ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯಮಂಡ್ಯ ಜಿಲ್ಲೆ ರಾಜಕೀಯವಾಗಿ ಒಕ್ಕಲಿಗರ ಪ್ರಾಬಲ್ಯವನ್ನು ಹೊಂದಿದ್ದು, ಸರಿಸುಮಾರು 8 ಲಕ್ಷದಷ್ಟಿರುವ ಸಮುದಾಯ ಒಗ್ಗಟ್ಟು ಮತ್ತು ರಾಜಕೀಯ ಜಾಗೃತಿಯ ಪರಿಣಾಮ ಒಕ್ಕಲಿಗರೇ ಸಂಸದರಾಗಿ ಆಯ್ಕೆಯಾಗುತ್ತಾ ಬಂದಿರುವುದು ಇತಿಹಾಸವಾಗಿದೆ.ಅಹಿಂದ ಮತ್ತಿತರ ಸಮುದಾಯಗಳ ಮತಸಂಖ್ಯೆ 9 ಲಕ್ಷಕ್ಕೂ ಅಧಿಕಸಂಖ್ಯೆಯಲ್ಲಿದ್ದರೂ ಯಾವುದೇ ಅಹಿಂದ ನಾಯಕ ಸಂಸದರಾಗುವುದಕ್ಕಾಗಲೀ ಅಥವಾ ಚುನಾವಣಾ ಕಣದಲ್ಲಿ ಪ್ರಬಲ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಆದರೆ, ಅಹಿಂದ ಮತಗಳು ಒಗ್ಗೂಡಿ ಬೆಂಬಲಿಸಿದ ಅಭ್ಯರ್ಥಿ ಸುಲಭವಾಗಿ ಸಂಸದರಾಗಿ ಆಯ್ಕೆಯಾಗಿರುವುದಕ್ಕೆ ಹಲವು ಉದಾಹರಣೆಗಳಿವೆ.ಕಾಂಗ್ರೆಸ್ ಗೆಲುವಿಗೆ ಅಹಿಂದ ಕಾರಣ:
ಮಂಡ್ಯ ಜಿಲ್ಲೆಯಲ್ಲಿ ಅಹಿಂದ ಕಾರಣಕ್ಕಾಗಿಯೇ ಕಾಂಗ್ರೆಸ್ ಹೆಚ್ಚು ಬಾರಿ ಗೆಲ್ಲಲು ಸಾಧ್ಯವಾಗಿದೆ. ಯಾವ ಚುನಾವಣೆಯಲ್ಲಿ ಅಹಿಂದ ಮತಗಳು ವಿಭಜನೆಯಾಗಿ ಒಕ್ಕಲಿಗರು ಒಗ್ಗಟ್ಟನ್ನು ಪ್ರದರ್ಶಿಸುತ್ತಾರೋ ಅಂತಹ ಸಮಯದಲ್ಲಿ ಒಕ್ಕಲಿಗರ ರಾಜಕೀಯ ಪ್ರಾತಿನಿಧ್ಯದ ಸಂಸ್ಥೆಯಾಗಿ ಕಂಡುಬರುವ ಜನತಾದಳ ಗೆಲುವು ಸಾಧಿಸಿದೆ. ಆದರೆ, ಎಸ್.ಎಂ.ಕೃಷ್ಣರ ವಿರುದ್ಧ ಕೆ.ವಿ.ಶಂಕರಗೌಡರು, ಜಿ.ಮಾದೇಗೌಡರ ವಿರುದ್ಧ ಅಂಬರೀಶ್ ಹಾಗೂ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ವಿರುದ್ಧ ಚುನಾವಣೆಗಳಲ್ಲಿ ಜಾತಿ ಮತ್ತು ಪಕ್ಷವನ್ನು ಮೀರಿ ಫಲಿತಾಂಶವನ್ನು ತಂದುಕೊಟ್ಟಿವೆ.ಒಕ್ಕಲಿಗರದ್ದೇ ನಾಯಕತ್ವ: ಜಿಲ್ಲೆಯನ್ನು ಹಿಂದಿನಿಂದಲೂ ರಾಜಕೀಯವಾಗಿ ಒಕ್ಕಲಿಗರೇ ನಾಯಕತ್ವವನ್ನು ವಹಿಸಿಕೊಂಡು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅವರನ್ನು ಹೊರತುಪಡಿಸಿದಂತೆ ಬೇರೆ ಸಮುದಾಯದವರು ಲೋಕಸಭೆಗೆ ಆಯ್ಕೆಯಾದ ನಿದರ್ಶನಗಳೇ ಇಲ್ಲ. ಎಲ್ಲ ರಾಜಕೀಯ ಪಕ್ಷಗಳು ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಳಿಸುತ್ತಾ ನಾಯಕತ್ವವನ್ನು ಅದೇ ಸಮುದಾಯದವರಿಗೆ ನೀಡುತ್ತಿದ್ದಾರೆ. ಪ್ರಬಲ ಶಕ್ತಿಯಾಗಿ ನೆಲೆ ನಿಂತಿರುವ ಒಕ್ಕಲಿಗರನ್ನು ಮೀರಿ ಇತರೆ ಜಾತಿಯವರು ರಾಜಕೀಯ ನಾಯಕತ್ವ ವಹಿಸಿಕೊಳ್ಳುವುದಕ್ಕಾಗಲೀ, ಅಭ್ಯರ್ಥಿಗಳಾಗುವುದಕ್ಕಾಗಲೀ ಹಿಂಜರಿಯುತ್ತಿದ್ದಾರೆ. ಒಕ್ಕಲಿಗರಿಗೆ ಎದುರಾಗಿ ನಿಲ್ಲುವುದಕ್ಕೆ ಅವರಿಗೆ ಒಗ್ಗಟ್ಟಿನ ಕೊರತೆ, ನಾಯಕತ್ವದ ಕೊರತೆ ಅವರನ್ನು ಬಹಳವಾಗಿ ಕಾಡುತ್ತಿದೆ. ರಾಜಕೀಯ ಜಾಗೃತಿ ಇಲ್ಲದಿರುವುದರಿಂದ ಒಕ್ಕಲಿಗರೇ ಜಿಲ್ಲೆಯ ಪ್ರಮುಖ ರಾಜಕೀಯ ಶಕ್ತಿ ಎನಿಸಿದ್ದಾರೆ.ಅಹಿಂದ, ಇತರೆ ಜಾತಿಗಳಲ್ಲಿ ಒಗ್ಗಟ್ಟಿಲ್ಲ:ಒಕ್ಕಲಿಗ ಸಮುದಾಯದ ರಾಜಕೀಯ ನಾಯಕರು ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು ಹಾಗೂ ಇತರೆ ಹಿಂದುಳಿದ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ಹಿಂದಿನಿಂದಲೂ ಯಶಸ್ವಿಯಾಗಿದ್ದಾರೆ. ಅದೇ ಮಾದರಿಯಲ್ಲಿ ಒಕ್ಕಲಿಗ ಜನಾಂಗದವರನ್ನು ಹೊರತುಪಡಿಸಿ ಇತರೆ ಜಾತಿಯವರು ಸಂಘಟನಾತ್ಮಕವಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಮುನ್ನಡೆಯುವ, ರಾಜಕೀಯ ಶಕ್ತಿಯಾಗಿ ಬೆಳವಣಿಗೆ ಸಾಧಿಸುವ ಪ್ರಯತ್ನವನ್ನು ನಡೆಸಿಲ್ಲ. ಇದೇ ಕಾರಣಕ್ಕೆ ಇತರೆ ಸಮುದಾಯದವರು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರುವುದಕ್ಕೆ, ನಾಯಕತ್ವ ಸೃಷ್ಟಿಸಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಆಯಾಯ ಜನಾಂಗದವರು ಸಮುದಾಯಕ್ಕೆ ಸೀಮಿತವಾಗಿ ಉಳಿದಿರುವ ಕಾರಣದಿಂದ ಒಕ್ಕಲಿಗರ ಶಕ್ತಿಕೇಂದ್ರದೊಳಗೆ ರಾಜಕೀಯ ಕೋಟೆ ಕಟ್ಟಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ.