ಸಾರಾಂಶ
ಮಹಿಳಾ ಕಾಂಗ್ರೆಸ್ ವತಿಯಿಂದ ಗೋಪೂಜಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿಕೆಶಿ ಕೂಡ ಭಾಗವಹಿಸಿದರು. ಅಲಂಕೃತ ಗೋವಿಗೆ ಪೂಜೆ ನೆರವೇರಿಸಿ ಆಹಾರ ನೀಡಿದರು.
ಮಂಗಳೂರು : ಮಂಗಳೂರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶನಿವಾರ ನಗರದಲ್ಲಿ ದೀಪಾವಳಿ ಗೋಪೂಜೆ ಅಂಗವಾಗಿ ಗೋವಿಗೆ ಆರತಿ ಎತ್ತಿ, ತಿನ್ನಲು ಆಹಾರ ನೀಡಿ ಗೋಪೂಜೆ ಆಚರಿಸಿದರು.
ನಗರದ ಮರೋಳಿ ಸೂರ್ಯನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು, ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಡಿಸಿಎಂ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ಪ್ರಮುಖರು ಹಾರ, ಶಾಲು ಹಾಕಿ ಸನ್ಮಾನಿಸಿದರು.
ಮಹಿಳಾ ಕಾಂಗ್ರೆಸ್ ವತಿಯಿಂದ ಗೋಪೂಜಾ ಕಾರ್ಯಕ್ರಮ ಆಯೋಜಿಸಲಾಗಿದ್ದು, ಡಿಕೆಶಿ ಕೂಡ ಭಾಗವಹಿಸಿದರು. ಅಲಂಕೃತ ಗೋವಿಗೆ ಪೂಜೆ ನೆರವೇರಿಸಿ ಆಹಾರ ನೀಡಿದರು.
ಕಾಂಗ್ರೆಸ್ ಮುಖಂಡರಾದ ಮಂಜುನಾಥ ಭಂಡಾರಿ, ರಮಾನಾಥ ರೈ, ವಿನಯ ಕುಮಾರ್ ಸೊರಕೆ, ರಕ್ಷಿತ್ ಶಿವರಾಮ್, ಪದ್ಮರಾಜ್ ಆರ್., ಶಶಿಧರ ಹೆಗ್ಡೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೊ ಮತ್ತಿತರರಿದ್ದರು.