ಬೆಳ್ತಂಗಡಿಯ ರೆಂಕೆದಗುತ್ತು ಎಂಬಲ್ಲಿ ಹೈಟೆಕ್ ಮಾದರಿಯಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಕನಸಿನ ಕೂಸು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ

ಬೆಳ್ತಂಗಡಿ: ಬೆಳ್ತಂಗಡಿಯ ರೆಂಕೆದಗುತ್ತು ಎಂಬಲ್ಲಿ ಹೈಟೆಕ್ ಮಾದರಿಯಲ್ಲಿ ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರ ಕನಸಿನ ಕೂಸು ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಕಾರ್ಯಾಚರಿಸುತ್ತಿದೆ.

ಬೆಳ್ತಂಗಡಿ ತಾಲೂಕಿನ ಲ್ಯಾಲ ಪ್ರದೇಶದಲ್ಲಿ 2004ರಲ್ಲಿ ಸ್ಥಾಪನೆಯಾದ ಸಿರಿ ತನ್ನ ವಿಶಿಷ್ಟ ಸಾಮಾಜಿಕ ದೃಷ್ಟಿಕೋನದಿಂದ ವಿಶೇಷ ಸ್ಥಾನ ಪಡೆದಿದೆ.

ವಿಶೇಷ ಅನುಭವ, ಪರಿಣತಿ ಇಲ್ಲದ ಗ್ರಾಮೀಣ ಮಹಿಳೆಯರಿಗೆ ವೇತನ ಸಹಿತವಾಗಿ ಕೌಶಲಾಭಿವೃದ್ಧಿ ತರಬೇತಿ ನೀಡಿ ಅವರಿಂದ ಉತ್ತಮ ಗುಣಮಟ್ಟದ ಸಿದ್ಧ ಉಡುಪು ಉತ್ಪನ್ನ, ಫಿನಾಯಿಲ್, ಅಗರಬತ್ತಿ, ಕೋಕಂ ಜೂಸ್, ಉಪ್ಪಿನಕಾಯಿ ಉತ್ಪನ್ನಗಳು ಸೇರಿದಂತೆ ಹಲವು ಬಗೆಯ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.ಉತ್ಪಾದನಾ ಘಟಕ: ಸಿರಿಯ ವಿವಿಧ ಉತ್ಪಾದನಾ ವಿಭಾಗಗಳು ಒಂದೇ ಸೂರಿನಡಿ ಕಾರ್ಯಾಚರಿಸುವ ನಿಟ್ಟಿನಲ್ಲಿ ಬೆಳ್ತಂಗಡಿಯ ರೆಂಕೆದಗುತ್ತುವಿನಲ್ಲಿ ಬಳಿ 7 ಎಕರೆ ನಿವೇಶನದಲ್ಲಿ 1.50 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಬೃಹತ್ ಕಟ್ಟಡ ನಿರ್ಮಿಸಿ ಅತ್ಯಾಧುನಿಕ ಯಂತ್ರೋಪಕರಣ ಅಳವಡಿಸಿ 2025ರ ಮಾ.20ರಂದು ಕಾರ್ಯಾರಂಭಗೊಂಡಿದೆ. ಸಾವಿರಕ್ಕೂ ಅಧಿಕ ಮಹಿಳಾ ಸಿಬ್ಬಂದಿಗಳನ್ನು ಹೊಂದಿರುವ ಸಿರಿ ಸಂಸ್ಥೆಯಲ್ಲಿ ಗ್ರಾಮೀಣ ಮಹಿಳೆಯರು ಉತ್ಪಾದಿಸುವ ಉತ್ಕೃಷ್ಟ ಗುಣಮಟ್ಟದ ಗೃಹೋಪಯೋಗಿ ಆಹಾರೋತ್ಪನ್ನಗಳು, ಸಿರಿಧಾನ್ಯಗಳು, ಸಿದ್ದ ಉಡುಪುಗಳು, ಅಗರಬತ್ತಿ, ರೆಕ್ಸಿನ್, ಶುಚಿಕಾರಕ ಇತ್ಯಾದಿ ಉತ್ಪನ್ನಗಳನ್ನು ಸಿರಿ ಬ್ರಾಂಡ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಮೂಲಕ ಪ್ರತ್ಯಕ್ಷ್ಯ, ಪರೋಕ್ಷವಾಗಿ 5 ಸಾವಿರಕ್ಕೂ ಹೆಚ್ಚು ಬಡ ಕುಟುಂಬ ಗಳಿಗೆ ಆಶ್ರಯ ನೀಡಿ ಅವರ ಬಾಳು ಹಸನಾಗಿಸುವಲ್ಲಿ ಶ್ರಮಿಸುತ್ತಿದೆ.ಬಸ್ ಸೌಲಭ್ಯ, ವಸತಿಗೃಹ ವ್ಯವಸ್ಥೆ: ಸಿರಿ ಕೇಂದ್ರ ಕಚೇರಿಗೆ ಕೆಲಸಕ್ಕೆ ಆಗಮಿಸುವ ಸಿಬ್ಬಂದಿಗೆ ಎರಡು ಬಸ್‌ಗಳನ್ನು ಉಚಿತವಾಗಿ ಒದಗಿಸಲಾಗಿದೆ. ದೂರದ ಊರುಗಳಿಂದ ಉದ್ಯೋಗಕ್ಕಾಗಿ ಬರುವ ಹೆಣ್ಣುಮಕ್ಕಳಿಗೆ ಸಂಸ್ಥೆಯಲ್ಲಿಯೇ ಮೂಲಸೌಕರ್ಯಗಳನ್ನೊಳಗೊಂಡ ಸುಸಜ್ಜಿತ ಹಾಸ್ಟೆಲ್ ವ್ಯವಸ್ಥೆ ಒದಗಿಸಲಾಗಿದೆ. ಸಿಬ್ಬಂದಿಗೆ 11 ವಸತಿಗೃಹಗಳು, ಜಿಮ್ ಇಕ್ವಿಪ್‌ಮೆಂಟ್ ಕೊಠಡಿ ಮತ್ತು ಮೆಡಿಟೇಷನ್ ಕೊಠಡಿ ಸೌಲಭ್ಯವಿದೆ. ಸಂಸ್ಥೆಯಲ್ಲಿ ಶೇ.90ರಷ್ಟು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿಯ 5 ವರ್ಷ ವಯಸ್ಸಿನೊಳಗಿನ ಪುಟ್ಟ ಮಕ್ಕಳ ಪಾಲನೆಗಾಗಿ ಸಂಸ್ಥೆಯಲ್ಲಿಯೇ ಸುಸಜ್ಜಿತ ಶಿಶುವಿಹಾರದ ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆಯ ಮುಖ್ಯ ಪ್ರವೇಶದ್ವಾರದ ಬಳಿ ಸಿರಿ ಉತ್ಪನ್ನಗಳ ಮಾರಾಟ ಮಳಿಗೆ ಮತ್ತು ಸಿರಿ ಕೆಫೆ ತೆರೆಯಲಾಗಿದೆ.