ಒಕ್ಕಲಿಗರಿಗಷ್ಟೇ ಬೆಂಬಲ: ಯಾವುದೇ ಪಕ್ಷದಿಂದ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕಿಳಿದರೂ ಇತರೆ ಸಮುದಾಯದವರು ಅವರನ್ನು ಬೆಂಬಲಿಸುತ್ತಾರೆ. ಅವರ ಗೆಲುವಿನಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಅವರ ನಾಯಕತ್ವವನ್ನು ಒಪ್ಪಿಕೊಂಡು ಅವರೊಂದಿಗೆ ರಾಜಕೀಯದಲ್ಲಿ ಮುಂದುವರೆಯುತ್ತಾರೆ. ಅಹಿಂದ ಸೇರಿದಂತೆ ಇತರೆ ಹಿಂದುಳಿದ ಜಾತಿಯ ನಾಯಕರು, ಮುಖಂಡರೆಲ್ಲರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಒಕ್ಕಲಿಗ ನಾಯಕರ ಆಶ್ರಯದಲ್ಲೇ ಕಂಡುಕೊಳ್ಳಲು ಬಯಸುತ್ತಾರೆಯೇ ವಿನಃ ಒಕ್ಕಲಿಗ ನಾಯಕತ್ವದಿಂದ ಹೊರಬಂದು ಸ್ವತಂತ್ರವಾಗಿ ನಾಯಕತ್ವ ಕಟ್ಟಿಕೊಳ್ಳುವ ಪ್ರಯತ್ನಕ್ಕೆ ಇದುವರೆಗೂ ಮುಂದಾಗಿಲ್ಲ. ಹಾಗಾಗಿ ಇಂದಿಗೂ ಒಕ್ಕಲಿಗರ ಅಧಿಪತ್ಯ ಜಿಲ್ಲೆಯಲ್ಲಿ ಮುಂದುವರೆದಿದೆ.ಅನ್ಯ ಜಾತಿಯವರ ನಾಯಕತ್ವ ಒಪ್ಪಲ್ಲ:ಒಕ್ಕಲಿಗ ಸಮುದಾಯವನ್ನು ಹೊರತುಪಡಿಸಿ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಅಥವಾ ಇತರೆ ಹಿಂದುಳಿದ ಜಾತಿಯವರ ನಾಯಕತ್ವವನ್ನು ಯಾರೊಬ್ಬರೂ ಒಪ್ಪಿಕೊಳ್ಳುವುದಿಲ್ಲ. ಅವರನ್ನು ಬೆಂಬಲಿಸುವುದೂ ಇಲ್ಲ, ಎಲ್ಲ ಸಮುದಾಯದವರ ನಡುವೆ ಒಗ್ಗಟ್ಟು ಮೂಡುವುದೂ ಇಲ್ಲ. ಇದೇ ಕಾರಣಕ್ಕೆ ನಾಯಕತ್ವ ಬೆಳವಣಿಗೆಗೆ ಅವಕಾಶವಿದ್ದರೂ ಭಯ, ಹಿಂಜರಿಕೆ ಅವರನ್ನು ಕಾಡುತ್ತಿದೆ. ಒಕ್ಕಲಿಗರ ನಾಯಕತ್ವ ಒಪ್ಪಿಕೊಂಡಷ್ಟು ಸುಲಭವಾಗಿ ಇತರೆ ಸಮುದಾಯದವರ ನಾಯಕತ್ವ ಒಪ್ಪಿಕೊಳ್ಳದಿರುವುದರಿಂದಲೇ ಆ ಸಮುದಾಯದ ನಾಯಕತ್ವ ಬೆಳವಣಿಗೆ ಕಾಣದ ಸೊರಗುತ್ತಿದೆ.ಲೋಕಸಭಾ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುವುದರಿಂದ ಒಕ್ಕಲಿಗ ಮತಗಳು ಮೂರು ಪಕ್ಷಕ್ಕೆ ಹರಿದು ಹಂಚಿಹೋಗುತ್ತವೆ. ಆ ಸಮಯದಲ್ಲಿ ಹಿಂದುಳಿದ ಜಾತಿಯ ಮತಗಳು ಗೆಲುವಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಈ ಮತಗಳು ಒಕ್ಕಲಿಗ ನಾಯಕರ ಶಕ್ತಿ-ಸಾಮರ್ಥ್ಯಗಳನ್ನು ಗಟ್ಟಿಗೊಳಿಸುತ್ತಿವೆ. ಜಾತಿವಾರು ಬಲಾಬಲಒಕ್ಕಲಿಗರು - ೭.೫೦ ಲಕ್ಷಮುಸ್ಲಿಮರು - ೮೦ ಸಾವಿರ
ಲಿಂಗಾಯತ - ೭೫ ಸಾವಿರಕುರುಬರು - ೮೦ ಸಾವಿರದಲಿತರು - ೩.೨೦ ಲಕ್ಷಇತರೆ ಹಿಂದುಳಿದವರು - ೩.೫೦ ಲಕ್ಷ