ೮ ಅಂಗವಿಕಲ, ೧೬ ಸಾಂಪ್ರದಾಯಿಕ, ೧೬ ಯುವ ಮತಗಟ್ಟೆಗಳನ್ನು ತೆರೆಯಲಾಗಿದೆ. ವಿಷಯಾಧಾರಿತ ಮತಗಟ್ಟೆಗಳನ್ನು ತೆರೆಯುವುದಕ್ಕೂ ಚಿಂತನೆ ನಡೆಸಲಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಒಟ್ಟು ಮತಗಟ್ಟೆಗಳಲ್ಲಿ ೧೦೩೭ ಮತಗಟ್ಟೆಗಳಿಗೆ ಸಿಸಿ ಟೀವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಮತದಾನಕ್ಕೆ ವಿಶೇಷ ವ್ಯವಸ್ಥೆ:ವಿಕಲಚೇತನರು ಹಾಗೂ ಹಿರಿಯ ನಾಗರಿಕರಿಗೆ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅನುಕೂಲವಾಗುವಂತೆ ಪ್ರತಿ ಮತಗಟ್ಟೆಗೆ ಇಳಿಜಾರು ವ್ಯವಸ್ಥೆ, ವ್ಹೀಲ್‌ಚೇರ್ ವ್ಯವಸ್ಥೆ ಮಾಡಲಾಗಿದೆ. ದೃಷ್ಟಿದೋಷವುಳ್ಳ ವಿಕಲಚೇತನರಿಗೆ ಬ್ರೈಲ್ ಲಿಪಿಯುಳ್ಳ ವಿದ್ಯುನ್ಮಾನ ಮತಯಂತ್ರ ವ್ಯವಸ್ಥೆ ಹಾಗೂ ಡಮ್ಮಿ ಬ್ರೈಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಶ್ರವಣದೋಷವುಳ್ಳ ವಿಕಲಚೇತನರು ಮತದಾನ ಮಾಡಲು ಅವಶ್ಯಕವಿದ್ದಲ್ಲಿ ಸಂಜ್ಞಾ ಭಾಷೆ ತಜ್ಞರಿಂದ ಸಂಜ್ಞಾ ಭಾಷೆ ಮೂಲಕ ಅವ್ಯಶ್ಯಕ ವ್ಯವಸ್ಥೆ ಮಾಡಲಾಗಿದೆ. ಮಂದದೃಷ್ಟಿಯುಳ್ಳ ವಿಕಲಚೇತನರು ಮತದಾನ ಮಾಡಲು ಮತಕೇಂದ್ರಗಳಲ್ಲಿ ಬೂತಕನ್ನಡಿ ವ್ಯವಸ್ಥೆ ಕಲ್ಪಿಸಿದ್ದು, ಮತದಾನಕ್ಕೆ ವಿಕಲಚೇತನರು ಹಾಗೂ ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಮತ ಚಲಾಯಿಸಲು ಅವಕಾಶ ಒದಗಿಸಿರುವುದಾಗಿ ತಿಳಿಸಿದರು.ಅಂಚೆ ಮತಪತ್ರ ಇರುವುದಿಲ್ಲ:
ಮತಗಟ್ಟೆಗೆ ಬರಲು ಸಾಧ್ಯವಿಲ್ಲದ ತುರ್ತು ಸೇವೆಗೆ ನೇಮಕಗೊಂಡಿರುವವರು, ವಿಕಲಚೇತನರು ಹಾಗೂ ೮೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತಾನ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ತುರ್ತು ಸೇವೆಗಳಿಗೆ ನೇಮಕಗೊಂಡಿರುವ ೧೦೧೭ ಮಂದಿ, ೮೫ ವರ್ಷ ಮೇಲ್ಪಟ್ಟ ೨೫೬೯ ಮಂದಿ ಹಾಗೂ ೧೦೭೫ ಮಂದಿ ಅಂಗವಿಕಲ ಮತದಾರರು ಮನೆಯಿಂದಲೇ ಮತದಾನ ಮಾಡಲಿದ್ದಾರೆ. ಅವರಿಗೆ ನಮೂನೆ-೧೨ ಡಿ ಫಾರಂ ವಿತರಿಸಲಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಯಾವ ಮತದಾರರಿಗೂ ಅಂಚೆ ಮತಪತ್ರದ ವ್ಯವಸ್ಥೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.ವೇತನ ಸಹಿತ ರಜಾ ದಿನ:
