ಮಂಗಳೂರು ನಗರದ ಕುಡುಪುಕಟ್ಟೆಯಲ್ಲಿರುವ ಇಸ್ಕಾನ್‌ ಶ್ರೀ ಜಗನ್ನಾಥ ಮಂದಿರದ ವತಿಯಿಂದ ನಗರದಲ್ಲಿ ಗುರುವಾರ ಜಗನ್ನಾಥ ರಥೋತ್ಸವ ನಡೆಯಿತು. ಒಡಿಶಾ ಪುರಿ ಶ್ರೀ ಜಗನ್ನಾಥ ರಥಯಾತ್ರೆಯ ಮಾದರಿಯಲ್ಲಿಯೇ ಈ ರಥಯಾತ್ರೆ ನಡೆಯಿತು.

ಮಂಗಳೂರು ನಗರದ ಕುಡುಪುಕಟ್ಟೆಯಲ್ಲಿರುವ ಇಸ್ಕಾನ್‌ ಶ್ರೀ ಜಗನ್ನಾಥ ಮಂದಿರದ ವತಿಯಿಂದ ನಗರದಲ್ಲಿ ಗುರುವಾರ ಜಗನ್ನಾಥ ರಥೋತ್ಸವ ನಡೆಯಿತು. ಒಡಿಶಾ ಪುರಿ ಶ್ರೀ ಜಗನ್ನಾಥ ರಥಯಾತ್ರೆಯ ಮಾದರಿಯಲ್ಲಿಯೇ ಈ ರಥಯಾತ್ರೆ ನಡೆಯಿತು.

ಶಾಸಕ ವೇದವ್ಯಾಸ್‌ ಕಾಮತ್‌ ನಗರದ ನಾರಾಯಣಗುರು ವೃತ್ತ (ಲೇಡಿಹಿಲ್‌)ದ ಬಳಿ ರಥಯಾತ್ರೆಗೆ ಚಾಲನೆ ನೀಡಿದರು. ರಥೋತ್ಸವ ಲಾಲ್‌ಭಾಗ್‌, ಪಿವಿಎಸ್‌ ವೃತ್ತ, ಕೆ.ಎಸ್‌.ರಾವ್‌ ರಸ್ತೆ, ಹಂಪನಕಟ್ಟೆ, ಕ್ಲಾಕ್‌ ಟವರ್‌ ಆಗಿ ಪುರಭವನ ತಲುಪಿತು. ಗಣ್ಯರು ಸೇರಿದಂತೆ ಭಕ್ತರು ರಥ ಎಳೆದರು. ಪುರಭವನದಲ್ಲಿ ಪ್ರಸಾದ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಗಣ್ಯರು ಸೇರಿದಂತೆ ಇಸ್ಕಾನ್‌ ಕುಡುಪುಕಟ್ಟೆ ಮ್ಯಾನೇಜ್‌ಮೆಂಟ್‌ ಸಮಿತಿಯವರು, ಭಕ್ತರು ಇದ್ದರು.