28ರಿಂದ ಮಂಗಳಾದೇವಿ ದೇವಾಲಯ ಜಾತ್ರಾ ಮಹೋತ್ಸವ

| Published : Mar 26 2024, 01:02 AM IST

28ರಿಂದ ಮಂಗಳಾದೇವಿ ದೇವಾಲಯ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಪ್ರಸಿದ್ಧ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಏ.1ರಂದು ಮಧ್ಯಾಹ್ನ 12ಕ್ಕೆ ಪೂಜೆಯಾಗಿ ರಥಾರೋಹಣ, ಸಂಜೆ 7ಕ್ಕೆ ರಥೋತ್ಸವ, ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ಶಯನ ನಡೆಯಲಿದೆ. ಏ.2ರಂದು ಬೆಳಗ್ಗೆ ಸೂರ್ಯೋದಯಕ್ಕೆ (6:34ಕ್ಕೆ) ಕವಾಟೊದ್ಘಾಟನೆ ನಡೆಯಲಿದೆ. ಸಂಜೆ 7ಕ್ಕೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.28ರಿಂದ ಏ.2ರವರೆಗೆ ನಡೆಯಲಿದೆ.

ಮಾ.29ರಂದು 108 ತೆಂಗಿನಕಾಯಿ ಗಣಹೋಮ ಜರುಗಲಿದೆ. ಏ.1ರಂದು ಶ್ರೀದೇವಿಯ ಶಯನಕ್ಕೆ ಹೂಗಳನ್ನು ತಂದು ಕೊಡುವವರು ಅದೇ ದಿನ ಸಾಯಂಕಾಲದ ಒಳಗೆ ಕೊಡಬೇಕು. ಏ.2ರಂದು ಬೆಳಗ್ಗೆ 9.30ಕ್ಕೆ ಹರಕೆಯ ತುಲಾಭಾರ ನಡೆಯಲಿದೆ. ಮಾ29, 30ರಂದು ಬೆಳಗ್ಗೆ 9.30ಕ್ಕೆ ಸೀರೆ ಏಲಂ ಮಾಡಲಾಗುವುದು. ಏ.1ರಂದು ಮಧ್ಯಾಹ್ನ 12ಕ್ಕೆ ಪೂಜೆಯಾಗಿ ರಥಾರೋಹಣ, ಸಂಜೆ 7ಕ್ಕೆ ರಥೋತ್ಸವ, ಬಲಿ, ಬಟ್ಟಲು ಕಾಣಿಕೆ ಮಹಾಪೂಜೆ, ಶ್ರೀ ಭೂತಬಲಿ, ಕವಾಟ ಬಂಧನ ಶಯನ ನಡೆಯಲಿದೆ.

ಏ.2ರಂದು ಬೆಳಗ್ಗೆ ಸೂರ್ಯೋದಯಕ್ಕೆ (6:34ಕ್ಕೆ) ಕವಾಟೊದ್ಘಾಟನೆ ನಡೆಯಲಿದೆ. ಸಂಜೆ 7ಕ್ಕೆ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ, ಏ.3ರಂದು ಸಂಪ್ರೋಕ್ಷಣೆ, ಅದೇ ದಿನ ರಾತ್ರಿ 9ಕ್ಕೆ ಶ್ರೀ ಕ್ಷೇತ್ರದ ಪರಿವಾರ ದೈವಗಳಿಗೆ ನೇಮೋತ್ಸವ ಜರುಗಲಿದೆ.

ಜಾತ್ರೋತ್ಸವ ಸಮಯದಲ್ಲಿ ಪ್ರತಿದಿನ ಮಧ್ಯಾಹ್ನ ಮಹಾಪೂಜೆಯ ನಂತರ ಅನ್ನ ಸಂತರ್ಪಣೆ ಇರುತ್ತದೆ. ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಶರವು ದೇವಾಲಯದ ಶಿಲೆಶಿಲೆ ಆ ಡಳಇತ ಮೊಕ್ತೇಸರರು ಮತ್ತು ಅರ್ಚಕ ರಾಘವೇಂದ್ರ ಶಾಸ್ತ್ರಿ ಇದಕ್ಕೆ ಚಾಲನೆ ನೀಡಲಿದ್ದಾರೆ. ಶ್ರೀ ಕ್ಷೇತ್ರದಲ್ಲಿ ನಡೆಯುವ ಅನ್ನ ಸಂತರ್ಪಣೆ, ಸರಳ ವಿವಾಹ, ಸಾಂಸ್ಕೃತಿಕ ಕಾರ್ಯಕ್ರಮ ಇನ್ನಿತರ ಜನಪದ ಚಟುವಟಿಕೆಗಳಿಗಾಗಿ ಅಂದಾಜು 3 ಕೋಟಿ ರು.ವೆಚ್ಚದಲ್ಲಿ ಅನ್ನಛತ್ರ ಕಟ್ಟಲು ಯೋಜನೆ ರೂಪಿಸಲಾಗಿದೆ. ಭಕ್ತಾದಿಗಳು ಸಹಕರಿಸುವಂತೆ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎಂ. ಅರುಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