ಮತದಾನದ ದಿನದಂದು ಮತ ಚಲಾಯಿಸಲು ಅನುಕೂಲವಾಗುವಂತೆ ಅರ್ಹ ಮತದಾರರಾಗಿರುವ ಎಲ್ಲ ವ್ಯವಹಾರಿಕ, ಔದ್ಯೋಗಿಕ ಹಾಗೂ ಇನ್ನಿತರ ಸಂಸ್ಥೆಗಳಲ್ಲಿ ಕಾಯಂ ಅಥವಾ ದಿನಗೂಲಿ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಪ್ರಜಾಪ್ರತಿನಿಧಿ ಕಾಯ್ದೆ ೧೯೫೧ರ ಕಲಂ ೧೩೫(ಬಿ) ಅಡಿಯಲ್ಲಿ ಎಲ್ಲಾ ಉಪಬಂಧಗಳಿಗೆ ಒಳಪಟ್ಟು ವೇತನಸಹಿತ ರಜೆ ನೀಡಲು ಆದೇಶಿಸಲಾಗಿದೆ ಎಂದರು.ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೭೭೩ ಮಂದಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿದ್ದು, ೭೪೪ ಮಂದಿ ಪೊಲೀಸ್ ಠಾಣೆಯಲ್ಲಿ ಠೇವಣಿ ಇರಿಸಿದ್ದು, ೨೮ ಮಂದಿಗೆ ವಿನಾಯ್ತಿ ನೀಡಲಾಗಿದೆ. ಒಬ್ಬರು ಮಾತ್ರ ಶಸ್ತ್ರಾಸ್ತ್ರ ಠೇವಣಿ ಇಟ್ಟಿಲ್ಲ ಎಂದರಲ್ಲದೇ, ಚುನಾವಣೆಗೆ ಸಂಬಂಧಿಸಿದಂತೆ ೩೨ ದೂರುಗಳು ಬಂದಿದ್ದು, ಅದರಲ್ಲಿ ೨೮ ದೂರುಗಳನ್ನು ವಿಲೇವಾರಿ ಮಾಡಲಾಗಿದೆ. ೪ ದೂರುಗಳು ಬಾಕಿ ಇರುವುದಾಗಿ ತಿಳಿಸಿದರು.
ಮನೆಗಳಿಗೆ ವೋಟರ್ ಸ್ಲಿಪ್:ಮತದಾರರು ಯಾವುದೇ ಆಮಿಷ ಅಥವಾ ಯಾರ ಪ್ರಭಾವಕ್ಕೆ ಒಳಗಾಗದೆ ನಿಷ್ಪಕ್ಷಪಾತ ಹಾಗೂ ನಿರ್ಭೀತಿಯಿಂದ ನೇರವಾಗಿ ಮತಗಟ್ಟೆಗೆ ಹೋಗಿ ಮತ ಚಲಾಯಿಸುವ ವಾತಾವರಣ ಸೃಷ್ಟಿಸಬೇಕಿರುವ ಕಾರಣದಿಂದ ವೋಟರ್ ಸ್ಲಿಪ್‌ಗಳನ್ನು ವಿತರಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಮತದಾರರ ಹೆಸರಿರುವ ಮತಗಟ್ಟೆ ಸಂಖ್ಯೆ, ಕ್ರಮಸಂಖ್ಯೆ, ಮತದಾನದ ದಿನಾಂಕ ಮತ್ತು ಸಮಯವನ್ನು ನಮೂದಿಸಿ ಒದಗಿಸಲು ನಿರ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು ೧೫,೬೦,೪೫೭ ಮತದಾರರಿದ್ದು, ಇವರಿಗೆ ಗ್ರಾಪಂ ಆಡಳಿತಾಧಿಕಾರಿ, ಗ್ರಾಮಸಹಾಯಕ, ಮತಗಟ್ಟೆ ಅಧಿಕಾರಿಗಳ ಮೂಲಕ ವೋಟರ್ ಸ್ಲಿಪ್‌ಗಳನ್ನು ವಿತರಿಸಲಾಗುವುದು ಎಂದರು.
ಮತದಾನಕ್ಕೆ ಆಮಂತ್ರಣ:ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿಯಿಂದ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಏ.೨೬ರಂದು ಪ್ರತಿ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಲು ಪ್ರಜಾಪ್ರಭುತ್ವದ ಮತದಾನ ಹಬ್ಬಕ್ಕೆ ಆಮಂತ್ರಣ ಎಂಬ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಪ್ರತಿ ಕುಟುಂಬಗಳಿಗೆ ನೀಡುವುದಾಗಿ ತಿಳಿಸಿದರು.