ಮಾರುಕಟ್ಟೆ ವಿಸ್ತರಣೆ ಯೋಜನೆಸಿರಿ ಸಂಸ್ಥೆ ಉತ್ಪನ್ನಗಳು, ಸಿರಿಧಾನ್ಯಗಳಿಗೆ ರಾಜ್ಯಾದ್ಯಂತ ಉತ್ತಮ ಬಹುಬೇಡಿಕೆ ಇದ್ದು, ಪ್ರಸ್ತುತ ವಾರ್ಷಿಕ 32 ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಎಸ್‌ಕೆಡಿಆರ್‌ಡಿಪಿ ಹಾಗೂ ಸಿರಿ ಸಂಸ್ಥೆ ಸಹಯೋಗದಲ್ಲಿ ರಾಜ್ಯದೆಲ್ಲೆಡೆ ಸಿರಿ ಉತ್ಪನ್ನಗಳ ಮಾರುಕಟ್ಟೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಜನಾರ್ದನ ತಿಳಿಸಿದ್ದಾರೆ.

ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಆಶಾಕಿರಣಐದು ಸಾವಿರ ಕುಟುಂಬಗಳಿಗೆ ನೆರವಾಗಿರುವ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಏಳು ಎಕರೆ ಜಾಗದಲ್ಲಿ ಸಿರಿ ಉತ್ಪನ್ನಗಳ ನೂತನ ಉತ್ಪಾದಕ ಘಟಕರಾಜ್ಯ-ಹೊರ ರಾಜ್ಯದ ಗ್ರಾಹಕರನ್ನೂ ಸೆಳೆಯುತ್ತಿರುವ ಸಿರಿ ಇಂಡಸ್ಟ್ರಿಯಲ್ ಪಾರ್ಕ್14 ಮಳಿಗೆ, 175ಕ್ಕೂ ಹೆಚ್ಚು ವಿತರಕರು ಮತ್ತು 18 ಸೂಪರ್ ಸ್ಟಾಕಿಸ್ಟ್‌ಗಳು