ಪ್ರಭು ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಅಜಿತ್ ಪ್ರಭು ಫೌಂಡೇಶನ್, ಗೌಡ ಸಾರಸ್ವತ ಬ್ರಾಹ್ಮಣರ ವಿದ್ಯಾರ್ಥಿ ವೇತನ ಲೀಗ್ (ಜಿಎಸ್‍ಬಿಎಲ್) ಸಹಯೋಗದೊಂದಿಗೆ 10ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಗರದ ಕೆನರಾ ಹೈಸ್ಕೂಲ್‍ನ ಭುವನೇಂದ್ರ ಸಭಾಂಗಣದಲ್ಲಿ ಭಾನುವಾರ ನಡೆಯಿತು.

ಮಂಗಳೂರು: ಪ್ರಭು ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಅಜಿತ್ ಪ್ರಭು ಫೌಂಡೇಶನ್, ಗೌಡ ಸಾರಸ್ವತ ಬ್ರಾಹ್ಮಣರ ವಿದ್ಯಾರ್ಥಿ ವೇತನ ಲೀಗ್ (ಜಿಎಸ್‍ಬಿಎಲ್) ಸಹಯೋಗದೊಂದಿಗೆ 10ನೇ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಗರದ ಕೆನರಾ ಹೈಸ್ಕೂಲ್‍ನ ಭುವನೇಂದ್ರ ಸಭಾಂಗಣದಲ್ಲಿ ಭಾನುವಾರ ನಡೆಯಿತು.ಕ್ವೆಸ್ಟ್ ಗ್ಲೋಬಲ್‍ನ ಸಹ ಸಂಸ್ಥಾಪಕ ಮತ್ತು ಸಿಇಒ ಅಜಿತ್ ಪ್ರಭು ಪ್ರಾರಂಭಿಸಿದ ಈ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಈ ವರ್ಷ 73 ವಿದ್ಯಾರ್ಥಿಗಳಿಗೆ ಒಟ್ಟು 42 ಲಕ್ಷ ರು. ಮೌಲ್ಯದ ವಿದ್ಯಾರ್ಥಿ ವೇತನ ನೀಡಲಾಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಕ್ವೆಸ್ಟ್ ಗ್ಲೋಬಲ್‍ನ ಸಹ- ಸಂಸ್ಥಾಪಕ ಮತ್ತು ಸಿಇಒ ಅಜಿತ್ ಪ್ರಭು, ಶಿಕ್ಷಣವು ಒಬ್ಬ ವ್ಯಕ್ತಿಯನ್ನು ಮಾತ್ರವಲ್ಲದೆ ಇಡೀ ಕುಟುಂಬ ಮತ್ತು ಸಮುದಾಯವನ್ನು ಪರಿವರ್ತಿಸುವ ಅಸಾಧಾರಣ ಶಕ್ತಿ ಹೊಂದಿದೆ. ವಿದ್ಯಾರ್ಥಿ ವೇತನ ನೀಡುವ ಈ ಉಪಕ್ರಮವು ನನಗೆ ತೀರ ಆಪ್ತವಾದ ವಿಷಯ. ಸಮಾಜದ ಋಣ ತೀರಿಸುವ ಕಾರ್ಯ ಮಾಡುತ್ತಿದ್ದೇನೆ ಎಂದರು.ಇದೇ ಸಂದರ್ಭ ಅಜಿತ್ ಪ್ರಭು ಅವರ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ, ತಮ್ಮ ಜೀವನ ಪ್ರಯಾಣದ ಒಳನೋಟಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಗೆ ಮಿತಿಗಳನ್ನು ಮೀರಿ ಯೋಚಿಸಲು, ಸವಾಲುಗಳನ್ನು ಸ್ವೀಕರಿಸಲು ಮತ್ತು ಶ್ರೇಷ್ಠತೆಯನ್ನು ಅನುಸರಿಸುವಂತೆ ಪ್ರೋತ್ಸಾಹಿಸಿದರು.

ಪ್ರತಿಷ್ಠಾನವು ಈವರೆಗೆ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿದೆ.