ಸಾರಾಂಶ
ಮಂಗಳೂರು ಗ್ರಾಮಸ್ಥರು ಅದ್ಧೂರಿಯಾಗಿ ಜಾತ್ರೆ ನೆರವೇರಿಸಿದ್ದಾರೆ. ಧಾರ್ಮಿಕತೆಯಲ್ಲಿ ಬದುಕಿನ ಸ್ಥಿರತೆ ಇದೆ. ದೇವಿಯ ಆರಾಧನೆ ಶಕ್ತಿ ನೀಡುತ್ತದೆ.
ಕುಕನೂರು: ಮಂಗಳೂರು ಗ್ರಾಮಸ್ಥರ ಒಗ್ಗಟ್ಟು ಹಾಗೂ ಸಾಮರಸ್ಯದಿಂದ ಶ್ರೀಮಂತವಾಗಿದೆ ಎಂದು ಗ್ರಾಪಂ ಪಿಇಒ ನೀಲಂ ಚಳಗರಿ ಹೇಳಿದರು.
ತಾಲೂಕಿನ ಮಂಗಳೂರು ಗ್ರಾಮದ ಶ್ರೀದುರ್ಗಾದೇವಿಯ ನೂತನ ಗೋಪುರ ಉದ್ಘಾಟನೆ ಮತ್ತು ಜಾತ್ರಾ ಮಹೋತ್ಸವದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ಗ್ರಾಮಸ್ಥರು ಅದ್ಧೂರಿಯಾಗಿ ಜಾತ್ರೆ ನೆರವೇರಿಸಿದ್ದಾರೆ. ಧಾರ್ಮಿಕತೆಯಲ್ಲಿ ಬದುಕಿನ ಸ್ಥಿರತೆ ಇದೆ. ದೇವಿಯ ಆರಾಧನೆ ಶಕ್ತಿ ನೀಡುತ್ತದೆ. ಎಲ್ಲರೂ ಒಟ್ಟುಗೂಡಿ ಜಾತ್ರೆಯಲ್ಲಿ ಭಾಗಿಯಾಗುವುದು ಬದುಕಿನ ಸಂಭ್ರಮದ ಅವಿಸ್ಮರಣೀಯ ಕ್ಷಣಗಳು ಎಂದರು.ಸ್ಥಳೀಯ ಅರಳೇಲೆ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಇಟಗಿಯ ಶಿವಶರಣ ಗದೀಗೆಪ್ಪಜ್ಜನವರು, ಶಿರೂರಿನ ಶ್ರೀ ಬಸವರಾಜ ಪೂಜ್ಯರು ಸಾನ್ನಿಧ್ಯ ವಹಿಸಿದ್ದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ರಾಘವೇಂದ್ರ ಹಳ್ಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಸಕ್ರಪ್ಪ ಚಿನ್ನೂರು, ಗ್ರಾಪಂ ಸದಸ್ಯೆ ಮಂಜುಳಾ ಮಂಗಳೇಶಪ್ಪ ಯತ್ನಟ್ಟಿ, ಸುಮಂಗಲ ಮರಿಯಪ್ಪ ಹಳ್ಳಿ, ಮಂಜುನಾಥ ಆರೇರ್, ಆಂಜನಮ್ಮ ಅಂಬಳಿ, ಶರಣಪ್ಪ ಎಮ್ಮಿ, ರೇವಣಸಿದ್ದಯ್ಯ ಅರಳಲೆಮಠ, ಮಾರುತಿ ಅಳವಂಡಿ, ಅಬ್ದುಲ್ ಸಾಬ್ ಖಾಲಿಮಿರ್ಚಿ, ಶೇಖರಗೌಡ ಮಾಲಿಪಾಟೀಲ್, ಶೇಖರಗೌಡ ಪೊಲೀಸಪಾಟೀಲ್, ಈರಣ್ಣ ಹಳ್ಳಿಕೇರಿ, ಎಂ.ಎ. ದೇಸಾಯಿ, ಸುರೇಶ್ ಮ್ಯಾಗಳೇಶಿ, ಮಂಜುನಾಥ್ ಬಂಡಿ, ವಿರುಪಾಕ್ಷಪ್ಪ ಮಹಾಂತ, ಸುಭಾಷ್ ಕನಕಗಿರಿ, ಮಂಗಳೇಶಪ್ಪ ಬಗನಾಳ, ಸಿದ್ದನಗೌಡ ಪೊಲೀಸ್, ಅಶೋಕ್ ತೋಟದ, ರಾಜಸಾಬ್ ನವಣಕ್ಕಿ,ಈರಪ್ಪ ಹಳ್ಳಿ, ಅಪ್ಪಣ್ಣ ಸುಂಕದ, ಮರಿಸ್ವಾಮಿ ಪೂಜಾರ, ರಾಮಣ್ಣ, ದೇವಸ್ಥಾನದ ಕಮೀಟಿ ಅಧ್ಯಕ್ಷ ಫಕೀರಪ್ಪ ಮೂಲಿಮನಿ ಹಾಗೂ ಸದಸ್ಯರು, ಭಕ್ತರಿದ್ದರು. ಶಿಕ್ಷಕ ಮಾರುತಿ ಹಾದಿಮನಿ ನಿರೂಪಿಸಿದರು. ಪತ್ರಕರ್ತ ರವಿ ನಿಂಗಪ್ಪ ಆಗೋಲಿ ಸ್ವಾಗತಿಸಿದರು.