ಗೋಷ್ಠಿಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇದ್ದರು.ಮಂಡ್ಯ ಲೋಕಸಭಾ ಕ್ಷೇತ್ರದ ಮತದಾರರ ವಿವರತಾಲೂಕುಪುರುಷರುಮಹಿಳೆಯರುಇತರೆಒಟ್ಟು
ಮಳವಳ್ಳಿ೧೨೬೧೧೮೧೨೭೪೮೭೨೩೨೫೩೬೨೮ಮದ್ದೂರು೧೦೪೨೮೦೧೧೧೪೪೩೨೨೨೧೫೭೪೫
ಮೇಲುಕೋಟೆ೧೦೦೩೭೯೧೦೩೦೧೦೦೯೨೦೩೩೯೮ಮಂಡ್ಯ೧೧೧೮೬೮೧೧೭೭೫೯೩೬೨೨೯೬೬೩
ಶ್ರೀರಂಗಪಟ್ಟಣ೧೦೬೧೫೭೧೧೧೪೨೭೪೪೨೧೭೬೨೮ನಾಗಮಂಗಲ೧೦೭೭೬೦೧೦೮೭೮೩೧೧೨೧೬೫೫೪
ಕೆ.ಆರ್.ಪೇಟೆ೧೧೧೫೪೨೧೧೨೨೮೪೧೧ ೨೨೩೮೩೭ಒಟ್ಟು೭೬೮೧೦೪೭೯೨೧೯೩೧೫೬೧೫೬೦೪೫೩
ಕೆ.ಆರ್.ನಗರ೧೦೮೦೦೮೧೧೦೭೬೬೧೨ ೨೧೮೭೮೬ಒಟ್ಟು೮೭೬೧೧೨೯೦೮೯೫೯೧೬೮೧೭೭೯೨೩೯
---------------------------ವಿತರಿಸಲಾದ ಗುರುತಿನ ಚೀಟಿ ವಿವರ
ತಾಲೂಕುವಿತರಣೆಮಳವಳ್ಳಿ೨೧೫೪
ಮದ್ದೂರು೧೩೧೮ಮಂಡ್ಯ೧೦೯೩
ಶ್ರೀರಂಗಪಟ್ಟಣ೨೦೨೮ನಾಗಮಂಗಲ೧೬೦೦
ಕೆ.ಆರ್.ಪೇಟೆ೧೮೯೧ಕೆ.ಆರ್.ನಗರ೫೨೬
ಒಟ್ಟು೧೩೧೮೮ತನಿಖೆಗೆ ಸೂಚನೆವಿಧಾನ ಪರಿಷತ್ ಸದಸ್ಯರೊಬ್ಬರು ಚುನಾವಣಾ ಅಧಿಕಾರಿಗಳ ಜೊತೆ ಸಭೆ ನಡೆಸಿರುವ ವಿಚಾರವಾಗಿ ನಾಗಮಂಗಲ ಚುನಾವಣಾಧಿಕಾರಿಗೆ ಸೂಚಿಸಿದ್ದೇನೆ. ಅವರು ಸಿಸಿ ಟೀವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ವರದಿ ಬಂದ ಬಳಿಕ ಸಭೆ ನಡೆಸಿರುವುದು ನಿಜವಾಗಿದ್ದಲ್ಲಿ ಕಾನೂನು ರೀತಿ ಕ್ರಮ ಜರುಗಿಸಲಾಗುವುದು.
- ಡಾ.ಕುಮಾರ, ಜಿಲ್ಲಾಧಿಕಾರಿಜೂಜಾಟಕ್ಕೆ ಅವಕಾಶವಿಲ್ಲ
ಮಂಡ್ಯ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ೧೪ ಕೆಎಸ್‌ಆರ್‌ಪಿ ತುಕಡಿಗಳಿಗೆ ಬೇಡಿಕೆ ಇಡಲಾಗಿದೆ. ಅದರಲ್ಲಿ ೧ ತುಕಡಿ ಮಾತ್ರ ಆಗಮಿಸಿದೆ. ಉಳಿದ ತುಕಡಿಗಳ ಆಗಮನದ ನಿರೀಕ್ಷೆಯಲ್ಲಿದ್ದೇವೆ. ಯುಗಾದಿ ಹಿನ್ನೆಲೆಯಲ್ಲಿ ಜೂಜಾಟಕ್ಕೆ ಅವಕಾಶವಿಲ್ಲ. ಜಿಲ್ಲೆಯ ಯಾವುದೇ ಕ್ಲಬ್‌ಗಳಲ್ಲೂ ಜೂಜಾಟಕ್ಕೆ ಅವಕಾಶ ಕಲ್ಪಿಸಿಲ್ಲ.
- ಎನ್.ಯತೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕರುಏ.16, 17, 18ರಂದು ಮನೆಯಿಂದ ಮತದಾನಮಂಡ್ಯ ಲೋಕಸಭಾ ಚುನಾವಣೆಯ ಅಂಗವಾಗಿ 85 ವರ್ಷ ಮೇಲ್ಪಟ್ಟ ಮತದಾರರಿಗೆ ಹಾಗೂ ವಿಕಲಚೇತನರಿಗೆ ಮನೆಯಿಂದ ಮತದಾನದ ವ್ಯವಸ್ಥೆಯನ್ನು ಏ.16, 17 ಹಾಗೂ 18 ರಂದು ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.