ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಒಂದು ವರ್ಷದ ಅನ್ವಿಕ್ ಚಿಕಿತ್ಸೆಗೆ ಸುಮಾರು ₹25 ಲಕ್ಷ ಹಣದ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ಪೋಷಕರು ವೇದಿಕೆ ನೆರವು ಕೋರಿದ್ದರಿಂದ ಅವರಿಗೆ, ಸಹಾಯ ಹಸ್ತ ಚಾಚುವ ಜೊತೆಗೆ ಮಗು ಹಾಗೂ ಅವರ ಪೋಷಕರ ಜೊತೆಗೂಡಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಗುವಿನ ಆರೋಗ್ಯ ಸುಧಾರಣೆ ದೃಷ್ಟಿಯಿಂದ ಸಹಕಾರ ನೀಡುತ್ತಿದ್ದೇವೆ.
ಶ್ರೀರಂಗಪಟ್ಟಣ: ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಪಟ್ಟಣದ ಕಸಾಬರ ಮಾರಿಗುಡಿ ಬೀದಿ ನಿವಾಸಿ ಮನೋಜ್- ಸಹನಾ ದಂಪತಿಯ ಒಂದು ವರ್ಷದ ಪುತ್ರ ಅನ್ವಿಕ್ ಚಿಕಿತ್ಸಾ ವೆಚ್ಚಕ್ಕಾಗಿ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪೋಷಕರಿಗೆ ಹಸ್ತಾಂತರಿಸಿದರು. ವೇದಿಕೆ ಅಧ್ಯಕ್ಷ ಶಂಕರ್‌ಬಾಬು ಮಾತನಾಡಿ, ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಒಂದು ವರ್ಷದ ಅನ್ವಿಕ್ ಚಿಕಿತ್ಸೆಗೆ ಸುಮಾರು ₹25 ಲಕ್ಷ ಹಣದ ಅವಶ್ಯಕತೆ ಇರುವುದಾಗಿ ವೈದ್ಯರು ತಿಳಿಸಿದ್ದಾರೆ. ಪೋಷಕರು ವೇದಿಕೆ ನೆರವು ಕೋರಿದ್ದರಿಂದ ಅವರಿಗೆ, ಸಹಾಯ ಹಸ್ತ ಚಾಚುವ ಜೊತೆಗೆ ಮಗು ಹಾಗೂ ಅವರ ಪೋಷಕರ ಜೊತೆಗೂಡಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಮಗುವಿನ ಆರೋಗ್ಯ ಸುಧಾರಣೆ ದೃಷ್ಟಿಯಿಂದ ಸಹಕಾರ ನೀಡುತ್ತಿದ್ದೇವೆ ಎಂದರು.
ನಂತರ ರೈತ ಶಾಲೆ ಸಂಸ್ಥಾಪಕ ಗಂಜಾಂ ಸತ್ಯಮೂರ್ತಿ ಹಣ ಸಂಗ್ರಹಣಾ ಹುಂಡಿಗೆ ಹಣ ಹಾಕುವ ಮೂಲಕ ಚಾಲನೆ ನೀಡಿ, ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ಸಾರ್ವಜನಿಕರು, ವಿವಿಧ ಸಂಘಟನೆಗಳು, ಜನಪ್ರತಿನಿಧಿಗಳು, ರಾಜಕಾರಣಗಳು, ಸರ್ಕಾರಿ ನೌಕರರು ಹಾಗೂ ಸಂಘ, ಸಂಸ್ಥೆಗಳು ಉದಾರವಾಗಿ ನೆರವು ನೀಡಿ ಮಾನವೀಯತೆ ಮೆರೆಯುವಂತೆ ಅವರು ಮನವಿ ಮಾಡಿದರು.