28ರಿಂದ ವಾರ್ಷಿಕ ಜಾತ್ರಾ ಮಹೋತ್ಸವ:

ಪಕ್ಷಿಕೆರೆ ಸಮೀಪದ ಅತ್ತೂರು ಶ್ರೀ ಅರಸು ಕುಂಜಿರಾಯ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಮಾ.28 ರಿಂದ 31 ರವರೆಗೆ ನಡೆಯಲಿದೆ. 28ರಂದು ಬೆಳಗ್ಗೆ ಭಂಡಾರ ಆಗಮನ, 10.30 ಕ್ಕೆ ಶ್ರೀ ಅರಸು ಕುಂಜಿರಾಯರಿಗೆ ನವಕಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಸಂಜೆ ದೇಲಂತಬೆಟ್ಟು ಗ್ರಾಮದ ಶಿಬರೂರು ಶ್ರೀ ಉಳ್ಳಾಯ ಹಾಗೂ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಕಿಲೆಂಜೂರು ಶ್ರೀ ಸರಳ ಧೂಮಾವತಿ ದೈವದ ಭಂಡಾರ ಆಗಮನ, ಮೂಡ್ರಗುತ್ತು ಶ್ರೀ ಕಾಂತೇರಿ ಧೂಮಾವತಿ- ಬಂಟ ದೈವಗಳ ಭಂಡಾರ ಆಗಮನ, ಕೊಯಿಕುಡೆ ಶ್ರೀ ಜಾರಂದಾಯ ದೈವದ ಬಂಟ ದೈವದ ಭಂಡಾರ ಆಗಮನ, ರಾತ್ರಿ 11 ಗಂಟೆಗೆ ಶ್ರೀ ಅರಸು ಕುಂಜಿರಾಯರ ನೇಮೋತ್ಸವ ನಡೆಯುವುದು.29ರಂದು ಬೆಳಗ್ಗೆ 5ಕ್ಕೆ ಶ್ರೀ ಉಳ್ಳಾಯ ದೈವದ ನೇಮೋತ್ಸವ, ರಾತ್ರಿ 8 ಗಂಟೆಗೆ ಕೊಡಮಣಿತ್ತಾಯ ದೈವದ ನೇಮೋತ್ಸವ, ರಾತ್ರಿ 11 ಗಂಟೆಗೆ ಶ್ರೀ ಕಾಂತೇರಿ ಧೂಮಾವತಿ-ಬಂಟ ದೈವದ ನೇಮೋತ್ಸವ, 30ರಂದು ರಾತ್ರಿ ಶ್ರೀ ಜಾರಂದಾಯ ಬಂಟ ದೈವದ ನೇಮೋತ್ಸವ, ರಾತ್ರಿ ಅತ್ತೂರು‌ ಮಾಗಣೆ ಶ್ರೀ ಕೊರ್ದಬ್ಬು ಶ್ರೀ ಬಂಟ ದೈವಗಳ ಭಂಡಾರ ಆಗಮನ , ಶ್ರೀ ಜಾರಂದಾಯ ಬಂಟ ದೈವಗಳ ಬಂಡಿ ಉತ್ಸವ ಹಾಗೂ ಸೂಟೆದಾರ ಸೇವೆ, 12 ಗಂಟೆಗೆ ಜಾರಂದಾಯ - ಬಂಟ ಹಾಗೂ ಕೋರ್ದಬ್ಬು ಶ್ರೀ ಧೂಮಾವತಿ ದೈವಗಳ ಭೇಟಿ, ರಾತ್ರಿ 1 ಗಂಟೆಗೆ ಶ್ರೀ ಸರಳ ಧೂಮಾವತಿ ಬಂಟ ದೈವದ ನೇಮೋತ್ಸವ, 31ರಂದು ಬೆಳಿಗ್ಗೆ 6 ಕ್ಕೆ ಧ್ವಜಾವರೋಹಣ ಹಾಗೂ ಶ್ರೀ ದೈವಗಳ ಭಂಡಾರ ನಿರ್ಗಮನ ನಡೆಯಲಿದೆ. ಪ್ರತೀ ದಿನ ಮದ್ಯಾಹ್ನ ಮತ್ತು ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.