ಕೊಂಕಣಿ ಸಾಹಿತ್ಯದಲ್ಲಿ ಯುವ ಸಾಹಿತಿಗಳ ಪ್ರತಿಭೆ ಗುರುತಿಸಿ, ಗೌರವಿಸುವ ಕಳೆದ 15 ವರ್ಷಗಳ ಪರಂಪರೆಯ ಅಂಗವಾಗಿ ಅಲಂಗಾರಿನ ಯುವ ಕವಿ ಮತ್ತು ಕಥೆಗಾರ ಗ್ಲ್ಯಾನಿಶ್ ಮಾರ್ಟಿಸ್‌ಗೆ 2026ನೇ ಸಾಲಿನ ಪ್ರತಿಷ್ಠಿತ ಕಿಟಾಳ್ ಯುವ ಪುರಸ್ಕಾರವನ್ನು ಶನಿವಾರ ಸಂಜೆ ನಗರದ ಎಂಸಿಸಿ ಬ್ಯಾಂಕಿನ ಫಿಎಫ್‌ಎಕ್ಸ್ ಸಲ್ಡಾನ್ಹಾ ಸಭಾಂಗಣದಲ್ಲಿ ಅಬುದಾಬಿಯ ಖ್ಯಾತ ಉದ್ಯಮಿ ಮತ್ತು ಕೊಂಕಣಿ ಸಮರ್ಥಕ ಲಿಯೋ ರೊಡ್ರಿಗಸ್ ಪ್ರದಾನ ಮಾಡಿದರು.

ಮಂಗಳೂರು: ಕೊಂಕಣಿ ಸಾಹಿತ್ಯದಲ್ಲಿ ಯುವ ಸಾಹಿತಿಗಳ ಪ್ರತಿಭೆ ಗುರುತಿಸಿ, ಗೌರವಿಸುವ ಕಳೆದ 15 ವರ್ಷಗಳ ಪರಂಪರೆಯ ಅಂಗವಾಗಿ ಅಲಂಗಾರಿನ ಯುವ ಕವಿ ಮತ್ತು ಕಥೆಗಾರ ಗ್ಲ್ಯಾನಿಶ್ ಮಾರ್ಟಿಸ್‌ಗೆ 2026ನೇ ಸಾಲಿನ ಪ್ರತಿಷ್ಠಿತ ಕಿಟಾಳ್ ಯುವ ಪುರಸ್ಕಾರವನ್ನು ಶನಿವಾರ ಸಂಜೆ ನಗರದ ಎಂಸಿಸಿ ಬ್ಯಾಂಕಿನ ಫಿಎಫ್‌ಎಕ್ಸ್ ಸಲ್ಡಾನ್ಹಾ ಸಭಾಂಗಣದಲ್ಲಿ ಅಬುದಾಬಿಯ ಖ್ಯಾತ ಉದ್ಯಮಿ ಮತ್ತು ಕೊಂಕಣಿ ಸಮರ್ಥಕ ಲಿಯೋ ರೊಡ್ರಿಗಸ್ ಪ್ರದಾನ ಮಾಡಿದರು.

ಲಿಯೊ ರೊಡ್ರಿಗಸ್ ಮಾತನಾಡಿ, ಯುವಕರಲ್ಲಿ ಸಮುದಾಯ ಮತ್ತು ಸಾಹಿತ್ಯದತ್ತ ಜವಾಬ್ದಾರಿಯುತ ಮನೋಭಾವ ಬೆಳೆಸುವುದೇ ಪ್ರಶಸ್ತಿಯ ಉದ್ದೇಶ ಎಂದರು.

ವಿದಾನ ಪರಿಷತ್ ಸದಸ್ಯ ಐವನ್ ಡಿಸೊಜಾ, ದೇರೆಬೈಲ್ ಧರ್ಮಕೇಂದ್ರದ ಪ್ರಧಾನಗುರು ರೆ.ಫಾ. ಜೋಸೆಫ್ ಮಾರ್ಟಿಸ್, ಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ, ಕಿಟಾಳ್ ಸಂಪಾದಕ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವಿಮರ್ಶಕ ಎಚ್.ಎಂ.ಪೆರ್ನಾಲ್, ಕೇಂದ್ರ ಸಾಹಿತ್ಯ ಅಕಾಡೆಮಿ ಕೊಂಕಣಿ ಸಲಹಾ ಸಮಿತಿ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್, ಆಯ್ಕೆ ಸಮಿತಿ ಮುಖ್ಯಸ್ಥ ಕವಿ ಟೈಟಸ್ ನೊರೊನ್ಹಾ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ರಮೇಶ್ ನಾಯಕ್ ಮೈರಾ, ಎಂಡಿಎಸ್ ಚ್ಯಾರಿಟೀಸ್‌‌ನ ಪ್ರೊ.ಲೈನಲ್ ಅರಾನ್ಹಾ, ಓಸ್ವಲ್ಡ್ ರೊಡ್ರಿಗಸ್, ಕವಿ ಕಿಶೂ ಬಾರ್ಕೂರು, ಚಿತ್ರ ನಿರ್ದೇಶಕ ಸ್ಟ್ಯಾನಿ ಬೇಳಾ, ಕೆನರಾ ಸಂಪರ್ಕ ಕೇಂದ್ರದ ಫಾ.ಅನಿಲ್ ಐವನ್ ಫರ್ನಾಂಡಿಸ್, ಗ್ಲ್ಯಾನಿಶ್ ಮಾರ್ಟಿಸ್ ಕುಟುಂಬಸ್ಥರು, ಗ್ಲ್ಯಾನಿಶ್ ಪಿಎಚ್‌ಡಿ ಗೈಡ್ ಡಾ.ಸಂತೋಷ್ ಎಲ್.ಗಾಂವ್ಕರ್ ಮತ್ತಿತರರು ಇದ್ದರು.

ಕಿಟಾಳ್ ಸಹ ಸಂಪಾದಕ ಕವಿ ವಿಲ್ಸನ್ ಕಟೀಲ್ ಪುರಸ್ಕ್ರತರ ಸನ್ಮಾನ ಪತ್ರ ವಾಚಿಸಿದರು.

ಕೊಂಕಣಿ ಭಾಷೆ ಮತ್ತು ಕಲೆಯ ಸಂವರ್ಧನೆಗಾಗಿ ಶ್ರಮಿಸಿದ ಹಿರಿಯ ಸಾಧಕರಾದ ಡಾ.ಎವ್ಜಿನ್ ಡಿಸೋಜಾ ಮೂಡುಬೆಳ್ಳೆ ಮತ್ತು ಎಡ್ಡಿ ಸಿಕ್ವೇರಾ ಅವರನ್ನು ಗೌರವಿಸಲಾಯಿತು.