ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಯೆನ್‌ಫಿನಿಟಿ ಕ್ಲಬ್ ವತಿಯಿಂದ ಪ್ರಥಮ ಮತ್ತು ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಎರಡು ದಿನಗಳ “ಫ್ಯೂಷನ್‌ವರ್ಸ್ 1.0” ಹ್ಯಾಕಥಾನ್ ಆಯೋಜಿಸಲಾಗಿತ್ತು. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಮೂಲಭೂತ ಅಂಶಗಳನ್ನು ಪರಿಚಯಿಸುವ ಈ ಕಾರ್ಯಕ್ರಮವು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಉದ್ಘಾಟನೆಗೊಂಡಿತು.

ಮೂಡುಬಿದಿರೆ: ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಯೆನ್‌ಫಿನಿಟಿ ಕ್ಲಬ್ ವತಿಯಿಂದ ಪ್ರಥಮ ಮತ್ತು ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಗಳಿಗೆ ಎರಡು ದಿನಗಳ “ಫ್ಯೂಷನ್‌ವರ್ಸ್ 1.0” ಹ್ಯಾಕಥಾನ್ ಆಯೋಜಿಸಲಾಗಿತ್ತು. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಮೂಲಭೂತ ಅಂಶಗಳನ್ನು ಪರಿಚಯಿಸುವ ಈ ಕಾರ್ಯಕ್ರಮವು ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಉದ್ಘಾಟನೆಗೊಂಡಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಡಾ. ಅಬ್ದುಲ್ ಕರೀಮ್ ವಹಿಸಿದ್ದರು. ಕ್ಯಾಂಪಸ್ ಆಡಳಿತಾಧಿಕಾರಿ ಬಿ. ಮೊಹಮ್ಮದ್ ಶಾಹಿದ್, ಡೀನ್ ಅಕಾಡೆಮಿಕ್ಸ್ ಮತ್ತು ಐಇಇಇ ಶಾಖೆಯ ಕೌನ್ಸಿಲರ್ ಪ್ರೊ. ಡಾ. ಮೆಲ್ವಿನ್ ಡಿಸೋಜಾ ಪೋಷಕರಾಗಿ ಭಾಗವಹಿಸಿ ಬೆಂಬಲ ನೀಡಿದರು.

ಎಐ ಮತ್ತು ಎಂಎಲ್‌ ವಿಭಾಗದ ಮುಖ್ಯಸ್ಥ ಪ್ರೊ. ಡಾ. ರೂಪಿಂದರ್ ಪಾಲ್ ಸಿಂಗ್ ಸಂಘಟನಾ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಪ್ರೊ. ಪ್ರಸನ್ನ ಕುಮಾರ್ ಉದ್ಘಾಟನಾ ಸಮಾರಂಭ ಸಂಯೋಜಿಸಿದರು. ವಿದ್ಯಾರ್ಥಿ ಕಾರ್ತಿಕ್ ಗಣೇಶ್ ಕೊಟ್ಟಾರಿ ನಿರ್ವಹಿಸಿದರು.

ಪ್ರೊ. ಡಾ. ರೂಪಿಂದರ್ ಪಾಲ್ ಸಿಂಗ್ ಸ್ವಾಗತಿಸಿ, ಶಾಲಾ ಹಂತದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಪ್ರಾಯೋಗಿಕ ಜ್ಞಾನ ನೀಡುವಲ್ಲಿ ಫ್ಯೂಷನ್‌ವರ್ಸ್ 1.0ನ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಯೆನ್‌ಫಿನಿಟಿ ಕ್ಲಬ್ ಪದಾಧಿಕಾರಿಗಳನ್ನು ಪರಿಚಯಿಸಲಾಯಿತು. ಅಧ್ಯಕ್ಷೀಯ ಭಾಷಣ ಮಾಡಿದ ಪ್ರೊ. ಡಾ. ಅಬ್ದುಲ್ ಕರೀಮ್, ಕಿರಿಯ ವಿದ್ಯಾರ್ಥಿಗಳಿಗೆ ಉದಯೋನ್ಮುಖ ತಂತ್ರಜ್ಞಾನದ ವ್ಯಾಪ್ತಿ ವಿಸ್ತರಿಸುವ ವಿಭಾಗದ ಪ್ರಯತ್ನವನ್ನು ಶ್ಲಾಘಿಸಿ, ಭಾಗವಹಿಸಿದವರಿಗೆ ಪ್ರೋತ್ಸಾಹ ನೀಡಿದರು. ಪ್ರೊ. ಪ್ರಸನ್ನ ಕುಮಾರ್ ವಂದಿಸಿದರು.