ಮಂಗಳೂರು: ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಆಡಳಿತ ಕಚೇರಿ ‘ವಿಶ್ವಸೌಧ’ಕ್ಕೆ ಜನಪರ ಸೇವಾ ವಿಶ್ವರೂಪಿ ಸಾಧಕ, ರಾಜ್ಯ ಮತ್ತು ರಾಷ್ಟ್ರದ ಮೊಟ್ಟ ಮೊದಲ ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ೧೯೯೫ ರ ರಾಜ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ, ೨೦೨೪ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ. ಎಸ್. ರಾಜಣ್ಣ ಭೇಟಿ ನೀಡಿದರು. ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ, ಉಪಾಧ್ಯಕ್ಷ ಎ. ಆನಂದ ಆಚಾರ್ಯ, ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ, ನಿರ್ದೇಶಕರಾದ ಕೆ. ಯಜ್ಞೇಶ್ವರ ಆಚಾರ್ಯ, ವೈ.ವಿ. ವಿಶ್ವಜ್ಞಮೂರ್ತಿ, ವಿ.ಜಯ ಆಚಾರ್ ಉಪಸ್ಥಿತಿಯಲ್ಲಿ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.
ಡಾ. ಕೆ. ಎಸ್. ರಾಜಣ್ಣ ಸಂಸ್ಥೆಯ ವಜ್ರಮಹೋತ್ಸವದ ಪ್ರಯುಕ್ತ ಆಯೋಜಿಸಿರುವ 60 ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಪ್ರಶಂಸಿಸಿ ಶುಭ ಹಾರೈಸಿದರು ಮತ್ತು ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಸೊಸೈಟಿಗೆ ಡಾ.ಕೆ.ಎಸ್. ರಾಜಣ್ಣ ಭೇಟಿ
ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ ಆಡಳಿತ ಕಚೇರಿ ‘ವಿಶ್ವಸೌಧ’ಕ್ಕೆ ಜನಪರ ಸೇವಾ ವಿಶ್ವರೂಪಿ ಸಾಧಕ, ರಾಜ್ಯ ಮತ್ತು ರಾಷ್ಟ್ರದ ಮೊಟ್ಟ ಮೊದಲ ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮ ೧೯೯೫ ರ ರಾಜ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ, ೨೦೨೪ರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಕೆ. ಎಸ್. ರಾಜಣ್ಣ ಭೇಟಿ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.